ಸುದ್ದಿಗೊಂದು ಚುಚ್ಚು ಮಾತು

0
33

ಆರೋಪ ಮಾಡುವವರಿಗೆ ಬಗ್ಗಲಾರೆ ಎಂದು ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ   ಹೇಳಿದ್ದಾರೆ.

– ಸುದ್ದಿ

  ಸ್ವಾಮಿ ಯಡಿಯೂರಪ್ಪನವರೇ  ನೀವು ಜನರಿಗೆ ಬಗ್ಗಬೇಕಾಗಿಲ್ಲ ನಿಮ್ಮ ಮನದಲ್ಲಿರುವ ಅಂತರಾಳಕ್ಕೆ ಬಗ್ಗಿ ನಡೆಯಿರಿ.

ಯಡಿಯೂರಪ್ಪ ಜೊತೆಗೆ ಜನರಿದ್ದಾರೆ ಎಂದು ಬೆಳಗಾವಿ ಸಂಸದ  ಸುರೇಶ ಅಂಗಡಿ ಹೇಳಿದ್ದಾರೆ.

-ಸುದ್ದಿ                          

  ಬೆಲ್ಲ ಇದ್ದ್ದಲ್ಲಿ ನೋಣ ಇರುತ್ತವೆ ಎಂಬ ಮಾತಿಗೆ  ಅಂಗಡಿಯವರ ಮಾತು ಸಾಕ್ಷಿಯಾಗಿದೆ.

ಅಗಲಿ ಹೋದ ಬಂಗಾರಪ್ಪ ಹಠಮಾರಿಯಾದರೂ ಅವರ ಗುಣ ಮಾತ್ರ ಬಂಗಾರದ್ದು  ಎಂದು ಅವರನ್ನು  ಬಲ್ಲವರು ಹೇಳುತ್ತಿದ್ದಾರೆ.

-ಸುದ್ದಿ      

 ಅದಕ್ಕಾಗಿಯೇ ಅವರ ತಂದೆತಾಯಿಗಳು  ಅವರಿಗೆ ಬಂಗಾರೆಪ್ಪ ಎಂದು ಹೆಸರು ಇಟ್ಟಿರಬಹುದು.

ಬೆಳಗಾವಿಗೆ ಕನ್ನಡ ಮಹಾಪೌರರು ಬೇಕು ಎಂದು ಎರಡು ದಿನ ಬೆಳಾವಿಯಲ್ಲಿದ್ದು ಸಿದ್ದನಗೌಡ ಪಾಟೀಲರನ್ನು ಮಹಾಪೌರರನ್ನಾಗಿ ಮಾಡಿದ ಕೀರ್ತಿ ಬಂಗಾರಪ್ಪನವರಿಗೆ ಸಲ್ಲುತ್ತದೆ.

-ಸುದ್ದಿ          

ಹಿಡಿದ ಹಟವನ್ನು ಅವರು ಬಿಟ್ಟಿರಲಿಲ್ಲ. ಎಂಬುದಕ್ಕೆ ಈ ಘಟನೆ ನಿದರ್ಶನವನ್ನು  ಒದಗಿಸಿ ಕೊಡುತ್ತದೆ.

ಬೆಳೆಯುತ್ತಿರುವ ಬೆಳಗಾವಿಗೆ ರಾಕಸ್ ಕೊಪ್ಪದ ನೀರು ಸಾಕಾಗುವುದಿಲ್ಲ ಅದಕ್ಕಾಗಿ ಹಿಡಕಲ್ ಜಲಾಶಯದಿಂದ ನೀರು  ತರಬೇಕು ಎಂಬ ಕನಸ್ಸನ್ನು ಬಂಗಾರಪ್ಪ ನನಸು ಮಾಡಿದ್ದರು.

– ಸುದ್ದಿ      ಹಿಡಕಲ್ ಜಲಾಶಯದ ನೀರನ್ನು ಕುಡಿಯುವ ಬೆಳಗಾವಿ ಜನರು ಬಂಗಾರೆಪ್ಪನವರನ್ನು ನೆನೆಸುತ್ತಲೇ ನೀರು ಕುಡಿಯಬೇಕಾಗಿದೆ.

ಕಿತ್ತೂರು ಚೆನ್ನಮ್ಮ ಪ್ರಾಧಿಕಾರವನ್ನು ಆರಂಭಿಸಿ ಅದಕ್ಕೆ ಆರು ಕೋಟಿ ರೂಪಾಯಿ ಹಣವನ್ನು ಬಂಗಾರಪ್ಪ  ನೀಡಿದ್ದರು.

-ಸುದ್ದಿ

ಕಿತ್ತೂರು ಚೆನ್ನಮ್ಮಳಂತೆ ವೀರಾವೇಶ ಅವರಿಗೆ ಇದ್ದುದರಿಂದ ಚೆನ್ನಮ್ಮನ ಊರಿನ ಅಭಿವೃದ್ದಿಯನ್ನು ಮಾಡುವ ಕನಸ್ಸನ್ನು ಅವರು ಕಂಡಿರಬಹುದು.

ನಗರಗಳ  ವಿದ್ಯಾರ್ಥಿಗಳಿಗೆ ಗ್ರಾಮೀಣ ವಿದ್ಯಾರ್ಥಿಗಳು ಸರಿಸಾಟಿಯಾಗಿ ನಿಲ್ಲಬೇಕು ಎಂಬ ಕಾರಣದಿಂದ ಬಂಗಾರೆಪ್ಪ ಗ್ರಾಮೀಣ ಕ್ರಪಾಂಕ ಯೋಜನೆಯನ್ನು ಜಾರಿಗೆ  ತಂದಿದ್ದರು.

-ಸುದ್ದಿ

ಅದು ಅವರಿಗೆ ಇರುವ ಗ್ರಾಮೀಣ ಮಕ್ಕಳು ಹಾಗೂ ಬಡವರ ಬಗೆಗಿನ ಕಾಳಜಿಗೆ  ಒಂದು ನಿದರ್ಶನವಾಗಿದೆ.

ಅಣ್ಣಾ ಹಜಾರೆ ಉಪವಾಸ ಮಾಡುತ್ತಿರುವ ಮೈದಾನವನ್ನು ಕಾಯಲು 2000 ಪೋಲಿಸರನ್ನು ನೇಮಕ ಮಾಡಲಾಗಿದೆ.

-ಸುದ್ದಿ

ಆದರೆ ಅಣ್ಣಾ ಅವರಿಗೆ ಏನಾದರೂ ತೊಂದರೆಯಾದರೆ ಅದು ಜನರಿಂದ ಆಗುವುದಿಲ್ಲ. ಕಾಂಗ್ರೆಸ್ ಸರಕಾರದಿಂದ  ಆಗಬಹುದು ಎಂಬ ಪಿಸು ಮಾತುಗಳು ಕೇಳಿ ಬರುತ್ತಿವೆ. 

ಬೆಳಗಾವಿಯಲ್ಲಿ ಮಾತು ಆರಂಭಿಸಿದ ಯಡಿಯೂರಪ್ಪ ಮರಾಠಿಯಲ್ಲಿ ಮಾತನಾಡಿದ್ದಾರೆ.

-ಸುದ್ದಿ

ಜನರನ್ನು ಯಾವ ರೀತಿ ಮರಳು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ.

 

 

 

loading...

LEAVE A REPLY

Please enter your comment!
Please enter your name here