ತಪ್ಪದೇ ಮತಚಲಾಯಿಸಿ: ಡಾ.ಸತೀಶ್

0
18

ಹುಬ್ಬಳ್ಳಿ: ಏಪ್ರಿಲ್ ೨೩ ರಂದು ನಡೆಯುವ ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಎಲ್ಲರೂ ಮತಚಲಾಯಿಸಬೇಕು ಎಂದು ಜಿಲ್ಲಾ ಸ್ವಿÃಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿ.ಇ.ಓ. ಡಾ.ಬಿ.ಸಿ.ಸತೀಶ್ ಹೇಳಿದರು. ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಜಿಲ್ಲಾ ಸ್ವಿÃಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಗಾಳಿಪಟದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಡಾ.ರಾಮು ಮೂಲಗಿ, ಪ್ರಕಾಶ್ ಕಂಬಳಿ ಅವರ ನೇತೃತ್ವದ ಜಾನಪದ ಗೀತೆಗಳ ಗಾಯಕರ ತಂಡವು ಸ್ವರಚಿತ ಗೀತೆಗಳನ್ನು ಹಾಡುವುದರ ಮೂಲಕ ಜಿಲ್ಲೆಯ ಗ್ರಾಮಗಳಿಗೆ ತೆರಳಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಧಾರವಾಡ ಹಾಗೂ ಹುಬ್ಬಳ್ಳಿ ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸುವ ಮೂಲಕ ವಿನೂತನವಾಗಿ ಮತದಾನ ಅರಿವ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಮಹಾರಾಷ್ಟçದ ದಾನೂರಿನಿಂದ ಆಗಮಿಸಿದ ಅಶೋಕ್ ಷಾ ತಂಡ ಗಾಳಿಪಟಗಳನ್ನು ಬಾನಿನಲ್ಲಿ ಹಾರಾಡಿಸಿದರು.
ಡಾ. ರಾಮು ಮೂಲಿಗಿ, ಪ್ರಕಾಶ್ ಕಂಬಳಿ, ರಮೇಶ ಕಬ್ಬೆÃರಹಳ್ಳಿಯವರ ತಂಡ ಸ್ವರಚಿತ ಮತಾದನದ ಕುರಿತಾದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಹುಬ್ಬಳ್ಳಿ ಶಹರ ತಹಶೀಲದಾರ ಶಶಿಧರ ಮಾಡ್ಯಳಾ, ಬಿಇಓ ಹುಡೇದಮನಿ ಇದ್ದರು.

loading...