ನೂರು ದಿನಗಳು

0
23

ದೇಶಕ್ಕೆ ಮಾದರಿಯಾಗಿರುವ ಲೋಕಪಾಲ ಮಸೂದೆಗೆ ಆಕರ್ಷಣೆ ಯಾಗಿರುವ ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ನಾಯಕನಿಲ್ಲದ ನೂರು ದಿನಗಳು ಈಗ ಸಂದಿವೆ. 1986 ರಲ್ಲಿ ಆರಂಭವಾದ ನಮ್ಮ ಲೋಕಾಯುಕ್ತ ಸಂಸ್ಥೆಗೆ ಇಷ್ಟೊಂದು ಸುದೀರ್ಘ ಅವಧಿಯಲ್ಲಿ ನಾಯಕನೇ ಇಲ್ಲದಿರುವುದು ಇದೇ ಮೊದಲ ಬಾರಿ  ಆಗಿದೆ. ಆರಂಭದಲ್ಲಿ ಕೋಶಾಲ ಸೈನೆ , ಹಕೀಮ, ನಮ್ಮ ರಾಜ್ಯದ ಲೋಕಾಯುಕ್ತರಾಗಿದ್ದರು. ಆದರೆ ಅವರು ಯಾವುದೇ ರೀತಿಯಲ್ಲಿ ಹೆಸರು ಮಾಡಿರಲಿಲ್ಲ. ಲೋಕಾಯುಕ್ತ ಎಂಬ ಸಂಸ್ಥೆ ಇರುವುದು ಆ ಸಮಯದಲ್ಲಿ ಬಹಳ ಜನರಿಗೆ ಗೊತ್ತಿರಲೇ ಇಲ್ಲ. ಆದರೆ 2001 ರಲ್ಲಿ ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ಬಂದ ನಂತರ ಅವರು ಸರಕಾರದ ವಿವಿಧ ಕಚೇರಿಗೆ ಹಠಾತ್ ಬೇಟ್ಟಿ ನೀಡಿ ಲಂಚ ತಿನ್ನುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು  ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ ನಂತರ ರಾಜ್ಯದ ಜನರಿಗೆ  ಲೋಕಾಯುಕ್ತರು ಇದ್ದಾರೆ. ಅವರು ಲಂಚ ಬಡಕರ ವಿರುದ್ಧ ಕ್ರಮ ತೆಗೆದು ಕೊಳ್ಳುತ್ತಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಾಯಿತು. ನಂತರ 2006 ರಲ್ಲಿ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಸಂತೋಷ ಹೆಗಡೆ  ಬಂದ ನಂತರ ಲೋಕಾಯುಕ್ತ ಸಂಸ್ಥೆ ಮತ್ತಷ್ಟು ಕೀರ್ತಿ ಗೌರವಗಳನ್ನು  ಸಂಪಾದಿಸಿತು ಅವರು ತಮ್ಮ ಸಂಸ್ಥೆಯ ಅಧಿಕಾರಿಗಳ ಮೂಲಕ ಭ್ರಷ್ಟ ಅಧಿಕಾರಿಗಳ ಬೇಟೆಯನ್ನು ತೀವ್ರ ಗೊಳಿಸಿದರು. ಜೊತೆಗೆ ಶಾಸಕರು  ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತರಿಗೆ ತಪ್ಪದೆ  ಸಲ್ಲಿಸಲು  ಕ್ರಮ ತೆಗೆದುಕೊಂಡರು ಅಕ್ರಮ ಗಣಿಗಾರಿಕೆಯ ಬಗ್ಗೆ  ಐತಿಹಾಸಿಕ  ವರದಿಯನ್ನು ನೀಡಿದ್ದರು. ಇದರಿಂದ ಅವರ ಹೆಸರು ದೇಶದಲ್ಲಿ ಪ್ರಸಿದ್ದಿಯನ್ನು ಪಡೆಯಿತು  ಜೊತೆಗೆ ಮುಖ್ಯ ಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ತಮ್ಮ ಅಧಿಕಾರವನ್ನು ಕಳೆದು ಕೊಳ್ಳಬೇಕಾಯಿತು.

