ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ

0
4

ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ
ಕನ್ನಡಮ್ಮ ಸುದ್ದಿ-ಬೆಳಗಾವಿ : ನಗರದ ಡಾ. ಪ್ರಭಾಕರ ಕೋರೆ ಕ್ರೆÃಡಿಟ್ ಸೌಹಾರ್ದ ಸಹಕಾರಿಯೂ ಪ್ರಸಕ್ತ ಸಾಲಿನಲ್ಲಿ ೨೯ ಕೋಟಿ ರೂಗಳ ಠೇವಣಿ ಸಂಗ್ರಹಿಸಿ ೧೩೮ ಕೋಟಿ ರೂಗಳ ವಹಿವಾಟು ನಡೆಸಿ, ೨೩ ಲಕ್ಷ ರೂಗಳ ಲಾಭಗಳಿಸಿದೆ,ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ ಎಂದು ಸ್ಥಳೀಯ ಶಾಖಾ ಸಲಹಾ ಸಮೀತಿಯ ಅಧ್ಯಕ್ಷ ಜಯಾನಂದ ಮುನವಳ್ಳಿ ಹೇಳಿದರು.
ಶುಕ್ರವಾರದಂದು ನಗರದ ಡಾ. ಪ್ರಭಾಕರ ಕೋರೆ ಕ್ರೆÃಡಿಟ್ ಸೌಹಾರ್ದ ಸಹಕಾರಿಯ ೮ನೇ ವಾರ್ಷಿಕೋತ್ಸವದ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತ ಈ ಶಾಖೆಯಲ್ಲಿ ಇಸ್ಟಾಂಪ್ ಬಾಂಡ್ ಪೇಪರ್, ಡಿಡಿ, ಆರ್‌ಟಿಜಿಎಸ್ ಸೌಲಭ್ಯವಿದ್ದು ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಸಲಹಾ ಸಮೀತಿಯ ವಿಕ್ರಮ್ ಅಂಗಡಿ, ಮಲ್ಲಿಕಾರ್ಜುನ ಈಟಿ, ಪ್ರಮೋದ ಗುಲ್ಲ, ಅಶೋಕ ಅಂಗಡಿ, ಬಸವರಾಜ, ವ್ಯವಸ್ಥಾಪಕ ಕೆ ಬಿ ಹಳೇಗೌಡರ ಹಾಗೂ ಸಿಬ್ಬಂಧಿಗಳು ಇದ್ದರು.
೦೧೦

loading...