ರಾಮದುರ್ಗದಲ್ಲಿ ಸಾಧುನವರ ಭರ್ಜರಿ ಪ್ರಚಾರ

0
2

ಬೆಳಗಾವಿ
ಬೆಳಗಾವಿ ಲೋಕಸಭಾ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಾಜಿ ಶಾಸಕ ಅಶೋಕ ಪಟ್ಟಣ ಸೇರಿದಂತೆ ರಾಮದುರ್ಗ ತಾಲ್ಲೂಕಿನ ಕಾಂಗ್ರೆಸ್ ನಾಯಕರು ಸಾಧುನವರ ಪರವಾಗಿ ಮತಯಾಚಿಸಿದರು.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ರಾಮದುರ್ಗ ವಿಧಾನಸಭಾ ಕ್ಷೇತ್ರದ ಚಂದರಗಿ,ಗೊಡಚಿ,ನರಸಾಪೂರ ಕಟಕೋಳ ಹನಮಸಾಗರ ಕಿಲ್ಲಾ ತೊರಗಲ್ಲ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅಶೋಕ ಪಟ್ಟಣ ಸಂಸದ ಸುರೇಶ ಅಂಗಡಿ ಅವರಿಗೆ ಹದಿನೈದು ವರ್ಷಗಳಲ್ಲಿ ಒಂದು ರೈಲು ಯೋಜನೆಯನ್ನು ತರಲು ಸಾಧ್ಯವಾಗಿಲ್ಲ. ಅವರ ಸಾಧನೆ ಶೂನ್ಯವಾಗಿದ್ದು. ಈಗ ಮೋದಿ ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದಾರೆ. ಏನಾದರು ಕೆಲಸ ಇದ್ದರೆ ರಾಮದುರ್ಗದ ಜನ ದೆಹಲಿಗೆ ಹೋಗಬೇಕಾ ಎಂದು ಪ್ರಶ್ನಿಸಿದ ಅವರು ಬಿಜೆಪಿ ಜನರಿಗಾಗಿ,ರೈತರಿಗಾಗಿ ಏನೂ ಮಾಡಲಿಲ್ಲ. ಈಗ ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಿದ್ದು, ನಾವೂ ಹಿಂದೂಗಳಾಗಿದ್ದೇವೆ, ಗುರುವಿಗೆ ಗೌರವ ಕೊಡೋದು ಹಿಂದೂ ಸಂಸ್ಕøತಿ ನರೇಂದ್ರ ಮೋದಿ ಲಾಲಕೃಷ್ಣ ಅದ್ವಾನಿ ಜೊತೆ ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದು ದೇಶದ ಜನರಿಗೆ ಗೊತ್ತಾಗಿದೆ ಈ ಬಾರಿ ಮೋದಿ ಅವರ ಸುಳ್ಳು ಭರವಸೆಗಳಿಗೆ ಜನ ಮರಳಾಗುವದಿಲ್ಲ ಎಂದು ಅಶೋಕ ಪಟ್ಟಣ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳೆದ ಆರವತ್ತು ವರ್ಷಗಳಿಂದ ದೇಶವನ್ನು ಅಭಿವೃದ್ಧಿಯಿಂದ ಬೆಳಗಿದೆ, ರಸ್ತೆಗಳ ನಿರ್ಮಾಣ ಸಾವಿರಾರು ಆಣೆಕಟ್ಟುಗಳನ್ನು ನಿರ್ಮಿಸಿದೆ ನೂರಾರು ವಿಶ್ವ ವಿದ್ಯಾಲಯಗಳನ್ನು ನಿರ್ಮಿಸುವದರ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದಲೇ ಭಾರತವನ್ನು ಈಡೀ ಜಗತ್ತು ನೋಡುವಂತಾಗಿದೆ.ಐದು ವರ್ಷದಲ್ಲಿ ನರೇಂದ್ರ ಮೋದಿ ಈ ದೇಶದ ಜನರಿಗೆ,ಬಡವರಿಗೆ,ರೈತರಿಗೆ ಕೊಟಿದ್ದಾದರೂ ಏನು? ಎಂದು ಸಾಧುನವರ ಪ್ರಶ್ನೆ ಮಾಡಿದರು.
ಪ್ರಚಾರದ ಸಭೆಯ ಬಳಿಕ ಅಶೋಕ ಪಟ್ಟಣ ಮತ್ತು ಸಾಧುನವರ ಮನೆ ಮನೆಗೆ ತೆರಳಿ ಮತಯಾಚಿಸಿದರು.

loading...