ಹೆಗಡೆ ಅವರು ನಿವೃತ್ತಿಯಾದ ನಂತರ  ನ್ಯಾಯಮೂರ್ತಿ ಶಿವರಾಜ ಪಾಟೀಲ ಅಗಷ್ಟ 3 ರಿಂದ ಲೋಕಾಯುಕ್ತರಾಗಿ ನೇಮಕಗೊಂಡರು ಆದರೆ ಅವರು ಕಾನೂನು ಬಾಹೀರವಾಗಿ  ಅಕ್ರಮ ನಿವೇಶನವನ್ನು  ಪಡೆದಿದ್ದಾರೆ. ಎಂಬ ಕಾರಣದಿಂದ ಸಪ್ಟೆಂಬರ 19 ಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಇದರಿಂದ ಅವರು ಕೇವಲ  47 ದಿನಗಳ ವರೆಗೆ ಮಾತ್ರ  ಅವರು  ಲೋಕಾಯುಕ್ತರಾಗಿ ಕಾರ್ಯವನ್ನು ನಿರ್ವಹಿಸಿದ್ದರು.

ನ್ಯಾಯಮೂರ್ತಿ ಶಿವರಾಜ ಪಾಟೀಲ ರಾಜೀನಾಮೆ ನೀಡಿದ ನಂತರ ಸರಕಾರ ನ್ಯಾಯಮೂರ್ತಿ  ಎಸ್. ಆರ್. ಬನ್ನೂರಮಠ ಅವರನ್ನು  ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಆದರೆ ಅವರ ಮೇಲೆಯೂ ಅಕ್ರಮ ನಿವೇಶನದ ಆರೋಪದ ಹಿನ್ನೆಲೆಯಲ್ಲಿ  ರಾಜ್ಯಪಾಲ ಎಚ್. ಆರ್. ಬಾರದ್ವಾಜ ಆ ಶಿಫಾರಸ್ಸನ್ನು ಒಪ್ಪಿಕೊಳ್ಳಲಿಲ್ಲ. ಸರಕಾರ ಹಾಗೂ  ರಾಜ್ಯಪಾಲರ ನಡುವಿನ ಹಗ್ಗ ಜಗ್ಗಾಟದಿಂದಾಗಿ ನೂರು ದಿನಗಳಾದರೂ ಲೋಕಾಯುಕ್ತರ ನೇಮಕ  ಆಗಿರುವುದಿಲ್ಲ ಈಗ ಸರಕಾರ  ತನ್ನ ಪಟ್ಟಿನಿಂದ  ಹಿಂದೆ ಸರಿದು ಬೇರೆ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲು  ಮುಂದೆ ಬಂದಿದೆ.  ನ್ಯಾಯಮೂರ್ತಿ ಸೋದಿ  ನ್ಯಾಯಮೂರ್ತಿ ಕುರಂಬ  ನ್ಯಾಯಮೂರ್ತಿ ವಿ. ಎಸ್. ಮಳೀಮಠ ಇವರ ಹೆಸರುಗಳನ್ನು ಸರಕಾರ ಈಗ  ಪರೀಶೀಲನೆ ಮಾಡತೊಡಗಿದೆ. ಈ ಮೂವರಲ್ಲಿ ಒಬ್ಬರನ್ನು  ಲೋಕಾಯುಕ್ತರನ್ನಾಗಿ ನೇಮಕ ಮಾಡುವುದು  ಸರಕಾರದ  ಉದ್ದೇಶವಾಗಿದೆ.  ಇದು ಆದಷ್ಟು ಬೇಗ ಕಾರ್ಯ ರೂಪಕ್ಕೆ ಬಂದು ಹೊಸ ಲೋಕಾಯುಕ್ತರ ನೇಮಕವಾಗಲಿ ಎಂದು ರಾಜ್ಯದ ಜನರು ಬಯಸುತ್ತಿದ್ದಾರೆ. ಆದ್ದರಿಂದ ಸರಕಾರ ಈ ವಿಷಯದಲ್ಲಿ ಆದಷ್ಟು ಬೇಗ ಕಾರ್ಯ ಮಾಡಬೇಕಾಗಿರುವುದು ಅಗತ್ಯದ ಸಂಗತಿಯಾಗಿದೆ

loading...

LEAVE A REPLY

Please enter your comment!
Please enter your name here