ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 67 ನಾಮಪತ್ರ ಸಲ್ಲಿಕೆ: ಚುನಾವಣೆ ಮುಂದಕ್ಕೆ ?

0
18

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಒಟ್ಟು 42 ಜನ ಅಭ್ಯರ್ಥಿಗಳ ಪೈಕಿ 67 ನಾಮಪತ್ರ ಸಲ್ಲಿಕೆಯಾಗಿದ್ದು, ಬಹುತೇಕ ಲೋಕಸಭಾ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಬೆಳಗಾವಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ಗುರುವಾರದಂದು ಕೊನೆಯದಿನಂದು ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ, ಸುರೇಶ ಅಂಗಡಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ವಿರುಪಾಕ್ಷಪ್ಪ ಸಾಧುನವರ ಹಾಗೂಪಕ್ಷೇತರ ಅಭ್ಯರ್ಥಿಗಳಾಗಿ ನಂದಾ ಮಾರುತಿ ಕೊಳ್ಳಚವಾಡಕರ, ರನಜೀತ ಕಲ್ಲಪ್ಪ ಪಾಟೀಲ, ಕೃಷ್ಣಕಾಂತ ಕಾಮನ ಬಿರ್ಜೆ, ರಾಮಚಂದ್ರ ದತ್ತೋಬಾ ಪಾಟೀಲ, ಗೋಪಾಲ.ಬಿ.ದೇಸಾಯಿ, ವಿಜಯ ಕೃಷ್ಣಾ ಮಾದರ, ರಾಮಚಂದ್ರ ಕೃಷ್ಣಾ ಗಾಂವಕರ, ಆನಂದ ರಮೇಶ ಪಾಟೀಲ, ಶ್ರೀಕಾಂತ ಬಾಲಕೃಷ್ಣ ಕದಮ, ಸುರೇಶ ಬಸಪ್ಪ ಮರಲಿಂಗನ್ನವರ, ಬದ್ರುದ್ದಿನ ಕಮದೊಡ್ಡ, ಅಶೋಕ ಬಾವಕನ ಚೌಗಲೆ, ನಿತೀನ ದುಂಡಿಯಾ ಆನಂದಾಚೆ, ಲಕ್ಷ್ಮಣ ಸೋಮನಾ ಮೇಲಗೆ, ಪ್ರಕಾಶ ಬಾಳಪ್ಪ ನೇಸರಕರ, ನೀಲಕಂಠ ಎಮ್ ಪಾಟೀಲ, ವಿಶ್ವನಾಥ ರಘುನಾಥ ಭುವಾಜಿ, ಪ್ರನಾಮ ಪ್ರಕಾಶ ಪಾಟೀಲ, ಸಂಜಯ ಶಿವಪ್ಪ ಕಾಂಬಳೆ, ಶಂಕರ ಪೋನಪ್ಪ ಚೌಗಲೆ, ನಾಗೇಶ ಸುಭಾಷ ಬೂಬಾಟೆ, ಸಂದೀಪ ವಸಂತ ಲಾಡ, ಸಚೀನ ಮನೋಹರ ನಿಕಮ, ಗಜಾನನ ಅಮೃತ ಟೋಕಣೇಕರ, ವಿನಾಯಕ ಗೋಪಾಲ ಗುಂಜಟಕರ, ದೀಲಶಾನಮ ಸಿಂಕದರ ತಹಶೀಲ್ದಾರ, ಸುನೀಲ ಲಗಮಣ್ಣ ಗುಡ್ಡಕಾಯು, ಮಾರುತಿ ಸಿದ್ದಪ್ಪ ಚೌಗಲೆ, ಕವಿತಾ ದೀಪಕ ಕೋಲೆ, ರಾಜೇಂದ್ರ ಯಲ್ಲಪ್ಪ ಪಾಟೀಲ, ಅಸಿದೋಶ ಶಶಿಕಾಂತ ಕಾಂಬಳೆ, ಕಲ್ಲಪ್ಪ ಕೃಷ್ಣಾ ಕೋವಾಡಕರ, ರಾಜು ಸಂಗಪ್ಪ ದಿವಟಗೆ, ಸಂಜಯ ಅಶೋಕ ಪಾಟೀಲ, ಪ್ರಭಾಕರ ಭುಜಂಗ ಪಾಟೀಲ, ಸುರೇಶ ಕೇಮಣ್ಣ ರಾಜುಕರ್, ಲಕ್ಷ್ಮೀ ಸುನೀಲ ಮುತಗೇಕರ್, ಖುರಶಿದಬಾನು ಅಸ್ಲಾಂ ನದಾಫ್, ಸಚಿನ ಶಾಂತಾರಾಮ ಕೇಳವೇಕರ, ದಯಾನಂದ ಚಿಕ್ಕಮಠ ಅವರು ನಾಮಪತ್ರವನ್ನು ಸಲ್ಲಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ವಿಶಾಲ್ ಆರ್. ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಬೂದೆಪ್ಪ ಹೆಚ್.ಬಿ ಅವರು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಾಮಪತ್ರಗಳನ್ನು ಸ್ವೀಕರಿಸಿದರು.
ದಿನಾಂಕವಾರು ನಾಮಪತ್ರ ಸಲ್ಲಿಕೆ ವಿವರ:
ಮಾರ್ಚ 28 ರಂದು ಎರಡು ನಾಮಪತ್ರ ಸಲ್ಲಿಕೆ, ಮಾರ್ಚ 29 ರಂದು ಒಂದು ನಾಮಪತ್ರ ಸಲ್ಲಿಕೆ, ಮಾರ್ಚ 30 ರಂದು ಆರು ನಾಮಪತ್ರ ಸಲ್ಲಿಕೆ, ಏಪ್ರಿಲ್ 2 ರಂದು ನಾಲ್ಕು ನಾಮಪತ್ರಗಳು ಸಲ್ಲಿಕೆ, ಏಪ್ರಿಲ್ 3 ರಂದು 20 ನಾಮಪತ್ರಗಳು ಸಲ್ಲಿಕೆ, ಏಪ್ರಿಲ್ 4 ರಂದು 43 ನಾಮಪತ್ರಗಳು ಸಲ್ಲಿಕೆಯಾಗಿರುತ್ತದೆ.

