ಭಾರೀ ಕೈಗಾರಿಕೆಗಳು ಮೋಟಾರು ವಾಹನಗಳಲ್ಲಿ ಸುರಕ್ಷತೆ

0
50

ವಾಹನ ತಯಾರಿಕಾ ವಲಯದಲ್ಲಿ ವಾಹನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಅಳವಡಿಸಲಾಗುವ ಎರಡು ಬಗೆಯ ವಿನ್ಯಾಸಗಳ ಮಾತು ಪ್ರಚಲಿತವಿದೆ. ಮೊದಲನೆಯದು ವಾಹನ ಅಪಘಾತ ಸಂಭವಿಸಿದಾಗ, ವಾಹನದಲ್ಲಿರುವವರಿಗೆ ಗಾಯವಾಗುವುದನ್ನು ಕನಿಷ್ಠ ಮಟ್ಟದಲ್ಲಿರಿಸುವಂತಹ ವಿನ್ಯಾಸವುಳ್ಳ ವಾಹನಗಳು. ಎರಡನೆಯದು ವಾಹನ ಚಾಲಕ ಅಪಘಾತ ಎಸಗದಂತೆ ನೋಡಿಕೊಳ್ಳುವ ವಿನ್ಯಾಸವುಳ್ಳ ವಾಹನಗಳು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಎರಡೂ ವಿನ್ಯಾಸಗಳನ್ನು ಒಂದೇ ವಾಹನದಲ್ಲಿ ಅಳವಡಿಸುವುದು ಕ್ಷೇಮಕರ. ವಾಹನ ತಯಾರಿಕಾ ಉದ್ಯಮ, ಕಳೆದ ಏಳು ವರ್ಷಗಳಲ್ಲಿ, ಶೇಕಡ 15ಕ್ಕೂ ಹೆಚ್ಚಿನ ಸಿಎಜಿಆರ್ ದರ ಹೊಂದಿದೆ. 2010-11ನೇ ಸಾಲಿನಲ್ಲಿ ಮೋಟಾರು ವಾಹನ ಉದ್ಯಮದ ಒಟ್ಟು ವ್ಯಾಪಾರ ವಹಿವಾಟು 73 ಶತಕೋಟಿ ಅಮೇರಿಕನ್ ಡಾಲರುಗಳು. (327,300 ಕೋಟಿ ರೂಪಾಯಿಗಳು. ದೇಶದ ತಯಾರಿಕಾ ವಲಯದ ಒಟ್ಟು ದೇಶಿ ಉತ್ಪಾದನೆಗೆ (ಜಿಡಿಪಿ) ಉದ್ಯಮದ ಕೊಡುಗೆ ಶೇಕಡ 22ರಷ್ಟು ಹಾಗೂ ಅಬಕಾರಿ ವಲಯಕ್ಕೆ ಶೇಕಡಾ 21 ರಷ್ಟಿದೆ.

