ಯಶಸ್ವಿಯಾಗಿ ಸಂಪನ್ನಗೊಂಡ ಸಹ್ಯಾದ್ರಿ ಸಂಭ್ರಮ – ೨೦೧೯

0
30

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಾರ್ಷಿಕೋತ್ಸವ ‘ಸಹ್ಯಾದ್ರಿ ಸಂಭ್ರಮ-೨೦೧೯’ ಕಾರ್ಯಕ್ರಮವು ಗಾಯನ-ನರ್ತನ-ಕುಂಚ-ಕಾವ್ಯಗಳ ಮೆಳೈಸುವಿಕೆಯಿಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ ಶೆಟ್ಟಿ ಮಾತನಾಡಿ ಎಲ್ಲಿ ಸಾಂಸ್ಕೃತಿಕ ಕ್ಷೆÃತ್ರ ಬಲವರ್ಧನೆಯಾಗುತ್ತದೊ ಅಲ್ಲಿ ಪರಸ್ಪರ ಶಾಂತಿ, ಸಾಮರಸ್ಯ ವೃದ್ದಿಯಾಗಲು ಸಾಧ್ಯ. ಸಹ್ಯಾದ್ರಿ ಲಲಿತಕಲಾ ಕೇಂದ್ರವು ದಾಂಡೇಲಿಯಲ್ಲಿ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಸಾಂಸ್ಕೃತಿಕ ತರಬೇತಿಗಳನ್ನು, ಅದರಲ್ಲೂ ಲಲಿತ ಕಲೆಗಳಿಗೆ ಹಚ್ಚಿನ ಪ್ರೊÃತ್ಸಾಹ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಸಹ್ಯಾದ್ರಿಯಲ್ಲಿ ಭರತ ನಾಟ್ಯ, ಹಿಂದೂಸ್ಥಾನಿ ಸಂಗೀತ, ಚಿತ್ರಕಲೆ, ಕರಾಟೆ ಸೇರಿದಂತೆ ವಿವಿದ ತರಬೇತಿಗಳನ್ನು ಸ್ಥಳೀಯ ಮಕ್ಕಳು ಪಡೆದುಕೊಳ್ಳುತ್ತಿದ್ದು, ಲಲಿತ ಕಲೆಗಳಿಗೆ ಪ್ರೊÃತ್ಸಹ ನೀಡುವುದೇ ನಮ್ಮ ಉದ್ದೆÃಶವಾಗಿದೆ ಎಂದರು.

