ಕ್ಯಾಂಪಸ್ ಸಂದರ್ಶನದಲ್ಲಿ ೧೨೪ ವಿದ್ಯಾರ್ಥಿಗಳು ಆಯ್ಕೆ

0
13

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ಇಂಜಿನೀಯರಿಂಗ್ ಕಾಲೇಜಿನ ೨೦೧೮-೧೯ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಒಟ್ಟು ೧೨೪ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕಂಪ್ಯೂಟರ್ ಸೈನ್ಸ ವಿಭಾಗದಲ್ಲಿ ಓದುತ್ತಿರುವ ವೈಶಾಖ ಮೆಹೆಂದಳೆ ಮತ್ತು ಇಲೆಕ್ಟಾçನಿಕ್ಸ ವಿಭಾಗದಲ್ಲಿ ಓದುತ್ತಿರುವ ಗಿರೀಶ ತಬರಡ್ಡಿ ಅವರು ಅಟೋಮೊಬೈಲ್ ಬಿಡಿ ಭಾಗಗಳ ತಯಾರಕೆಯ ಕಂಪನಿಯಾದ ರಾಬರ್ಟ ಬಾಷ್‌ನಲ್ಲಿ ವಾರ್ಷಿಕ ರೂ. ೫ ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಬಹುರಾಷ್ಟಿçÃಯ ಕಂಪನಿಗಳಾದ ಎಸ್‌ಎಲ್‌ಕೆ ಸಾಫ್ಟವೇರ್, ಟಿಸಿಎಸ್, ಟೆಸ್ಸೊಲ್ವ್, ವಿಪ್ರೊÃ, ಇನ್ಫೊÃಸಿಸ್, ಕೋಗ್ನಿಝೆಂಟ್, ಅಟೊಮೋಟಿವ್ ಎಕ್ಸಲ್ಸ್, ಮೈಂಡ್ ಟ್ರಿÃಗಳಲ್ಲಿಯೂ ಸಹ ಮಹಾವಿದ್ಯಾಲಯದ ಹಲವು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕ್ಯಾಂಪಸ್ ಸಂದರ್ಶನದ ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಕಂಪನಿಗಳು ಉದ್ಯೊÃಗಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕಾಲೇಜು ಪ್ರಾಚಾರ್ಯ ಡಾ|| ವಿ.ವಿ. ಕಟ್ಟಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
“ಉದ್ಯೊÃಗ ನೇಮಕಾತಿ ವ್ಯವಸ್ಥೆ ಮತ್ತು ಪರೀಕ್ಷಾ ಫಲಿತಾಂಶಗಳು ಶಿಕ್ಷಣ ಸಂಸ್ಥೆಗಳ ಗುಣಮಟ್ಟನ್ನು ಸೂಚಿಸುತ್ತವೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯವು ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನು ಕ್ಯಾಂಪಸ್ ಸಂದರ್ಶನಕ್ಕೆ ಕರೆತರುವ ಪ್ರಕ್ರಿಯೆಯನ್ನು ಮಾಡುತ್ತಿದೆ. ೨೦೧೮-೧೯ ನೇ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ೨೫ಕ್ಕೂ ಹೆಚ್ಚು ಕಂಪನಿಗಳನ್ನು ಕರೆಸಲಾಗುವುದು ಹಾಗೂ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವ ಆಶಯವನ್ನು ಹೊಂದಿದ್ದೆÃವೆ” ಎಂದು ಅವರು ತಿಳಿಸಿದ್ದಾರೆ.

loading...