ಗಾಳಿ ಪುತ್ರ ಅಂಗಡಿಗೆ ಯಾವ ಅಲೆಯೂ ಇಲ್ಲ: ಸಚಿವ ಸತೀಶ

0
38


ಮಾಜಿ ಸಚಿವ ರಮೇಶ ಜಾರಕಿಹೊಳಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸುರೇಶ ಅಂಗಡಿ ಅವರು ಮೂರು ಸಲ ಗಾಳಿಯಲ್ಲಿ ಗೆಲವು ಸಾಧಿಸಿದ್ದಾರೆ. ಈ ಸಲ ಯಾವ ಅಲೆಯೂ ಇಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ರಮೇಶ ಜಾರಕಿಹೊಳಿ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿಕೆ ನೀಡಿರುವುದು ಯಾವ ಉದ್ದೇಶಕ್ಕೆ ಎಂದು ಗೋತ್ತಿಲ್ಲ. ಅಲ್ಲದೆ ಬಿಜೆಪಿ ನಾಯಕರು ಸಹ ರಮೇಶ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿಕೊಂಡು ಹೊರಟ್ಟಿದ್ದಾರೆ. ಈ ಕುರಿತು ಯಾವುದೇ ದಾಖಲೆಗಳಿಲ್ಲ ಎಂದರು.
ರಮೇಶ ಜಾರಕಿಹೊಳಿ ಅಧಿಕೃತವಾಗಿ ಬಿಜೆಪಿಗೆ ಬೆಂಬಲಿಸುತ್ತಾರೆ ಎನ್ನುವುದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರಿಗಾಗಲಿ ಅಥವಾ ಪಕ್ಷದ ವರಿಷ್ಠರಿಗಾಗಲಿ ತಿಳಿಸಿಲ್ಲ. ರಮೇಶ ಜಾರಕಿಹೊಳಿ ಹಿರಿಯ ಶಾಸಕರಾಗಿದ್ದಾರೆ. ಅವರು ಈ ಹೇಳಿಕೆಗೆ ಉತ್ತರ ನೀಡಬೇಕೆಂದರು.
ಬೆಳಗಾವಿಯಲ್ಲಿ ಅಭಿವೃದ್ದಿ ಕಾರ್ಯಗಳು ಆಗಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವದಿಯಲ್ಲಿ. ಆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಬಂದ ಮೇಲೆ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ದಿ ಕಾಮಗಾರಿಗಳು ಆಗಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹದಿನೈದು ವರ್ಷದಿಂದ ಸುರೇಶ ಅಂಗಡಿ ಅವರು ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಬೆಳಗಾವಿ ಜಿಲ್ಲೆಗೆ ಸುರೇಶ ಅಂಗಡಿ ಅವರು ಕಪಿಲೇಶ್ವರ ಮೇಲ್ಸೇತುವೆ ಹಾಗೂ ಗೋಗಟೆ ಮೇಲ್ಸೇತುವೆಯ ಮೇಲೆ ನಿಂತು ಫೋಟೋ ತೆಗೆಸಿಕೊಂಡರೆ ಅಭಿವೃದ್ದಿಯಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನವೂ ಇದೆ. ಇದನ್ನು ಜನರು ಅರಿತ್ತಿದ್ದಾರೆ. ಈ ಸಲ ಸುರೇಶ ಅಂಗಡಿ ಅವರನ್ನು ಮತದಾರರು ಮನೆಗೆ ಕಳಿಸುವುದು ಶತಸಿದ್ದ ಎಂದರು.

loading...