ಇಂದು, ಭಾರತ ವಿಶ್ವದಲ್ಲೇ, ಅತ್ಯಧಿಕ ಪ್ರಮಾಣದಲ್ಲಿ ಟ್ರ್ಯಾಕ್ಟರುಗಳನ್ನು ತಯಾರಿಸುತ್ತಿದ್ದು ಮೊದಲ ಸ್ಥಾನದಲ್ಲಿದೆ. ಹಾಗೆಯೇ ಅತೀ ದೊಡ್ಡ ಪ್ರಮಾಣದಲ್ಲಿ ದ್ವಿಚಕ್ರವಾಹನಗಳನ್ನು ತಯಾರಿಸುತ್ತಿರುವ ಎರಡನೆಯ ರಾಷ್ಟ್ತ್ರವೂ ಹೌದು. ಅತ್ಯಧಿಕ ಸಂಖ್ಯೆಯಲ್ಲಿ ವಾಣಿಜ್ಯೌದ್ದೇಶದ ವಾಹನಗಳನ್ನು ತಯಾರಿಸುತ್ತಿರುವ ಐದನೆ ರಾಷ್ಟ್ತ್ರ ಎಂಬ ಹಿರಿಮೆ ಭಾರತದ್ದಾಗಿದೆ ಇಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ವಾಹನ ತಯಾರಿಕಾ ಕೇಂದ್ರವಾಗಿ ಹೊರ ಹೊಮ್ಮಿದೆ. ತನ್ನ ಅಗಾಧ ಸಾಮರ್ಥ್ಯದಿಂದಾಗಿ ಭಾರತದ ವಾಹನ ತಯಾರಿಕಾ ಉದ್ಯಮ, ದೇಶದ ಅಭಿವೃದ್ದಿಯನ್ನು ಮುನ್ನಡೆಸುವುದೆಂಬ ಖ್ಯಾತಿಯನ್ನು ಹೊಂದಿದೆ. ಮಾತ್ರವಲ್ಲದೆ ಅತ್ಯಧಿಕ ದರದ ಬೆಳವಣಿಗೆ ಪಥದಲ್ಲಿ ಮುನ್ನಡೆಯಲು ಉತ್ತೇಜನ ನೀಡಲಿದೆ ಎಂದು ಸಾರ್ವತ್ರಿಕ ಮನ್ನಣೆಗಳಿಸಿದೆ. ವಾಹನ ತಯಾರಿಕಾ ವಲಯ, ಬೆಳವಣಿಗೆಯ ಕಥೆ, ಸಿಂಹಾವಲೋಕನ ಹಾಗೂ ಮುನ್ನೌಟ ಬೀರಿದಾಗ, ಅತ್ಯಂತ ಪ್ರಭಾವ ಶಾಲಿಯಾಗಿ ಗೋಚರಿಸುತ್ತಿದೆ. ಆದಾಗ್ಯೂ ಈ ಉದ್ಯಮ ಹಲವು ಕ್ಷೇತ್ರಗಳಲ್ಲಿ ಕಳವಳಕ್ಕೂ ಕಾರಣವಾಗಿದೆ. ಸವಾಲುಗಳನ್ನು ಒಡ್ಡಿದೆ. ಹೆಚ್ಚುತ್ತಿರುವ ನಗರೀಕರಣ, ವಾಹನಗಳ ಸಂಖ್ಯೆ, ರಸ್ತೆ ಸಂಪರ್ಕ ಜಾಲಗಳ ಮೂಲ ಸೌಕರ್ಯದ ತ್ವರಿತ ಅಭಿವೃದ್ದಿ, ಅತಿ ವೇಗದ ವಾಹನಗಳ ಸಂಚಾರ, ಬದಲಾಗುತ್ತಾ ನಡೆದಿರುವ ಚಾಲನಾ ವಿಧಾನಗಳು, ರಸ್ತೆ ಅಪಘಾತಗಳಿಂದ ಗಾಯಗೊಳ್ಳುವವರ ಹಾಗೂ ಸಾವೀಗೀಡಾಗುವವರ ಸಂಖ್ಯೆಯ ಏರಿಕೆ, ಸಮಸ್ಯೆಯನ್ನು ಉಂಟುಮಾಡಿದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ 1,25,000 ಮಂದಿ ಗಾಯಗೊಳ್ಳುತ್ತಿದ್ದು 4,50,000 ಮಂದಿ ಮರಣ ಹೊಂದುತ್ತಿದ್ದಾರೆ.

