ಉಗ್ರರ ದಾಳಿ, ಸಂಘರ್ಷ: 3 ದಿನದಲ್ಲಿ 60 ಜನರ ಸಾವು

0
956

ಮಾಸ್ಕೊ:ಪಶ್ಚಿಮ ಆಫ್ರಿಕಾದ ಉತ್ತರ ಬುರ್ಕಿನಾ ‍ಫಾಸೋದಲ್ಲಿ ಕಳೆದ ಭಾನುವಾರದಿಂದ ಮಂಗಳವಾರದವರೆಗೆ ನಡೆದ ಉಗ್ರರ ದಾಳಿ ಹಾಗೂ ಸಮುದಾಯಗಳ ನಡುವಿನ ಸಂಘರ್ಷದಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ಒಳಾಡಳಿತ ಸಚಿವ ಸೈಮೆನ್ ಸವಾಡೊಗೊ ಗುರುವಾರ ತಿಳಿಸಿದ್ದಾರೆ.
ಮಾಲಿ ಗಡಿಯಲ್ಲಿನ ಸೌಮ್ ಪ್ರಾಂತ್ ಅರ್ಬಿಂದ ಸಮುದಾಯದ ಮುಖಂಡ ಹಾಗೂ ಆತನ ಇಬ್ಬರು ಸಂಬಂಧಿಗಳನ್ನು ಅಪರಿಚಿತ ಶಸ್ತ್ರಧಾರಿಗಳು ಹತ್ಯೆ ಮಾಡಿದ ಬೆನ್ನಲ್ಲೇ ಕೊರೊಂಬಸ್, ಪ್ಯೂಲ್ಸ್, ಮೋಸಿಸ್ ಸಮುದಾಯದ ನಡುವಿನ ಹಿಂಸಾಚಾರದಲ್ಲಿ 30 ಜನರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಉಗ್ರರಿಂದ 32 ಮಂದಿ ಹತರಾಗಿದ್ದಾರೆ. 9 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ರೇಡಿಯೋ ಫ್ರಾನ್ಸ್ ವರದಿ ಮಾಡಿದೆ.
ಸರ್ಕಾರದ ಪ್ರತಿನಿಧಿಗಳು ಅರ್ಬಿಂದಾ ಪ್ರದೇಶಕ್ಕೆ ಭೇಟಿ ನೀಡಿದ್ದು, ಹಿಂಸಾಚಾರ ನಿಲ್ಲಿಸುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದಾರೆ.
ಅಲ್ ಖೈದಾ ಮತ್ತು ಐಸಿಸ್ ಉಗ್ರರ ಸಂಪರ್ಕ ಹೊಂದಿರುವ ಗುಂಪುಗಳು 2016 ರಿಂದಲೂ ಪಶ್ಚಿಮ ಆಫ್ರಿಕನ್ ರಾಷ್ಟ್ರದಲ್ಲಿ ದಾಳಿ ಮಾಡುತ್ತಿವೆ.

loading...