ಭಾರತದಲ್ಲಿ ಹಸಿರು ಕ್ರಾಂತಿ ಮಾಡಿದವರು ಜಗಜೀವನರಾಮ: ಹೊಸಮನಿ

0
5


ಕನ್ನಡಮ್ಮ ಸುದ್ದಿ
ಭಾರತದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಕೃಷಿ ಸಂಬಂಧ ಉತ್ಪಾದನೆ ಮಹತ್ವ ನೀಡಿದ ಕೀರ್ತಿ ಡಾ. ಬಾಬು ಜಗಜೀವನರಾಮ ಅವರಿಗೆ ಸಲುತ್ತದೆ ಎಂದು ರಾಣಿ ಚನ್ನಮ್ಮ ವಿವಿಯ ಕುಲಪತಿ ಪೆÇ್ರ ಶಿವಾನಂದ ಹೊಸಮನಿ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬುಜಗಜೀವನರಾಮ ಅವರ 122ನೇ ಜಯಂತ್ಸೋವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜನಜೀವನರಾಮ್ ಒಬ್ಬ ನಿಷ್ಠಾವಂತ ವ್ಯಕ್ತಿಯಾಗಿದ್ದರು. ದೇಶ ಕಂಡ ಮಹಾನ್ ವ್ಯಕ್ತಿಯಾಗಿದ್ದರು ಭಾರತಕ್ಕೆ ರಾಜಕೀಯ ರಂಗದಲ್ಲಿ ಅಪಾರ ಕೊಡುಗೆ ನೀಡಿz್ದÁರೆ. ನೆಹರೂ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದರು, ಮೊರಾರ್ಜಿ ದೇಸಾಯಿ ಆಡಳಿತವಧಿಯಲ್ಲಿ ಉಪಪ್ರಧಾನಿ, ರಕ್ಷಣಾ ಮಂತ್ರಿಯಾಗಿ ಸೇವೆ ಸಲ್ಲಿಸಿ ಅಪಾರ ಕೊಡುಗೆ ನೀಡಿz್ದÁರೆ. ವಿದ್ಯಾರ್ಥಿಗಳು ಜಗಜೀವನರಾಮ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿವಿಯ ಕುಲಸಚಿವ ಪೆÇ್ರ ಸಿದ್ದು ಆಲಗೂರ, ಮೌಲ್ಯಮಾಪನ ಸಚಿವ ರಂಗರಾಜ್ ವನದುರ್ಗ ಹಾಗೂ ವಿಶ್ವವಿದ್ಯಾಲಯ ಎಲ್ಲ ಆಡಳಿತ ಮಂಡಳಿ ವಿವಿಯ ವಿಭಾಗದ ಮುಖ್ಯಸ್ಥರು ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರಂಜನ ನಿರೂಪಿಸಿ ವಂದಿಸಿದರು.

loading...