ಬ್ರೆಕ್ಸಿಟ್ ವಿಳಂಬ: ಜರ್ಮನಿ , ಫ್ರಾನ್ಸ್ ನಾಯಕರೊಂದಿಗೆ ಥೆರೇಸಾ ಮಾತುಕತೆ

0
13

ಲಂಡನ್- ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೋರಹೋಗುವ ಗಡುವು ಜಾರಿಗೆ ಕೇವಲ ಇನ್ನು ನಾಲ್ಕು ದಿನಗಳು ಬಾಕಿಯಿರುವಾಗಲೇ ಬ್ರಿಟನ್ ಪ್ರಧಾನ ಮಂತ್ರಿ ಥೆರೇಸಾ ಮೇ ಅವರು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಇಂದು ಮತ್ತು ನಾಳೆ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಬರ್ಲಿನ್ ನಲ್ಲಿ ಏಂಜೆಲಾ ಮಾರ್ಕೆಲ್ ಅವರನ್ನು ಮತ್ತು ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ಮಾಡಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಸಂಸತ್ ಅನುಮೋದನೆ ನೀಡದ ಕಾರಣ ಬ್ರೆಕ್ಸಿಟ್‌ ಒಪ್ಪಂದ ಜಾರಿಯ ಅವಧಿಯನ್ನು ವಿಸ್ತರಿಸುವಂತೆ ಥೆರೇಸಾ ಅವರು ಐರೋಪ್ಯ ಒಕ್ಕೂಟಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಮಹತ್ವದ ಬೆಳವಣೆಗೆಯಲ್ಲಿ ಅವಧಿ ವಿಸ್ತರಣೆಗೂ ಐರೋಪ್ಯ ಒಕ್ಕೂಟ ಹಲವು ಷರತ್ತುಗಳನ್ನು ಹಾಕಿದೆ ಎಂದು ಹೇಳಲಾಗಿದ್ದು, ಈಗ ಬ್ರಿಟನ್ ಪ್ರಧಾನಿ ಅವರ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿಗೆ ಬಂದು ಮುಟ್ಟಿದೆ.

ಸಂಸತ್ತಿನ ಮುಂದೆ ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡದೆ ಏಕ ಪಕ್ಷೀಯವಾಗಿ ಪ್ರಧಾನಿ ತೆಗೆದುಕೊಂಡ ನಿಲುವುಗಳು ಅಲ್ಲಿನ ಸಂಸದರನ್ನು ಕೆರಳುವಂತೆ ಮಾಡಿ ಈಗಾಗಲೇ ಎರಡು ಭಾರಿ ಸಂಸತ್ತಿನಲ್ಲಿ ಈ ಪ್ರಸ್ತಾವನೆಗೆ ಸೋಲು ಉಂಟಾಗಿದೆ.

ಈ ನಡುವೆ ಐರೋಪ್ಯ ಒಕ್ಕೂಟ ತೊರೆಯುವ ಅವಧಿ ವಿಸ್ತರಿಬೇಕೆಂದು ಸೋಮವಾರ, ಪಾರ್ಲಿಮೆಂಟ್ ನಲ್ಲಿ ಕಾರ್ಮಿಕ ಪಕ್ಷದ ಸಂಸದ ಯವೆಟ್ಟೆ ಕೂಪರ್ ಮಂಡಿಸಿದ್ದ ಮಸೂದೆಯನ್ನು ಸಂಸತ್ತಿನ ಕೆಳ ಮನೆ ಅಂಗೀಕರಿಸಿದೆ. ಆದಾಗ್ಯೂ, ಇದರ ಬಗ್ಗೆ ಐರೋಪ್ಯ ಒಕ್ಕೂಟವೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

loading...