ಜಿಲ್ಲಾ ಮಂತ್ರಿಗೆ ಸವಾಲ್ ಹಾಕಿದ ಬಿಜೆಪಿ ವಕ್ತಾರ !

0
299

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಾಂಗ್ರೆಸ್ ಆಡಳಿತಕ್ಕೆ ಬಂದರೆ ರಾಜ್ಯ ದ್ರೋಹದ ಸೇಕ್ಷನ್ ೧೨೪ ಎಯನ್ನು ಐಪಿಸಿಯಿಂದ ಕೈ ಬಿಡುತ್ತೆವೆಂದು ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪ್ರಣಾಳಿಕೆ ದೇಶದ ಸುರಕ್ಷತೆಗೆ ತಕ್ಕೆ ತರುವಂತಹದ್ದಾಗಿದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾ ವಕ್ತಾರ ಡಾ. ಎಂ.ಬಿ ಜಿರ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದುರ್ವೈದ ಸಂಗತಿಯಂದರೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವಂತ ಪ್ರಣಾಳಿಕೆಯಲ್ಲಿ ಇಡೀ ಅಖಂಡತೆಗೆ ದಕ್ಕೆ ತರುವ ರೀತಿಯಲ್ಲಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇವತ್ತು ರಾಷ್ಟ್ರದಲ್ಲಿ ರಾಜ್ಯ ದ್ರೋಹದ ಹಾಗೂ ದ್ರೋಹಿಗಳ ಬಗ್ಗೆ ಭಾರತದ ವಿರೋಧವಾಗಿ ಕಾನೂನು ಭಾಹಿರವಾಗಿ ಮಾಡುತ್ತಾರೋ ಅಂತವರನ್ನು ಶೀಕ್ಷಿಸಲಿಕ್ಕೆ . ಇಂಡಿಯನ್ ಪಿನಲ್ ಕೋರ್ಟ್ ೧೨೪ ಕ್ರೀಮಿನಕಲ್ ಕೇಸ್ ದಾಖಲಿಸಬೇಕು. ಆದರೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಐಪಿಸಿಯಿಂದ ಕೈ ಬಿಡುತ್ತೆವೆ. ಇದರು ಅಂತಹವರ ಸಂರಕ್ಷಣೆ ಮಾಡುವ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.
ಸಂವಿಧಾನದ ೩೭೦ ಸೇಕ್ಷೆನ್ ಅನ್ನು ತೆಗೆಯಬೇಕೆಬುವುದು ಇಡೀ ರಾಷ್ಟ್ರದ ಜನರ ಒತ್ತಾಯವಾಗಿದೆ. ಆದರೆ ಕಾಂಗ್ರೆಸ್ ಅದನ್ನೆ ಸಂವಿಧಾನದಲ್ಲಿ ಮುಂದುವರೆಸಿಕೊಂಡು ಹೊಗಲಾಗುತ್ತದೆ ಎಂದು ತಿಳಿಸಿದ್ದಾರೆ. ಅದ್ದರಿಂದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಈ ದೇಶಕ್ಕೆ ದಕ್ಕೆ ತರುವಂತಹದ್ದು, ಅಖಂಡತ್ವವನ್ನು ಒಡೆಯುವಂತದ್ದಾಗಿದೆ. ದೇಶ ದ್ರೋಹಿಗಳನ್ನು ಸಂರಕ್ಷಣೆ ಮಾಡುವ ರೀತಿಯಲ್ಲಿದೆ ಎಂದು ಖಂಡಿಸಿದರು.
ಇನ್ನೂ ಕಾಂಗ್ರೆಸ್ ಒಡೆದ ಮನೆ ಅದರಲ್ಲೂ ಜಿಲ್ಲಾ ಮಂತ್ರಿಗಳು ಎರಡು ಕ್ಷೇತ್ರಗಳನ್ನು ಗೆಲ್ಲುತ್ತೆವೆಂದು ಹೇಳುತ್ತಿದ್ದಿರಿ. ನೀವು ಎಲ್ಲ ಕಾಂಗ್ರೆಸ್ ನಾಯಕರು ಒಂದೇ ವೇದಿಕೆ ಮೇಲೆ ಬಂದು ತೋರಿಸಿ. ಒಂದು ವೇಳೆ ನೀವು ಒಂದೆ ವೇದಿಕೆಯ ಮೇಲೆ ಬಂದರೆ ನಿಮಗೆ ಜ್ಞಾನ ಪೀಠ ಪ್ರಶಸ್ತಿ ಕೊಡುತ್ತೆವೆ ಎಂದು ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ್ ಮೂರು ಹಂತದಲ್ಲಿ ಒಡೆದಿದೆ ಒಲಸಿಗರಿಂದ ಕುಡಿದ ಸಿದ್ದರಾಮಯ್ಯ ಕಾಂಗ್ರೆಸ್,ಡಿಕೆಶಿಯವರ ಜೆಡಿಎಸ್ ಕಾಂಗ್ರೆಸ್ ,ಗುಂಡುರಾವ್ ಅವರ ಒರಜಿನಲ್ ಕಾಂಗ್ರೆಸ್, ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರಿಂದ ಜನರು ಬೆಸತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಈ ಸಂದರ್ಭದಲ್ಲಿ ಹಾಲಿ ಸಂಸದ ಸುರೇಶ ಅಂಗಡಿ, ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡ್ರ, ಬಸವರಾಜ ರೊಟ್ಟಿ ಸೇರಿದಂತೆ ಇತರ ಬಿಜೆಪಿ ಮುಖಂಡರು ಇದ್ದರು.

loading...