ಎರಡು ದಶಕಗಳ ಹಿಂದಿನ ಮಾತು. ಭಾರತದಲ್ಲಿ ಆಗ, ರಸ್ತೆ ಸಾರಿಗೆ, ಅಪಘಾತಗಳಲ್ಲಿ ಮರಣ ಹೊಂದುವವರ ಸಂಖ್ಯಾಮಾನದಿಂದ, ಹೇಳುವುದಾದರೆ ದುರಂತ ಸಾವಿನ ಹತ್ತು ಪ್ರಮುಖ ಕಾರಣಗಳಲ್ಲಿ ಅದು ಹತ್ತನೇ ಸ್ಥಾನ ಪಡೆದಿತ್ತು. 2020ನೇ ಸಾಲಿನ ಹೊತ್ತಿಗೆ ಪ್ರಮುಖ ಹಂತಕ ದುರಂತಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆಯಲಿದೆ. ಅಸುರಕ್ಷಿತ ಸಾರಿಗೆ ಪರಿಸರ, ಕಳಪೆ ಎನ್ನಬಹುದಾದ ರಸ್ತೆ ಮೂಲಸೌಕರ್ಯ, ಮೋಟಾರು ವಾಹನಗಳ ಸಂಖ್ಯಾ ಬಲದಲ್ಲಿ ಹೆಚ್ಚಳ, ಸುರಕ್ಷತಾ ಇಂಜನೀಯರಿಂಗ್ ಕ್ರಮಗಳ ಕೊರತೆ ಹಾಗೂ ಅಸುರಕ್ಷಿತ ಚಾಲನೆ, ಇವೆಲ್ಲವೂ ರಸ್ತೆ ದುರಂತಗಳ ಅಪಾಯದ ಸಂಭಾವ್ಯತೆಯನ್ನು ಹೆಚ್ಚಿಸಿವೆ.

ಭಾರತದಂತಹ ಕಡಿಮೆ ವರಮಾನವಿರುವ ರಾಷ್ಟ್ತ್ರದಲ್ಲಿ, ರಸ್ತೆಸಾರಿಗೆ ಅಪಘಾತಗಳು ಸಂಭವಿಸದಂತೆ ತಡೆಯುವುದರಿಂದ, ಅಪಘಾತಗಳನ್ನು ಕಡಿಮೆ ಮಾಡುವುದರಿಂದ ಅಮೂಲ್ಯ ಸಂಪನ್ಮೂಲಗಳ ಉಳಿತಾಯವಾಗುತ್ತದೆ.

ರಸ್ತೆ ಸಾರಿಗೆಯಲ್ಲಿ ಸುರಕ್ಷತೆ ಎನ್ನುವುದು ಬಹು ವಲಯಗಳನ್ನು ಒಳಗೊಂಡಂತಹ ಬಹುಮುಖ ಸಮಸ್ಯೆಯಾಗಿದೆ, ರಸ್ತೆ ಮೂಲಸೌಕರ್ಯ ಅಭಿವೃದ್ದಿ, ನಿರ್ವಹಣೆ, ಸುರಕ್ಷಿತ ವಾಹನಗಳ ವಿನ್ಯಾಸ ರಚನೆ, ಕಾನೂನು ಮತ್ತು ಕಾನೂನಿನ ಜಾರಿ, ಮತ್ತು ಸಂಚಾರ ಯೋಜನೆ, ನಗರ ಭೂ ಬಳಕೆ ಯೋಜನೆ, ಇತ್ಯಾದಿಗಳನ್ನು ಇದು ಒಳಗೊಂಡಿದೆ.

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಡೀ ಸಮಸ್ಯೆಯ ವ್ಯಾಪ್ತಿ, ಒಂದು ಕಡೆ, ರಸ್ತೆಗಳು ಮತ್ತು ವಾಹನಗಳ ಇಂಜನೀಯರಿಂಗ್ ಅಂಶಗಳನ್ನು ಒಳಗೊಂಡಿದ್ದರೆ, ಇನ್ನೊಂದು ಕಡೆ, ವಾಹನ ಅಪಘಾತದ ನಂತರದ ಆರೋಗ್ಯದ ಕಾಳಜಿಯನ್ನೂ ಆವರಿಸುತ್ತದೆ. ಜಗತ್ತಿನಾದ್ಯಂತ ಅನೇಕ ದೇಶಗಳು, ವಾಹನ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿವೆ. ರಸ್ತೆಗಳ ಸ್ಥಿತಿ-ಗತಿ ವಾಹನಗಳ ವಿನ್ಯಾಸ ಸುಧಾರಣೆ, ಪರೋಕ್ಷ ಹಾಗೂ ನೇರ ವಾಹನ ಸುರಕ್ಷತಾ ಕ್ರಮಗಳ ಬಲವರ್ಧನೆ, ಸುರಕ್ಷಿತ ವಾಹನ ಚಾಲನೆಯ ಬಗ್ಗೆ ಅರಿವು ಮೂಡಿಸುವ ಆಂದೋಲನಗಳ ಸಂಘಟನೆ ಇವೇ ಆ ಕ್ರಮಗಳಾಗಿವೆ.

