ರಾಜ್ಯದ ಗಮನ ಸೆಳೆದ ಹುಕ್ಕೇರಿ ಹಿರೇಮಠ : ಶ್ರೀಗಳ ಸಾನಿಧ್ಯದಲ್ಲಿ 22ಜನ ದೇಹದಾನ

0
36

ಕನ್ನಡಮ್ಮ‌ಸುದ್ದಿ:ಬೆಳಗಾವಿ : ಮಠಮಾನ್ಯಗಳೆಂದರೆ ಪೂಜೆ, ಪಾರಾಯಣ , ಅನ್ನದಾಸೋಹ ನಡೆಯುವುದು ಸರ್ವೆ ಸಾಮಾನ್ಯ ಆದರೆ ಬೆಳಗಾವಿಯ ಹುಕ್ಕೇರಿ ಹಿರೇಮಠ ಇವುಗಳೆಲ್ಲದರ ಜೊತೆ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಸಮಾಜ ಮುಖಿ ಕೆಲಸದೊಂದಿಗೆ ರಾಜ್ಯದ ಇತರ ಮಠಗಳಿಗೆ ಮಾದರಿಯಾಗಿದೆ.

ಬೆಳಗಾವಿ ನಗರದ ಹುಕ್ಕೇರಿ ಹಿರೇಮಠವು ವೈದ್ಯಕೀಯ ವಿದ್ಯಾರ್ಥಿ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಗಮನ ಸೆಳೆಯುವಂತಹ ಮಹತ್ವದ ಕಾರ್ಯವೊಂದನ್ನು ರವಿವಾರ ಕೈಗೊಂಡಿದೆ.

ಹುಕ್ಕೇರಿ ಹಿರೇಮಠದಲ್ಲಿ ಪಂಚಾಚಾರ್ಯ ಯುಗ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀಗಳ ಸಾನಿದ್ಯದಲ್ಲಿ ಬರೊಬ್ಬರಿ 22 ಜನ ದೇಹದಾನ ಇಬ್ಬರು ಅಂಗಾಗ ದಾನ ಮಾಡುವ ಒಪ್ಪಿಗೆ ಪತ್ರ ಕ್ಕೆ ಸಹಿ ಹಾಕುವ ಮೂಲಕ ಮಾನವ ಕುಲಕ್ಕೆ ‌ಮಾದರಿಯಾಗಿದ್ದಾರೆ. ಇನ್ನೊಂದಡೆ ರಾಜ್ಯದ ಎಲ್ಲ ಮಠ ಮಾನ್ಯಗಳಿಗೆ ಹುಕ್ಕೇರಿ ಹಿರೇಮಠ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬರಿ ಮಠಗಳ ಅನ್ನದಸೋಹ ಪೂಜೆ ಅಷ್ಟೇ ಸಿಮಿತವಾಗದೆ ಸಮಾಜ ಮುಖಿ ಕೆಲಸ‌ ಆಗಬೇಕು ಎನ್ನುವ ಸಂದೇಶವನ್ನು‌ ನೀಡಿದೆ.

ಇದೇ ವೇಳೆ ದೇಹದಾನ ಮಾಡಲು ಪತ್ರಕ್ಕೆ ಸಹಿ ಹಾಕಿದ ಇಬ್ಬರು ಮೂಲತಾ ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದ ಡಾ.ಎಸ್.ಎಂ ಕುಲಕರ್ಣಿ ದಂಪತಿಗಳು ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ದೇಹದ ಕೊರತೆ ಇದೆ.ನಮ್ಮ ಮಕ್ಕಳು ಸಹ ಅಧ್ಯಯನ ಸಮಯದಲ್ಲಿ ಅನುಭವವಿದ ಸಮಸ್ಯೆಯ ನ್ನು ಇಂದಿನ ಮಕ್ಕಳು ಅನುಭವಿಸಬಾರದು. ಈ ದೇಹ ಮಣ್ಣಿಗೆ ಸೇರುವ ಬದಲು ವಿದ್ಯಾರ್ಥಿ ಅಧ್ಯಯನ ಕ್ಕೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಶ್ರೀಗಳ ಸಾನಿಧ್ಯದಲ್ಲಿ ದೇಹ ದಾನ ಮಾಡಿದ್ದೆವೆ ಎಂದು ಹೇಳಿದರು.

ಅಲ್ಲದೆ ಇದೇ ಸಂದರ್ಭ ದಲ್ಲಿ ದೇಹ,ಅಂಗಾಗ ಚರ್ಮದಾನ ಮಾಡಿದ ಒಟ್ಟು 24ಜನರು ಹುಕ್ಕೇರಿ ಹಿರೇಮಠ ದ ಶ್ರೀಗ ಸಾನಿಧ್ಯದಲ್ಲಿ ದಾನ ಮಾಡಿದ ಹಿನ್ನಲೆಯಲ್ಲಿ ಎಲ್ಲರಿಗಳು ಶ್ರೀಗಳು ಸನ್ಮಾನ ಮಾಡುವ ಮೂಲಕ ಗೌರವಿಸಿದರು.
ಇನ್ನೂ ಬೆಳಗಾವಿಯ ಭೀಮ್ಸ ಮತ್ತು ಕೆಎಲ್ಇ ಆಸ್ಪತ್ರೆಗೆ ದೇಹದಾನ ಮಾಡಲು ದಾನಿಗಳು ನಿರ್ಧರಿಸಿದ್ದಾರೆ.

ಒಟ್ಟಾರೆ ಯಾಗಿ ಬೆಳಗಾವಿಯ ಹುಕ್ಕೇರಿ ಹಿರೇಮಠ ಸಮಾಜ ಮುಖಿ ಕೆಲಸ‌ ಮಾಡುವ ಮೂಲಕ ರಾಜ್ಯದ ಗಮನ ಸೆಳೆಯುವುದರ ಜೊತೆಗೆ ಮಾನವ ಕುಲಕ್ಕೆ ಹಾಗೂ ಎಲ್ಲ ಮಠಗಳಿಗೆ ಒಳ್ಳೆಯ ಸಂದೇಶ ನೀಡಿದೆ.

loading...