ದೇಶಕ್ಕೆ ಡಾ. ಜಗಜೀವನರಾವ್ ಕೊಡುಗೆ ಅಪಾರ

0
50

ದೇಶಕ್ಕೆ ಡಾ. ಜಗಜೀವನರಾವ್ ಕೊಡುಗೆ ಅಪಾರ
ಕನ್ನಡಮ್ಮ ಸುದ್ದಿ-ಗೋಕಾಕ: ಹಸಿರು ಕ್ರಾಂತಿ ಹರಿಕಾರರಾಗಿ ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿ ಡಾ. ಬಾಬುಜಗಜೀವನರಾವ ಅವರು ದೇಶಕ್ಕೆ ಮಹತ್ವದ ಕೋಡುಗೆ ನೀಡಿದ್ದಾರೆಂದು ತಹಸೀಲ್ದಾರ ಪ್ರಕಾಶ ಹೋಳೆಯಪ್ಪಗೋಳ ಹೇಳಿದರು.
ಶುಕ್ರವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಾಜಿ ಉಪಪ್ರಧಾನಿ ಡಾ. ಬಾಬುಜಗಜೀವನರಾವ ಅವರ ೧೧೨ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ. ಬಾಬುಜಗಜೀವನರಾವ ಅವರು ಸಮಾಜದ ಅಂಕು ಡೊಂಕು ತಿದ್ದಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ಅವರ ವಿಚಾರ ಆದರ್ಶಗಳು ಸಮಾಜಕ್ಕೆ ದಾರಿ ದೀಪಗಳಾಗಿವೆ. ಅವುಗಳನ್ನು ಆಚರಣೆಗೆ ತರಬೇಕು. ಅಂದು ದೇಶ ಆಹಾರ ಸಮಸ್ಯೆಯಿಂದ ಬಳಲುತ್ತಿದ್ದಾಗ ಕೃಷಿ ಕ್ಷೆÃತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಜನತೆಯ ಹಸಿವು ನೀಗಿಸಿ ಹಸಿರು ಕ್ರಾಂತಿಯ ಹರಿಕಾರರೇನಿಸಿಕೊಂಡಿದ್ದರೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಭು ಡಿ ಟಿ, ಪ್ರವೀಣ ಎಮ್, ಎಮ್ ಎಚ್ ಅತ್ತಾರ, ಜಿ ಬಿ ಬಳಿಗಾರ, ಅಜೀತ ಮನ್ನಿಕೇರಿ, ಆರ್ ಕೆ ಬಿಸಿರೋಟ್ಟಿ, ಎಮ್ ಎಮ್ ನದಾಫ್, ರಮೇಶ ರೇವಡಿಗಾರ, ಉಪನ್ಯಾಸಕ ಎಸ್ ಡಿ ಮಾಳಗಿ ಮುಖಂಡರಾದ ರಮೇಶ ಮಾದರ, ಸತ್ತೆಪ್ಪ ಖರವಾಡೆ, ಮನೋಹರ ಅಜ್ಜನಕಟ್ಟಿ, ಬಾಳೇಶ ಸಂತವ್ವಗೋಳ, ಕಿರಣ ಶಿವಾಳೆ, ವಸಂತ ರಾಣಪ್ಪಗೋಳ, ದೊಡ್ಡವ್ವ ತಳಗೇರಿ, ನಾಗರಾಜ ಮರೇಪ್ಪಗೋಳ ಸೇರಿದಂತೆ ಇತರರು ಇದ್ದರು.
ಎಮ್ ಡಿ ಡವಳೇಶ್ವರ ಸ್ವಾಗತಿಸಿದರು, ಶ್ರಿÃಕಾಂತ ಸೀಗಿಹೊಳಿ ನಿರೂಪಿಸಿದರು. ಡಿ ಆರ್ ಗೌಡಿ ವಂದಿಸಿದರು.

loading...