ರಾಷ್ಟ್ತ್ರೀಯ ರಸ್ತೆ ಸಾರಿಗೆಯ ಮೋಟಾರು ವಾಹನಗಳ ಪರೀಕ್ಷೆ-ಸಂಶೋಧನೆ ಮತ್ತು ಅಭಿವೃದ್ದಿ ಮೂಲ ಸೌಕರ್ಯ ಯೋಜನೆಯಡಿ, ಮೂರು ಅಪಘಾತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ಪ್ರಯೋಗಾಲ ಯಗಳಲ್ಲಿ, ವಾಹನ ಅಪಘಾತಗಳ ಸಂಭಾವ್ಯತೆ ಕುರಿತು ಪ್ರಯೋಗ-ಪರೀಕ್ಷೆಗಳು ನಡೆಯುತ್ತವೆ. ವಾಹನ ತನಿಖೆಯ ಈ ಪ್ರಯೋಗಾಲಯಗಳು ಕಾರ್ಯಾರಂಭ ಮಾಡುವುದರೊಂದಿಗೆ, ಅಂದರೆ 2012ರ ಹೊತ್ತಿಗೆ, ಭಾರತಕ್ಕೆ, ಈಗ ರೂಪಿಸಲಾಗುತ್ತಿರುವ ಸುರಕ್ಷತಾ ಮಾನಕಗಳಿಗೆ ಒಳಪಟ್ಟಂತೆ, ವಿನ್ಯಾಸವಿರುವ ವಾಹನಗಳ ತಯಾರಿಕೆ, ಅಭಿವೃದ್ದಿ ಹಾಗೂ ಪ್ರಮಾಣೀಕರಣ ಮಾಡಲು ಸಾಧ್ಯವಾಗುತ್ತದೆ. ವಾಹನಗಳ ಅಪಘಾತಗಳಿಗೆ ಸಂಬಂಧಿಸಿದಂತೆ ಹೊಸ ನಿಯಂತ್ರಣಗಳನ್ನು ಜಾರಿಗೆ ತರಲು ನೋಟಿಫಿಕೇಶನ್ ಈಗ ರಚನೆಯ ಹಂತದಲ್ಲಿದೆ.

ಅಪಘಾತ ಕುರಿತು ನಡೆಸಲಾಗುವ ಪರೀಕ್ಷೆಯಲ್ಲಿ ಆಯಾ ವಾಹನ ಪಡೆದ ದರ್ಜೆ ಹಾಗೂ ವಾಹನದಲ್ಲಿ ಅಳವಡಿಸಲಾಗುವ ಸುರಕ್ಷತಾ ವ್ಯವಸ್ಥೆ ವಿವರಗಳಿಂದಾಗಿ ವಾಹನ ಖರೀದಿದಾರರಿಗೆ, ವಾಹನ ಕೊಳ್ಳುವ ಬಗ್ಗೆ ಸೂಕ್ತ ನರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ವಾಹನಗಳಲ್ಲಿ ಪರೋಕ್ಷ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಅಪಘಾತದ ಸಂದರ್ಭಗಳಲ್ಲಿ ಗಾಯಗಳ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅತ್ಯಂತ ಆಧುನಿಕವಾದ ತಂತ್ರಜ್ಞಾನವನ್ನೂ, ಸುರಕ್ಷತಾ ನಿಯಮ-ನಿಬಂಧನೆಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಳ್ಳಬಹುದಾಗಿದೆ. ಹೀಗೆ ಮಾಡಿದಾಗ ಅಪಘಾತ ಮುಕ್ತ ಹಾಗೂ ಸುರಕ್ಷಿತ ವಾಹನ ವಾಹನ ಸಂಚಾರದ ಕನಸು ನನಸಾಗುತ್ತದೆ.

 

 

 

loading...

LEAVE A REPLY

Please enter your comment!
Please enter your name here