ವಿಜಯ ಮಲ್ಯಗೆ ಹಿನ್ನಡೆ: ಹಸ್ತಾಂತರ ಪ್ರಕ್ರಿಯೆ ಮತ್ತಷ್ಟು ಚುರುಕು

0
19

ನವದೆಹಲಿ:-ಭಾರತದ ಬ್ಯಾಂಕ್‌ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ಮತ್ತೆ ಹಿನ್ನಡೆಯಾಗಿದ್ದು, ಹಸ್ತಾಂತರದ ವಿರುದ್ಧ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಲಂಡನ್‌ ನ್ಯಾಯಾಲಯ ತಿರಸ್ಕರಿಸಿದೆ.
ಇದರಿಂದ ಅವರನ್ನು ಭಾರತಕ್ಕೆ ಕರೆತರುವ ಭಾರತದ ತನಿಖಾ ಸಂಸ್ಥೆಗಳು ಲಂಡನ್‌ನಲ್ಲಿ ನಡೆಸುತ್ತಿರುವ ಪ್ರಯತ್ನಕ್ಕೆ ಅಲ್ಪ ಯಶಸ್ಸು ಲಭಿಸಿದೆ.
ತಮ್ಮ ಮನವಿ ಪುರಸ್ಕರಿಸುವಂತೆ ಮಲ್ಯ ಇನ್ನು ನಾಲ್ಕೈದು ದಿನಗಳಲ್ಲಿ ಮತ್ತೊಂದು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವಿದೇಶಾಂಗ ಕಾರ್ಯದರ್ಶಿ ಮತ್ತು ಜಿಲ್ಲಾ ನ್ಯಾಯಾಧೀಶರು ನೀಡಿದ್ದ ಆದೇಶದ ವಿರುದ್ಧ ಮಲ್ಯ ಅರ್ಜಿ ಸಲ್ಲಿಸಲು ಯುನೈಟೆಡ್‌ ಕಿಂಗ್‌ಡಮ್‌ ಹೈಕೋರ್ಟ್‌ ಏಪ್ರಿಲ್‌ 5ರಂದು ಅನುಮತಿ ನಿರಾಕರಿಸಿತ್ತು.ಇನ್ನು, ಮಲ್ಯ ಪರ ವಕೀಲರು ಮತ್ತು ಭಾರತ ಸರ್ಕಾರದ ಪರ ಪ್ರಾಸಿಕ್ಯೂಷನ್‌ ನಡುವೆ ಇನ್ನು ಮೌಖಿಕ ವಿಚಾರಣೆ ಯು.ಕೆ.ನ್ಯಾಯಾಲಯದಲ್ಲಿ ನಡೆಯಲಿದ್ದು, ಉಭಯ ಪಕ್ಷಗಳು ತಮ್ಮ ಹಕ್ಕುಗಳನ್ನು ಮಂಡಿಸಬಹುದಾಗಿದೆ.
ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
ಇದಕ್ಕೂ ಮೊದಲು, ಫೆಬ್ರವರಿ 4ರಂದು ವಿಜಯ ಮಲ್ಯ ಅವರ ಹಸ್ತಾಂತರಕ್ಕೆ ಯು.ಕೆ.ಗೃಹ ಕಾರ್ಯದರ್ಶಿ ಅನುಮತಿ ನೀಡಿದ್ದರು. ಇದರು ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಮೋದಿ ಸರ್ಕಾರದ ಪ್ರಯತ್ನಕ್ಕೆ ಪುಷ್ಠಿ ನೀಡಿತ್ತು.

loading...