ರಮೇಶ ಜಾರಕಿಹೊಳಿ‌ ಪ್ರಚಾರದಿಂದ ದೂರ ಉಳಿದಿಲ್ಲ: ಸಚಿವ ಸತೀಶ

0
10

ಬೆಳಗಾವಿ
ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಪ್ರಚಾರದಿಂದ ದೂರ ಉಳಿದಿಲ್ಲ. ಕಾರಣಾಂತರಗಳಿಂದ ಅವರು ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಜಿ ಸಚಿವ  ರಮೇಶ ಜಾರಕಿಹೋಳಿ ಪ್ರಚಾರದಿಂದ ದೂರ ಉಳಿದಿಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಬೆಳಗಾವಿ ತಾಲೂಕಿನ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಇಬ್ಬರು ಸಹೋದರರು ಬಹಳ ಉತ್ಸಾಹದಿಂದ ಒಂದಾಗಿದ್ದಿರಿ. ಆದರೆ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಯಾಕೆ ಒಂದಾಗಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯ ಬೇರೆಯದ್ದಾಗಿತ್ತು.ಇತ್ತೀಚಿನ ಬೆಳವಣಿಗೆ ಬೇರೆಯದ್ದಾಗಿದೆ.ಅವರು ಪ್ರಚಾರದಲ್ಲಿ ತೊಡಗದೆ ಇರುವ ಬಗ್ಗೆ ಪಕ್ಷ ಗಮನಿಸಿ ಸಮಸ್ಯೆ ಬಗೆಹರಿಸುತ್ತದೆ ಎಂದರು.
ನಂತರ ಕಿತ್ತೂರಿನಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ, ಅಂತಹ ಯಾವುದೇ ಘಟನೆ ನಡೆದಿಲ್ಲ.ಅರಣ್ಯ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ಬುಡಕಟ್ಟು ಜನಾಂಗದವರಿಗೆ ಮಾತ್ರ ಅರಣ್ಯ ಭೂಮಿ ನೀಡುವ ಬಗ್ಗೆ ಸರ್ಕಾರ ಆದೇಶ ನೀಡಿದೆ ಆ ಮೂಲಕ ಮಾತ್ರ ಭೂಮಿ ನಿಡಲಾಗುವುದು ಒಂದು ವೇಳೆ ಬೇರೆ ಜನರು ಭೂಮಿ ಅಕ್ರಮಿಸಿದರೆ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ಮಾಜಿ ಶಾಸಕ ಫೀರೋಜ್ ಶೇಠ್ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ .ಸಾಧುನವರ ಅವರ ಗೆಲುವು ನಿಶ್ಚಿತ. ಅವರ ಗೆಲುವಿಗಾಗಿ ಎಲ್ಲ ಕಾಂಗ್ರೆಸ್ ಮುಖಂಡರು ಒಂದಾಗಿ ಪ್ರಚಾರ ನಡೆಸುತ್ತಿದ್ದೆವೆ.ಜಿಲ್ಲೆಯ ಮುಖಂಡರಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರ ಕಾಂಗ್ರೇಸ್ ವಶಕ್ಕೆ ಪಡೆಯುವುದೆ ನಮ್ಮೆಲ್ಲರ ಗುರಿಯಾಗಿದೆ ಎಂದು ಹೇಳಿದರು.
loading...