ಉರಿಯುವ ದೀಪ ಒಂದು ದಿನ ಆರಿ ಹೋಗುವುದು ನಿಶ್ಚಿತ

0
75

ಸಂಸಾರವೆಂಬುದೊಂದು ಗಾಳಿಯ ಸೊಡರು

ಸಿರಿಯಂಬುದೊಂದು ಸಂತೆಯೆ ಮಂದಿ

ಇದ ಮೆಚ್ಚಿ ಕೆಡಬೇಡ. ಮರೆಯದೆ

ಪೂಜಿಸು ನಮ್ಮ ಕೂಡಲಸಂಗಮದೇವ

                ಈ ಜಗತ್ತಿನ ವಸ್ತುಗಳೆಲ್ಲವೂ ಶೈಕ್ಷಣಿಕ ಮತ್ತು ಅಸ್ಥಿರ. ಯಾವುದೇ ವಸ್ತು ಇರಲಿ ಅದು ಶಾಸ್ವತವಾಗಿ ಇರುವುದಿಲ್ಲ ಮತ್ತು ಇರುವಷ್ಟು ದಿನವೂ ಸ್ಥಿರವಾಗಿರುವುದಿಲ್ಲ. ಅದು ಕ್ಷಣಕ್ಷಣಕ್ಕೂ  ಬದಲಾಗುತ್ತಲೇ ಇರುತ್ತದೆ. ಉರಿಯುವ ದೀಪ ಒಂದು ದಿನ ಆರಿ ಹೋಗುವುದು ನಿಶ್ಚಿತ. ಆದರೆ ಅದು ಆರುವವರೆಗಾದರೂ ಸ್ಥಿರವಾಗಿ ಇರುತ್ತದೆಯೆ? ಇಲ್ಲ. ಕ್ಷಣಕ್ಷಣವೂ ದೀಪ ಹೊಯ್ದಾಡುತ್ತಲೇ ಇರುತ್ತದೆ. ಈ ಕ್ಷಣದ ರೂಪ ಇನ್ನೊಂದು ಕ್ಷಣ ಇರುವುದಿಲ್ಲ. ಇನ್ನೊಂದು ಕ್ಷಣದ ರೂಪ ಮತ್ತೊಂದು ಕ್ಷಣ ಇರುವುದಿಲ್ಲ.

ಇತಿಹಾಸದಲ್ಲಿ ಕಣ್ಣಾಡಿಸಿದರೆ ನಾವು ಕಾಣುವುದು ಏನನ್ನು ? ಎಂದು ಬಲಾಢ್ಯವಾದ ಸಾಮ್ರಾಜ್ಯವೇ ಇರಲಿ, ಎಲ್ಲವೂ ಉರುಳಿ ಹೋಗಿವೆ. ಆದರೆ ನಮ್ಮ ಮನೆ-ಮಠ ಮಂದಿರ ಕಟ್ಟುವುದಾಗ ಇದು ಸ್ಥಿರವಾಗಿ ಇರುತ್ತದೆಂದು ನಾವು ಭಾವಿಸುತ್ತೇವೆ. ಮನೆಯನ್ನು ಕಟ್ಟುವಾಗಲೇ ತಂತ್ರಜ್ಞರು ಅದರ ಆಯುಷ್ಯ ಇಷ್ಟೇ ವರುಷ ಎಂದು ನಿರ್ಧರಿಸುತ್ತಾರೆಂಬುವುದು ಮರೆಯುತ್ತೇವೆ.

