ಐಸಿಸಿ ವಿಶ್ವಕಪ್‌ಗೆ ನೂತನ ಜೆರ್ಸಿ ಅನಾವರಣಗೊಳಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ

0
28

ನವದೆಹಲಿ:- ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್‌ ತಂಡದ ಜೆರ್ಸಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಉಡುಪು ಉತ್ಪಾದಕ ಸಂಸ್ಥೆಯಾದ ಎಎಸ್ಐಸಿಎಸ್‌ ಮಂಗಳವಾರ ಅನಾವರಣಗೊಳಿಸಿದೆ.
ಆಸ್ಟ್ರೇಲಿಯಾದ ಜೆರ್ಸಿಯು ಹಳದಿ ಹಾಗೂ ಹಸಿರು ಬಣ್ಣದ ಕಾಲರ್‌ನೊಂದಿಗೆ ಒಳಗೊಂಡಿದೆ. ಭಾರತ ವಿರುದ್ಧ ತವರು ನೆಲದಲ್ಲಿ ಆಡಿದ್ದ ಆಸ್ಟ್ರೇಲಿಯಾ ಸಮವಸ್ತ್ರಕ್ಕಿಂತ ವಿಶ್ವಕಪ್‌ಗೆ ಸಿದ್ಧವಾಗಿರುವ ಜೆರ್ಸಿ ತುಂಬಾ ವಿಭಿನ್ನವಾಗಿದೆ.
ಮುಂಬರುವ ಇಂಗ್ಲಿಷ್ ಬೇಸಿಗೆಯಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ರೆಟ್ರೊ ಸಮವಸ್ತ್ರಗಳನ್ನು ಧರಿಸಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಜೂನ್‌ 1 ರಿಂದ ಬ್ರಿಸ್ಟೋಲ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ವಿಶ್ವಕಪ್‌ ಮೊದಲ ಪಂದ್ಯದಲ್ಲಿ ಸೆಣಸಲಿದೆ.
ಆಸ್ಟ್ರೇಲಿಯಾ ಪ್ರಸ್ತುತ ಉತ್ತಮ ಲಯದಲ್ಲಿದೆ. ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ಸತತ ಎರಡು ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಭಾರತವನ್ನು 3-2 ಹಾಗೂ ಪಾಕಿಸ್ತಾನವನ್ನು 5-0 ಅಂತರದಲ್ಲಿ ಸೋಲಿಸಿತ್ತು.
ತವರು ನೆಲದಲ್ಲೇ ನಡೆದಿದ್ದ 2015ರ ಐಸಿಸಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು. ಇದು ಆಸೀಸ್‌ ಪಾಲಿಗೆ ಐದನೇ ಪ್ರಶಸ್ತಿಯಾಗಿದೆ. 1987ರಲ್ಲಿ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ ಅಲನ್‌ ಬಾರ್ಡರ್‌ ನಾಯಕತ್ವದಲ್ಲಿ ಐಸಿಸಿ ವಿಶ್ವಕಪ್‌ ಜಯಿಸಿತ್ತು. ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಮೇ 30 ರಿಂದ ಐಸಿಸಿ ವಿಶ್ವಕಪ್‌ ಶುರುವಾಗಲಿದೆ.

loading...