ಹೆಲ್ಮೆಟ್ ಗೆ ತೋರಿಸಿದ ಕಾಳಜಿ‌ ಮೀಟರ್ ಮೇಲೆ ಏಕೆ ಇಲ್ಲ ?

0
26

ಹಿರೇಮಠ ಆರ್.ಕೆ.
ಬೆಳಗಾವಿ
ರಾಜ್ಯದ ಎರಡನೇ ರಾಜ್ಯಧಾನಿ ಮೆಟ್ರೋಪಾಲಿಟನ್ ಸಿಟಿಯಾಗಿ ಬೆಳವಣಿಗೆಯಾಗುತ್ತಿರುವ ಬೆಳಗಾವಿ ನಗರದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸುವ ಕಾರ್ಯಾಚರಣೆ ಬಲು ಜೋರಾಗಿ ನಡೆಯುತ್ತಿದೆ.
ನಗರದ ಸಂಚಾರಿ ಪೊಲೀಸ ತಂಡ ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರ ವಾಹನ ತಡೆದು ದಂಡು ವಿಧಿಸುತ್ತಿರುವ ದೃಶ್ಯ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿದೆ.
ಬೆಳಗಾವಿ ನಗರ ಪೊಲೀಸರು ಹೆಲ್ಮೆಟ್ ಕಡ್ಡಾಯವನ್ನು‌ ನೂರಕ್ಕೆ ನೂರರಷ್ಟು ಕಡ್ಡಾಯಗೊಳಿಸಲು ಕಳೆದ ಎರಡು ವಾರಗಳಿಂದ ನಗರದಲ್ಲಿ‌ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ದಂಡ ವಸೂಲಿ ಮಾಡುವುದರ‌ ಮೂಲಕ ನಗರ ಪೊಲೀಸರು ವಿಶೇಷ ಸಾಧನೆಗೈದಿದ್ದಾರೆ.
ಬೆಳಗಾವಿ‌ ನಗರದಲ್ಲಿ ಪೊಲೀಸ್ ಆಯುಕ್ತರ ಸೂಚನೆ ಮೆರೆಗೆ ಹೆಲ್ಮೆಟ್ ಕಡ್ಡಾಯದ ಅನುಷ್ಠಾನ‌ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಹೆಲ್ಮೆಟ್ ಹಾಕದ ದ್ವಿಚಕ್ರವಾಹನ ಸವಾರರಿಂದ ಈಗಾಗಲೇ.. ರು. ದಂಡ ವಸೂಲಿ ಮಾಡಲಾಗಿದೆ
ಸಂಚಾರಿ ಪೊಲೀಸರು ಸ್ಥಳದಲ್ಲಿಯೇ ದಂಡ ವಸೂಲಿ ಮಾಡುವುದರ ಜತೆಗೆ ಹೆಲ್ಮೆಟ್ ಹಾಕದ ಸವಾರರನ್ನು ‌ಸಿಸಿ ಟಿವಿ ಕ್ಯಾಮರಾ ಮೂಲಕ‌ ಗುರುತಿಸಿ‌ ಅವರ ಮನೆಗೆ ನೋಟಿಸ್ ಕಳುಹಿಸಿ ದಂಡ ವಸೂಲಿ ಮಾಡುತ್ತಿರುವುದು ವಿಶೇಷವಾಗಿದೆ.
ಬೆಳಗಾವಿ‌ನಗರದಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಗರದ ಪ್ರಮುಖ ನಾಲ್ಕು ದಿಕ್ಕುಗಳ ಪ್ರಮಜಖ ರಸ್ಯೆ ಹಾಗೋ ಒಳ ರಸ್ತೆಯಲ್ಲಿ ಹೆಲ್ಮೆಟ್ ಹಾಕದ‌ ಸವಾರರು‌ ಸಿಕ್ಕಿ‌ಬಿದ್ದು ದಂಡ ಪಾವತಿ ಮಾಡುತ್ತಿದ್ದಾರೆ.
ದ್ವಿಚಕ್ರ ವಾಹನ ಸವಾರರು‌ ಮನೆಯಿಂದ ಹೊರ ಬಿಳುವ ಮುನ್ನ ತಲೆಗೆ ಹೆಲ್ಮೆಟ್ ಹಾಕಿ‌ ಬೈಕಿನ‌ ಕಿಕ್ ಹೊಡೆಯುವುದು ಒಳ್ಳೆಯದು ಓಈ ವಿಷಯದಲ್ಲಿ ಮೈ ಮರೆತರೆ ದಂಡ ತುಂಬಿ ಕಿಸೆ ಕಾಲಿಯಾಗುವುದು‌ ನಿಶ್ಚಿತ.

……

ಮೀಟರ್ ಕಡ್ಡಾಯ ಎಂದು?

ಬೆಳಗಾವಿ‌ ನಗರದಲ್ಲಿ ಹೆಲ್ಮೆಟ್ ಕಡ್ಡಾಯವನ್ನು‌ ಅನುಷ್ಠಾನ ಪರಿಣಾಮಕಾರಿಯಾಗಿ ಮಾಡುತ್ತಿರುವ ಪೊಲೀಸರು ಆಟೋ ಮೀಟರ್ ಕಡ್ಡಾಯ ಎಂದು ಎನ್ನುವ ಪ್ರಶ್ನೆ ಬೆಳಗಾವಿ‌ ಜನತೆಯನ್ನು ಕಾಡುತ್ತಿದೆ.

ಬೆಳಗಾವಿ ಪೊಲೀಸರು ಹೆಲ್ಮೆಟ್ ಕಡ್ಡಾಯದ ವಿಷಯದಲ್ಲಿ ತೋರಿಸಿದ ಕಾಳಜಿಯನ್ನು ಆಟೋ‌ಮೀಟರ್ ಕಡ್ಡಾಯದಲ್ಲಿ ತೋರಿಸಬೇಕು. ನಗರದಲ್ಲಿ ಆಟೋ‌ಮೀಟರ್ ಕಡ್ಡಾಯದ ಕಾರ್ಯಚರಣೆ‌ ಆರಂಭವಾಗಬೇಕು ಎನ್ನುವುದು ಇಲ್ಲಿನ‌ ಜನರ ಬಹುದಿನದ ಮಹಾದಾಸೆಯಾಗಿದೆ. ಅದಕ್ಕೆ ನಗರ ಪೊಲೀಸ ಆಯುಕ್ತರು ಸ್ಪಂದಿಸಬೇಕಾಗದ ಅಗತ್ಯವಿದೆ ಎಂದು ಸಾರ್ವಜನಿಕರ ಒತ್ತಾಯವಿದೆ.

loading...