ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆ: ನಾಲ್ವರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌

0
12

ನವದೆಹಲಿ:- ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಕೋಲ್ಕತ್ತಾ ಉತ್ತರ, ತಾಮ್ಲುಕ್‌, ಘತಲ್ ಮತ್ತು ಅಸನ್‌ಸೋಲ್‌ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಅತಿ ಹೆಚ್ಚಿನ ಸ್ಥಾನಗಳಿಸಲು ಬಿಜೆಪಿ ಮತ್ತು ಟಿಎಂಸಿ ಬಿರುಸಿನ ಪ್ರಚಾರದಲ್ಲಿ ತೊಡಗಿದೆ.ಕೋಲ್ಕತ್ತಾ ಉತ್ತರಕ್ಕೆ ಸಯ್ಯದ್‌ ಶಾಹಿದ್‌ ಇಮಾಮ್‌, ತಾಮ್ಲುಕ್ ಕ್ಷೇತ್ರಕ್ಕೆ ಲಕ್ಷ್ಮಣ್‌ ಚಂದ್ರ ಸೇಠ್‌, ಘತಲ್‌ ಕ್ಷೇತ್ರದಿಂದ ಖಂದಾಕರ್‌ ಮುಹಮ್ಮದ್ ಸೈಫುಲ್ಲಾ, ಅಸನ್‌ಸೋಲ್‌ನಿಂದ ಬಿಶ್ವರೂಪ್‌ ಮಂಡಲ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 19ಕ್ಕೆ ಮತದಾನ ಮುಕ್ತಾಯವಾಗಲಿದೆ. ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದುವರೆಗೆ ಕಾಂಗ್ರೆಸ್‌ 348 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

loading...