ಕೈಲಾಸ ಮಾನಸರೋವರ ಯಾತ್ರೆ-2019, ನೋಂದಣಿ ಇಂದಿನಿಂದ ಆರಂಭ

0
24

ನವದೆಹಲಿ:- ಕೈಲಾಸ ಮಾನಸರೋವರಯಾತ್ರೆ 2019ರ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಯಾತ್ರೆ ಈ ವರ್ಷದ ಜೂನ್ 8ರಿಂದ ಸೆಪ್ಟಂಬರ್ 8 ರವರೆಗೆ ಎರಡೂ ಮಾರ್ಗಗಳಲ್ಲಿ ನಡೆಯಲಿದೆ.
ನೋಂದಣಿಗೆ ಮೇ 9 ಕೊನೆಯ ದಿನವಾಗಿದೆ. 2019 ಜನವರಿ 1ಕ್ಕೆ ಅನ್ವಯವಾಗುವಂತೆ ಕನಿಷ್ಟ 18 ವರ್ಷ ಮೇಲ್ಪಟ್ಟವರು, 70ವರ್ಷ ಮೀರದವರು ಯಾತ್ರೆಗೆ ಆರ್ಜಿ ಸಲ್ಲಿಸಲು ಆರ್ಹತೆ ಹೊಂದಿದ್ದಾರೆ.
ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮೂಲಕ ಯಾತ್ರೆ ಕೈಗೊಳ್ಳುವವರು, ಪ್ರತಿಯೊಬ್ಬರಿಗೆ 1.8ಲಕ್ಷ ರೂಪಾಯಿ ವೆಚ್ಚವಾಗಲಿದೆ. 60 ಯಾತ್ರಾರ್ಥಿಗಳ 18 ತಂಡಗಳನ್ನು ಈ ಮಾರ್ಗದಲ್ಲಿ ಆಯೋಜಿಸಲಾಗುವುದು. ಪ್ರತಿಯೊಂದು ತಂಡದ ಯಾತ್ರೆಯ ಅವಧಿ 24 ದಿನಗಳಾಗಲಿದ್ದು, ಇದರಲ್ಲಿ ದೆಹಲಿಯಲ್ಲಿ ನಡೆಯಲಿರುವ ಮೂರು ದಿನಗಳ ಪೂರ್ವ ಸಿದ್ಧತಾ ಅವಧಿಯೂ ಸೇರಲಿದೆ.
ಸಿಕ್ಕಿಂನ ನಾಥುಲಾ ಪಾಸ್ ಮಾರ್ಗದಲ್ಲಿ ಯಾತ್ರೆಯನ್ನು ವಾಹನಗಳಲ್ಲಿ ಕೈಗೊಳ್ಳಬಹುದು. ಕಡಿದಾದ ಬೆಟ್ಟಗುಡ್ಡ ಹತ್ತಲು ಸಾಧ್ಯವಾಗದ ಹಿರಿಯ ನಾಗರೀಕರಿಗೆ ಈ ಮಾರ್ಗ ಸೂಕ್ರವಾಗಿದೆ. ಈ ಮಾರ್ಗದಲ್ಲಿ ಪ್ರತಿವ್ಯಕ್ತಿಗೆ 2.5ಲಕ್ಷರೂಪಾಯಿ ವೆಚ್ಚವಾಗಲಿದ್ದು, ಯಾತ್ರೆಯ ಅವಧಿ ದೆಹಲಿಯಲ್ಲಿ ಮೂರು ದಿನಗಳ ಪೂರ್ವಸಿದ್ದತಾ ಅವಧಿ ಸೇರಿ 21ದಿನಗಳಾಗಿವೆ. ಈ ವರ್ಷ ಈ ಮಾರ್ಗದಲ್ಲಿ 10ಯಾತ್ರಾರ್ಥಿಗಳ 50 ತಂಡ ಕಳುಹಿಸಲು ಯೋಜನೆ ಸಿದ್ದಪಡಿಸಲಾಗಿದೆ

loading...