ರಮೇಶ ಜಾರಕಿಹೊಳಿ‌ಗೆ ಟಾಂಗ್ ಕೊಟ್ಟ ಹೆಬ್ಬಾಳ್ಕರ್

0
13


ಬೆಳಗಾವಿ

ನಾಯಕರಿಗೆ ಹಾಗೂ ಕಾರ್ಯಕರ್ಯರಿಗೆ ಪಕ್ಷ ಮುಖ್ಯವಾಗುತ್ತದೆ. ಪಕ್ಷದ ಜತೆಗೆ ಮತದಾರರು ಇರುತ್ತಾರೆ ಹೊರತು, ನಾಯಕರ ಜೊತೆಗೆ ಇರುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಪಕ್ಷ ಇಲ್ಲಿ ಮತದಾರರ ಅವಶ್ಯಕತೆ ಇದೆ. ಪಕ್ಷದೊಂದಿಗೆ ಮತದಾರರು ಇರುತ್ತಾರೆ ಹೊರತು, ನಾಯಕರೊಂದಿಗೆ ಇರುವುದಿಲ್ಲ ಎಂದು ತೀಕ್ಷ್ಣವಾಗಿಯೇ ಹೇಳಿದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಅಸಮಾಧಾನ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೂಲಕ ಅತೃಪ್ತರಿಗೆ ಟಾಂಗ್ ಕೊಟ್ಟರು.
ಈಚೇಗೆ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಪ್ರಚಾರಕ್ಕೆ ಕರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲಖನ್ ಸೇರಿದಂತೆ ಎಲ್ಲರೂ ಪ್ರಚಾರ ಮಾಡುತ್ತಾರೆ. ಎಲ್ಲರೂ ನಮ್ಮ ಜತೆಗೆ ಇರುವುದರಿಂದ ಯಾವುದೇ ತೊಂದರೆ ಇಲ್ಲ ಎಂದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೆದ್ದರೆ ಸತೀಶ್‌ಗೆ ಕ್ರೆಡಿಟ್ ಹೋಗುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಆಧಾರದ ಮೇಲೆ ಮತ ನೀಡುತ್ತಾರೆ ವ್ಯಕ್ತಿಗತ ಅಲ್ಲ. ಜಿಲ್ಲೆಯ ಮುಖಂಡರು ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜತೆ ಮಾತನಾಡುತ್ತಿಲ್ಲ ಎಂಬುದು ಸಮರ್ಥಿಸಿಕೊಂಡ ಅವರು, ನಾವು ಮಾತಾಡದಿದ್ದರೂ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ, ಸಭೆಗೆ ಅವರ ಮಗ ಮೃನಾಲ್ ಹಾಜರಾಗಿದ್ದಾರೆ ಎಂದರು.
ಸಚಿವ ಸತೀಶ್ ಜತೆ ಶಾಸಕ ರಮೇಶ್ ಜಾರಕಿಹೊಳಿ ಮುನಿಸು ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇಬ್ಬರ ನಡುವೆ ಯಾವುದೇ ಭಿನ್ನಮತ ಇಲ್ಲ, ಮೊದಲು ಹೇಗಿದ್ದಿವಿ ಈಗಲೂ ಹಾಗೇ ಇದ್ದಿವೆ. ರಾಜಕೀಯವಾಗಿ ಸಂಘಟನೆ ವಿಚಾರ ಬಂದಾಗ ಮಾತ್ರ ರಮೇಶ್ ನಾನು ಕುಡುತ್ತೇವೆ ಹೊರತು, ಬೇರೆ ಬೇರೆ ವಿಚಾರ ಬಂದಾಗ ನಾವು ಕುಡುವುದಿಲ್ಲ ಎಂದು ಹೇಳುವ ಮೂಲಕ ಸಹೋದರ ರಮೇಶ್ ಜತೆಗಿನ ಸಂಬಂದ ಸರಿಯಿಲ್ಲ ಎಂಬುವುದನ್ನು ಹೊರ ಹಾಕಿರು.
