ಕ್ಷಿನ್‍ಜಿಯಾಂಗ್‍ ಹಿಮಪಾತದಲ್ಲಿ ಕಣ್ಮರೆಯಾಗಿದ್ದ 10 ಮಂದಿ ರಕ್ಷಣೆ

0
20

ಉರುಮ್‍ಕ್ವಿ :- ಚೀನಾದ ವಾಯವ್ಯ ಭಾಗದ ಕ್ಷಿನ್‍ಜಿಯಾಂಗ್ ಯುಗುರ್ ಸ್ವಾಯತ್ತ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಹಿಮಪಾತಗಳಲ್ಲಿ ಸಿಲುಕಿ ಕಣ್ಮರೆಯಾಗಿದ್ದ 10 ಮಂದಿಯನ್ನು ಮಂಗಳವಾರ ರಕ್ಷಿಸಲಾಗಿದೆ.
ರಕ್ಷಿಸಲಾದ 10 ಮಂದಿಯನ್ನು ಎರಡು ಹೆಲಿಕಾಪ್ಟರ್‍ಗಳ ಮೂಲಕ ಕ್ಷಿನ್‍ಜಿಯಾಂಗ್ ರಾಜಧಾನಿ ಉರುಮ್‍ಕ್ವಿ ಸಾಗಿಸಲಾಗಿದ್ದು, ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮುದ್ರಮಟ್ಟದಿಂದ 3,500 ಮೀಟರ್‍ ಗೂ ಎತ್ತರದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ರಕ್ಷಣಾ ಪಡೆಗಳಿಗೆ ತೊಂದರೆ ಎದುರಾಗಿತ್ತು. ಪರ್ವತದ ಮೇಲಕ್ಕೆ ಸಾಗುವ ರಸ್ತೆಗಳು ಹಿಮಪಾತಗಳಿಂದ ಮುಚ್ಚಲ್ಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್‍ ಗಳ ನೆರವನ್ನು ಕೋರಿತ್ತು.
ಭದ್ರತಾ ಸಿಬ್ಬಂದಿ ಪರ್ವತದ ಮೇಲಕ್ಕೆ ಹತ್ತಿ ಹಿಮಪಾತದಲ್ಲಿ ಸಿಕ್ಕಿಬಿದ್ದಿದ್ದವರನ್ನು ರಕ್ಷಿಸಿದ್ದಾರೆ ಎಂದು ಕ್ಷಿನ್‍ಜಿಯಾಂಗ್ ಅರಣ್ಯ ಅಗ್ನಿಶಾಮಕ ದಳ ತಿಳಿಸಿದೆ.

loading...