ವಿನಯ ಕುಲಕರ್ಣಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ಪಾಟೀಲ

0
34

ಕಲಘಟಗಿ: ಸಂಸದ ಪ್ರಲ್ಹಾದ ಜೋಶಿ ಅವರು ತಮ್ಮ ಮೂರು ಅವಧಿಯಲ್ಲಿ ಜನಪರ ಅಭಿವೃದ್ಧಿಯ ಕಾರ್ಯಕೆಲಸಗಳತ್ತ ಗಮನಹರಿಸಿಲ್ಲ. ಪ್ರಧಾನಿ ಮೋದಿ/ವಾಜಪೇಯಿ ಪ್ರಚಾರದ ಗಾಳಿಯಲ್ಲಿ ಆಯ್ಕೆಯಾಗಿದ್ದು ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ಧಾರವಾಡ ಲೋಕಸಭಾ ಮತಕ್ಷೆÃತ್ರದ ಕಾಂಗ್ರೆಸ್/ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಗೆಲುವಿಗೆ ಪ್ರತಿಯೊಬ್ಬರೂ ಒಗಟ್ಟಿನಿಂದ ಮುಂದಾಗಬೇಕು ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದ ಬಳಿ ಮಾಜಿ ಸಚಿವ ಸಂತೋಷ್ ಲಾಡ್ ಅವರ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರೈತವರ್ಗದ ಕುಟುಂಬದಲ್ಲಿ ಬೆಳೆದು ಬಂದಿರುವ ಮಾಜಿ ಸಚಿವ ವಿನಯಕುಲಕರ್ಣಿಯವರು ತಮ್ಮ ಸೆವಾ ಅವಧಿಯಲ್ಲಿ ಸಾಕಷ್ಟು ಅಬಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಿದ್ದಾರೆ ಎಂದು ಹೇಳಿದರು.
ಮಂಜುನಾಥಗೌಡ ಮುರಳ್ಳಿ ಮಾತನಾಡಿ, ಕೇಂದ್ರದ ಪ್ರಧಾನಿ ಮೋದಿಯವರ ಅವರ ಸರಕಾರ ತಮ್ಮ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಯಾವುದೆ ಅಭಿವೃದ್ಧಿ ಕಾರ್ಯಕೆಲಸಗಳನ್ನು ಮಾಡದೆ ಪ್ರಚಾರದಲ್ಲಿಯೇ ಅಭಿವೃದ್ಧಿಯನ್ನು ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು. ಎಸ್.ಆರ್.ಪಾಟೀಲ, ವಾಯ್.ಬಿ.ದಾಸನಕೊಪ್ಪ, ವೃಷಭೆಂದ್ರ ಪಟ್ಟಣಶೆಟ್ಟಿ, ಎಸ್.ಎನ ರಾಯನಾಳ, ಅಣ್ಣಪ್ಪ ಓಲೇಕಾರ, ಹನುಮಂತ ಚವರಗುಡ್ಡ, ಬಾಳು ಖಾನಾಪೂರ, ವೇಂಕಟೆಸ್ ಬಂಡಿವಡ್ಡರ್, ಶಾಂತಲಿಂಗ ಬೇರುಡಗಿ, ಕಲ್ಲಯ್ಯ ಹಿರೆಮಠ, ಬಾಬು ಅಂಚಟಗೇರಿ, ಸುಧಿರ ಬೋಳಾರ, ಗುರು ಬೆಂಗೆರಿ, ಹನುಮಂತ ಕಾಳೆ, ಆನಂದ ದೊಡಮನಿ ಇದ್ದರು.

loading...