ವೇದಿಕೆಯಲ್ಲಿ ನಗರದ ಸಮಾಜ ಸೇವಕರಾದ ಐ.ಪಿ. ಘಟಕಾಂಬಳೆ, ಸಾಹಿತಿ ಡಾ. ಆರ್.ಜಿ. ಹಗಡೆ, ನಿವೇತ್ತ ಮುಖ್ಯಾದ್ಯಾಪಕ ಎನ್. ವಿ. ನಾಯ್ಕ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ, ವಕೀಲರ ಸಘದ ಅಧ್ಯಕ್ಷ ಎಸ್. ಸೋಮಕುಮಾರ, ಧಾರವಾಡÀದ ವಿಧೂಶಿ ಪ್ರಮೋದಾ ಉಪಾದ್ಯಾಯ, ಪಂಚಮ ಉಪಾದ್ಯಾಯ ಪಂಡಿತ ಶಂಕರ ಕಬಾಡಿ ವೈಭವ ಭಟ್ಟ, ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ನೃತ್ಯ ಗುರುಗಳಾದ ಸುನೀಲ ಯರಗಟ್ಟಿ, ಪಲ್ಲವಿ ಯರಗಟ್ಟಿ, ಚಿತ್ರಕಲಾ ಶಿಕ್ಷಕಿ ಅಮೃತಾ ಭಟ್ಟ, ಕರಾಟೆ ಗುರು ಲಕ್ಷö್ಮಣ ಹುಲಸ್ವಾರ, ಸಂಗೀತ ಗುರು ಸುಧಾಮ ಭಟ್ಟ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಸುನೀಲ ಯರಗಟ್ಟಿ ಹಾಗೂ ಪಲ್ಲವಿ ಯರಗಟ್ಟಿಯವರ ಗುರುಗಳಾದ ಧಾರವಾಡದ ವಿಧೂಶಿ ಪ್ರಮೋದಾ ಉಪಾದ್ಯಾಯ ದಂಪತಿಗಳಿಗೆ ಗುರುವಂದೆನೆ ಸಲ್ಲಿಸಿದರು. ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳು ಗುರುಗಳಾದ ಸುನೀಲ ಯರಗಟ್ಟಿ ಹಾಗೂ ಪಲ್ಲವಿ ಯರಗಟ್ಟಿಯವರಿಗೆ ಗುರುವಂದನೆ ಸಲ್ಲಿಸಿದರು. ಗುರುಗಳಾದ ಅಮೃತಾ ಹೆಗಡೆ, ಕವಿತಾ ಪೂಜಾರ್, ಲಕ್ಷö್ಮಣ ಹುಲಸ್ವಾರರಿಗೂ ಗುರುವಂದನೆ ನಡೆಯಿತು. ಆರಂಭದಲ್ಲಿ ನಟರಾಜನಿಗೆ ಗೌರವ ಸಲ್ಲಿಸಿ ವಿದ್ಯಾರ್ಥಿಗಳಿಗೆ ಗೆಜ್ಜೆ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಸಂಯೋಜಕಿ ಜಲಜಾ ಬಿ. ವಾಸರೆ ನಿರೂಪಿಸಿ, ವಂದಿಸಿದರು. ಪಾಲಕರಾದ ಪೂಜಾ ನಾಯ್ಕ, ಶ್ರಿÃದೇವಿ ಅಂಬಿಗೇರ, ಜ್ಯೊÃತಿ ಎಡನ್ ಪರಿಚಯಿಸಿದರು. ಸಮಾರೋಪದಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು.
ಇಂಪಾದ ಗಾಯನ: ನರ್ತನ: ಧಾರವಾಡದ ವಿಧೂಶಿ ಪ್ರಮೋದಾ ಉಪಾದ್ಯಾಯವರವ ಗಾಯನ, ಪಂಚಮ ಉಪಾದ್ಯಾಯರ ಮೃದಂಗ, ಪಂಡಿತ ಶಂಕರ ಕಬಾಡಿ ಪಿಟೀಲು, ವೈಭವ ಭಟ್ಟರ ಕೊಳಲು ವಾದನ ಇಂಪಾಗಿತ್ತು. ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳು ಭರತ ನಾಟ್ಯ ಹಾಗೂ ಸಿನಿಮಾ ಹಾಡುಗಳ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಚಿತ್ರಕಲಾ ಶಿಕ್ಷಕಿ ಅಮೃತಾ ಹೆಗಡೆಯವರ ಕಾವ್ಯ-ಕುಂಚ ಪ್ರೆÃಕ್ಷಕರ ಮೆಚ್ಚುಗೆ ಗಳಿಸಿತ್ತು. ರಾಘವೇಂದ್ರ ಗೌಡ, ಸುರೇಶ ಕಾಮತ, ಪ್ರಜ್ಞಾ ಶಾನಭಾಗರು ಇಂಪಾದ ಕೋರೋಕೆ ಗಾಯನ ಪ್ರಸ್ತುತ ಪಡಿಸಿದರು.

ಯೋಧರಿಗೆ ಸಮರ್ಪಣೆ : ಓ ಹುತಾತ್ಮ ಯೋಧರೇ, ನೀವು ಬಿದ್ದ ಮರಗಳಲ್ಲ, ಬಿತ್ತಿದ ಬೀಜಗಳು’ ಎಂಬ ಘೋಷ ವಾಖ್ಯದಡಿಯಲ್ಲಿ ನಡೆದ ಈ ಸಹ್ಯಾದ್ರಿ ಸಂಭ್ರಮವನ್ನು ಯೋಧರಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಅಗಲಿದ ಹುತಾತ್ಮ ಯೋಧರ ಹಾಗೂ ಅಗಲಿದ ಹಿರಿಯ ಸಾಹಿತಿ ಬಿ.ಎ. ಸನದಿ, ಅಗಲಿದ ಯಕ್ಷಗಾನ ಕಲಾವಿದರಾದ ಜಲವಳ್ಳಿ ವೆಂಕೇಟೇಶ ರಾವ್, ಹುಡುಗೋಡ ಚಂದ್ರಹಾಸ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಿದರು.

loading...