ಚನ್ನಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ

0
12

ಶಿರಹಟ್ಟಿ : ಮಾ.೨೯ರಂದು ಶಿರಹಟ್ಟಿ ತಾಲೂಕಿನ ಚನ್ನಪಟ್ಟಣದ ಗ್ರಾಮಸ್ಥರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಇದಕ್ಕಾಗಿ ಮಂಗಳವಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದಿನ ಪ್ರಸ್ತಾವನೆ ರದ್ದಾಗಿದೆ: ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡು ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ೨೦೧೫ ರಲ್ಲಿಯೇ ಚನ್ನಪಟ್ಟಣವನ್ನು ಕಂದಾಯ ಗ್ರಾಮವನ್ನಾಗಿಸುವುದಕ್ಕೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು, ವಿವಿಧ ಕಾರಣಗಳಿಂದ ಈ ಪ್ರಸ್ತಾವನೆಯು ರದ್ದಾಗಿದೆ. ಆದ್ದರಿಂದ ಚುನಾವಣೆಯು ಮುಗಿದ ನಂತರ ಹೊಸದಾಗಿ ಪ್ರಸ್ತಾವನೆಯನ್ನು ನಿಯಮಾನುಸಾರ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆÃನೆ. ಆದ್ದರಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು. ಉಳಿದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೆÃನೆ ಎಂದರು. ಇದಕ್ಕೂ ಮೊದಲು ಗ್ರಾಮಕ್ಕೆ ಭೇಟಿ ನೀಡಿದ್ದಂತಹ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಪಡಿತರ ವಿತರಣೆಯನ್ನು ಗ್ರಾಮದಲ್ಲಿಯೇ ಮಾಡುವುದಕ್ಕೆ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿದ್ದರು.
ಪಿಎಸ್‌ಐ ತಿಪರೆಡ್ಡಿ, ಗ್ರಾಪಂ ಸದಸ್ಯ ಫಕ್ಕಿÃರಯ್ಯ ಗಡ್ಡದ್ದೆÃವರಮಠ, ಚಂಬಣ್ಣ ಬೆಂತೂರ, ಹುಲಗಪ್ಪ ವಡ್ಡರ ಇದ್ದರು.

loading...