ರಮೇಶ್ ಜಾರಕಿಹೊಳಿ ಅವರು ಸತೀಶ್ ಮೇಲೆ ಕೆಂಡಾಮಂಡಲ ಆಗುತ್ತಿದ್ದಾರೆ ಎಂಬ ವಿಚಾರವಾಗಿಲ್ಲ ಪ್ರತಿಕ್ರಿಯಿಸಿ, ರಮೇಶ್ ಬಯ್ಯೊದೆನೂ ಹೊಸದಲ್ಲ. ದೆಹಲಿ ಹೈಕಮಾಂಡ್ ಹಿಡುದು ಎಲ್ಲರಿಗೂ ಬೈಯುತ್ತಾನೆ. ರಮೇಶ್ ಜಾರಕಿಹೊಳಿ ಬೈದರೆ ಗ್ರ್ಯಾಂಟೆಡ್ ಎಂದರು.
ಕೇವಲ ಹಿಂದುತ್ವ, ಮತ್ತು ಕಾಶ್ಮಿರ್ ದಾಳಿ ಇವೆರೆಡೆ ಬಿಜೆಪಿಗೆ ಅಜೆಂಡಾವಾಗಿದೆ ಹೊರತು, ರೈತರ, ಉದ್ಯೋಗ ಸೃಷ್ಠಿ ಬಗ್ಗೆ ಗಮನ ಇಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಹಾಲಿ ಸುರೇಶ ಅಂಗಡಿ ಕಳೆದ ೧೫ ವರ್ಷದ ಸಾಧನೆ ಎನೂ ಇಲ್ಲ. ಕೇವಲ ರೆಲ್ವೆ ಓವರ ಬ್ರಿಡ್ಜ ಮೇಲೆ ಅಷ್ಟೇ ಅವರನ್ನು ನಾವು ಕಾಣಬಹುದು. ಅವರು ಮಾಡಿರುವ ಯಾವುದೆ ಕಾಮಗಾರಿಗಳಿಲ್ಲ, ಎಲ್ಲಾ ನಾನೆ ಮಾಡಿಸಿದ್ದನೆ ಅಂತ ಪೋಸ್ ಕೊಡುತ್ತಾರೆ. ಬೆಳಗಾವಿಯ ಮೂರೂ ರೆಲ್ವೆ ಓವರ ಬ್ರಿಡ್ಜಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮವಾಗಿ ಅನುದಾನ ನೀಡಿವೆ. ಮೋದಿ ಅವರನ್ನ ವಿದೇಶದಲ್ಲಿ ಹೇಗೆ ನೋಡುತ್ತೆವೆ, ಹಾಗೆ ಸುರೇಶ ಅಂಗಡಿ ಅವರನ್ನ ರೆಲ್ವೆ ಓವರ ಬ್ರಿಡ್ಜ ಮೆಲೆ ನೋಡಬೇಕಷ್ಟೆ, ರೈತರ ಸಮಸ್ಯಗಳಿಗೆ, ಮಹದಾಯಿ ಹೋರಾಟಕ್ಕೆ ಸಾಥ್ ಕೊಟ್ಟಿಲ್ಲ. ಅವರ ಸಾದನೆ ಕೇವಲ ಪತ್ರಿಕೆಗಳಲ್ಲಿ ಅಷ್ಟೆ, ಈ ಬಾರಿ ನನಗೆ ನೋಡಬೇಡಿ ಮೋದಿಗೆ ನೋಡಿ ಓಟು ಹಾಕಿ ಎಂದು ಮತದಾರರಿಗೆ ಹೇಳುತ್ತಿದ್ದಾರೆ. ಮೋದಿ ಅವರು ದೇಶದ ಜನರನ್ನು ಹುಚ್ಚರನ್ನಾಗಿ ಮಾಡಿದ್ದಾರೆ. ಮೋದಿ?ಅವರು ೨೦೧೪ ರಲ್ಲಿ ಕೈ ಎತ್ತಿ ಭಾಷಣ ಮಾಡುತ್ತಿದ್ದರು, ಈ ಬಾರಿ ಕೈ ಎತ್ತಿ ಭಾಷಣ ಮಾಡಲಿಕ್ಕೆ ಮೋದಿ ಹತ್ತಿರ ತಾಕತ್ತು ಇಲ್ಲ. ಮೋದಿ ಅವರ ಕೈಯಲ್ಲಿ ದೇಶವನ್ನ ಕೊಡಬಾರದು, ಮತ್ತೆ ದೇಶವನ್ನು ಮೋದಿ ಅವರ ಕೈಯಲ್ಲಿ ಕೊಟ್ಟರೆ ಮತ್ತೆ ಎನಾದರೂ ಸಮಸ್ಯ ಆಗುವಂತೆ ಮಾಡುತ್ತಾರೆ. ಜನರ ಹತ್ತಿರ ಹೋಗಲು ಮೋದಿ ಅವರು ಹಿಂಜರಿಯುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಮೋದಿಗೆ ಟಾಂಗ್ ನೀಡಿದ್ದಾರೆ.

loading...