ಓಶೋ ಚಿತ್ರದಲ್ಲಿ ನಟಿಸುತ್ತಿಲ್ಲ: ಆಲಿಯಾ

0
8

ಮುಂಬೈ-ಓಶೋ ಜೀವನಾಧಾರಿತ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂದು ಬಾಲಿವುಡ್ ಅಭಿನೇತ್ರಿ ಆಲಿಯಾ ಭಟ್ಟ್ ಹೇಳಿದ್ದಾರೆ.

ಅಮೀರ್ ಖಾನ್ ಹಾಗೂ ಆಲಿಯಾ ಭಟ್ಟ್ ಓಶೋ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ, ತಾವು ಫಾರೆಸ್ಟ್ ಜಿಎಮ್ ಪಿಎಸ್ ಚಿತ್ರದ ರಿಮೇಕ್ ನಲ್ಲಿ ತೊಡಗಿದ್ದು, ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಚಿತ್ರ ಕುರಿತು ಆಲಿಯಾ ಅವರನ್ನು ಪ್ರಶ‍್ನಿಸಿದಾಗ, ಚಿತ್ರಕತೆ ನನಗೆ ಬಹಳ ಇಷ್ಟವಾಗಿತ್ತು. ಇದು ಶಕುನ್ ಬತ್ರಾ ಅವರ ಪರಿಕಲ್ಪನೆ ಆಗಿದ್ದು, ಒಳ್ಳೆಯ ಕಥೆ ಹೊಂದಿದೆ. ಈ ಕುರಿತು ತಾನು ಅತ್ಯಂತ ಉತ್ಸುಕರಾಗಿದ್ದಾಗಿಯೂ ಆಲಿಯಾ ಹೇಳಿದ್ದಾರೆ.
ಚಿತ್ರದಲ್ಲಿ ಅಭಿನಯಿಸಲು ನಾನು ಸಿದ್ಧಳಿದ್ದೇನೆ ಎಂದು ಶಕುನ್ ಗೆ ಆಲಿಯಾ ಭರವಸೆ ನೀಡಿದ್ದರು. ಆದರೆ, ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿರುವ ಆಲಿಯಾಗೆ ಈ ಚಿತ್ರದಲ್ಲಿ ನಟಿಸಲು ಸಮಯ ಸಿಗುತ್ತಿಲ್ಲವಂತೆ. ಕೆಲ ದಿನಗಳ ನಂತರ ಚಿತ್ರ ನಿರ್ಮಿಸಲು ಶಕುನ್ ನಿರ್ಧರಿಸಿದರೆ ಅದರಲ್ಲಿ ತಾನು ಖಂಡಿತ ಅಭಿನಯಿಸುವುದಾಗಿ ಭಟ್ಟ್ ಹೇಳಿದ್ದಾರೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದೂ ಕೂಡ ಆಲಿಯಾ ತಿಳಿಸಿದ್ದಾರೆ.
ಸದ್ಯ ರಾಜಾಮೌಳಿ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಅಭಿನಯಿಸುತ್ತಿದ್ದು, ಇದರ ಜತೆಗೆ “ಬ್ರಹ್ಮಾಸ್ತ್ರ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸುವ ಆತುರದಲ್ಲಿದ್ದಾರೆ. ಕರಣ ಜೋಹರ್ ಜೊತೆ ನಟಿಸಿರುವ “ಕಲಂಕ್” ಚಿತ್ರದಲ್ಲೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
“ಕಲಂಕ್” ಚಿತ್ರದಲ್ಲಿ ಆಲಿಯಾ ಹೊರತು ಪಡಿಸಿ ವರುಣ ಧವನ್, ಆದಿತ್ಯ ರಾಯ್ ಕಪೂರ್, ಸೋನಾಕ್ಷಿ ಸಿನ್ಹಾ, ಸಂಜಯ್ ದತ್ತ್, ಮಾಧುರಿ ದಿಕ್ಷಿತ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

loading...