ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಾಮಪತ್ರ ಸಲ್ಲಿಕೆ: ಬೃಹತ್ ಮೆರವಣಿಗೆ

0
27

ಕನ್ನಡಮ್ಮ ಸುದ್ದಿ- ಬೆಳಗಾವಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಗುರುವಾರ ಅಧಿಕೃತವಾಗಿ ಜಿಲ್ಲಾ ಬಿಜೆಪಿ ಮುಖಂಡರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಾರ್ವೇಕರ್ ಗಲ್ಲಿಯ ಬಿಜೆಪಿ ಕಚೇರಿಯಿಂದ ಸಮಾದೇವಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬಳಿಕ ಬೃಹತ್ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಕಡೆ ಬಜಾರ್‌, ಶನಿವಾರ ಕೂಟ, ಚನ್ನಮ್ಮ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಡಾ. ವಿಶಾಲ್ ಆರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಅಭಯ ಪಾಟೀಲ್‌ , ಅನಿಲ್ ಬೆನಕೆ, ಮಾಜಿ‌ ಶಾಸಕ ಸಂಜಯ ಪಾಟೀಲ, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ಜಿಲ್ಲಾ ವಕ್ತಾರ ಡಾ. ಎಂ.ಬಿ.ಜಿರಲಿ ಇತರರು ಅಭ್ಯರ್ಥಿ ಸುರೇಶ ಅಂಗಡಿಗೆ ಸಾಥ್ ನೀಡಿದರು.

ಮೆರವಣಿಗೆ ಊದ್ದಕ್ಕೂ ಜಾಂಜ್ ಪಥಕ್, ಡೊಳ್ಳು ಕುಣಿತ ಸೇರಿ‌‌ ವಿವಿಧ‌ ಕಾಲ ತಂಡ ಭಾಗಿಯಾಗಿ ಗಮನ ಸಳೆದವು.‌ರ್ಯಾಲಿ ಊದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಮೋದಿ ಪರ ಘೋಷಣೆ ಕೂಗಿದರು.

loading...