ಪಕ್ಷವಾರು ನಾಮಪತ್ರ ಸಲ್ಲಿಕೆ ವಿವರ:
ಭಾರತೀಯ ಜನತಾ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ನಾಲ್ಕು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಕಾಂಗ್ರೇಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಯಿಂದ ನಾಲ್ಕು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿರುತ್ತದೆ. ಸರ್ವ ಜನತಾ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮ ಪತ್ರ ಸಲ್ಲಿಕೆಯಾಗಿರುತ್ತದೆ. ಬಿ.ಎಸ್.ಪಿ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿರುತ್ತದೆ. ಆರ್.ಪಿ.ಐ ಪಕ್ಷದಿಂದ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿರುತ್ತದೆ. ಪಿ.ಎಸ್.ಪಿ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿರುತ್ತದೆ. ಎನ್.ಡಬ್ಲ್ಯೂ.ಪಿ ಪಕ್ಷದಿಂದ ಒಬ್ಬರು ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿರುತ್ತದೆ. 58 ಪಕ್ಷೇತರ ಅಭ್ಯರ್ಥಿಗಳಿಂದ 62 ನಾಮಪತ್ರಗಳು ಸಲ್ಲಿಕೆಯಾಗಿರುತ್ತದೆ.
ಒಟ್ಟು 67 ಅಭ್ಯರ್ಥಿಗಳಿಂದ ಇಲ್ಲಿಯವರೆಗೆ 76 ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ. ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.

loading...