ಈ ಪ್ರಪಂಚದಲ್ಲಿ ಇರುವುದೆಲ್ಲವೂ ನೀರಿನಂತೆ ಹರಿದು ಹೋಗುತ್ತದೆ. ದೀಪದಂತೆ ನಿರಂತರ ಹೊಯ್ದಾಡುತ್ತದೆ. ಅಂತೆಯೇ ಅನುಭಾವಿಗಳೊಬ್ಬರು. ಹೇಳುತ್ತಾರೆ -ಷಿಏರಿದ್ದು ಒಂದು ದಿನ ಇಳಿಯುತ್ತದೆ. ತುಂಬಿದ್ದು ಒಂದು ದಿನ ಖಾಲಿಯಾಗುತ್ತದೆ. ಬಂದದ್ದು ಒಂದು ದಿನ ಹೊರಟು ಹೋಗುತ್ತದೆಷಿ ಅಲೆಗ್ಝಾಂಡರನು ಪ್ರಪಂಚವನ್ನೇ ಗೆಲ್ಲುವ ಕನಸು ಕಂಡಿದ್ದ. ಒಂದು ದಿನ ಅವನೇ ಮೂಲೆ ಗುಂಪಾಗಿದ್ದ. ತರುಣರಿಗೆ ತಾರುಣ್ಯದಲ್ಲಿ ಏನೆಲ್ಲ ಮೆಟ್ಟಿನಿಲ್ಲುತ್ತೇನೆ ಎನಿಸುತ್ತದೆ, ಅವರ ಈ ಅನಿಸಿಕೆಯನ್ನು ಕಂಡು ಕಾಲನು ಮೆಲ್ಲನೆ ನಗುತ್ತಾನೆ. ಈ ಸತ್ಯವನ್ನು ಅರಿತವರು ಎಂಥ ಪ್ರಸಂಗದಲ್ಲಿಯೂ ಎದೆಗೆಡುವುದಿಲ್ಲ. ಜೀವನದ ಕಾರ್ಯೋತ್ಸಾಹ ಕಳೆದುಕೊಳ್ಳುವುದಿಲ್ಲ.

ಯುವಕ ಭಗತ್ಸಿಂಗನಲ್ಲಿ ಅದೆಂಥ ಜೀವನೋತ್ಸಾಹ! ಸ್ವಾತಂತ್ರ್ಯ ಹೋರಾಟದಲ್ಲಿದ್ದ ಅವರಿಗೆ ಗಲ್ಲು ಶಿಕ್ಷೆ ಕೊಡುವ ನಿರ್ಣಯವಾಗಿತ್ತು. ಗಲ್ಲಿಗೆ ಏರಿಸಲು ಕೆಲವೇ ದಿನಗಳು ಉಳಿದಿದ್ದವು. ಭಗತ್ಸಿಂಗರು ಲೋಡುತಿರುಗಿಸುತ್ತ, ಸಾಮಯ ತೆಗೆಯುತ್ತ, ವ್ಯಾಯಾಮದಲ್ಲಿ ನಿರತರಾಗಿದ್ದರು. ಜೈಲಿನಲ್ಲಿದ್ದ ಆಂಗ್ಲ ಅಧಿಕಾರಿ ಕೇಳಿದ. ಶಿಇಂದೊ ನಾಳೆಯೋ ಗಲ್ಲಿಗೆ ಏರುವ ನೀನು ವ್ಯಾಯಾಮ ಮಾಡಿ ಏನು ಮಾಡುವೆ?ಷಿ ಭಗತ್ಸಿಂಗರು ಹೇಳುತ್ತಾರೆ. ಶಿಮರಣ ದೇವತೆಯನ್ನು ನಾನು ನಗೆಮೊಗದೊಂದಿಗೆ ಸ್ವಾಗತಿಸಬೇಕಾಗಿದೆಷಿ ಅದಕ್ಕೆ. ಭಗತ್ಸಿಂಗರು ಗಲ್ಲಿಗೆ ಹೋಗುವಾಗ ಹೇಳಿದ ಕೊನೆಯ ಮಾತಂತು ಜೀವನೋತ್ಸಾಹದ ಅಮರ ಗೀತೆಯಾಗಿದೆ- ಶೀನೀವು ನನ್ನ ದೇಹವನ್ನು ಕೊಲ್ಲಬಹುದು. ಆದರೆ ನನ್ನ ನಂಬಿಕೆಯನ್ನು ಕೊಲ್ಲಲಾರಿರಿ. ರಾಜ್ಯಗಳೇ ಉರುಳಿ ಹೋಗಬಹುದು. ಆದರೆ ನನ್ನ ನಂಬಿಕೆಯು ಅಮರವಾಗಿರುತ್ತದೆ.ಷಿ

ನಾವು ಆಯುಷ್ಯ ರೆಖೆಯನ್ನು ನೋಡಿ ಇನ್ನು ಕೆಲವೇ ವರುಷ ಉಳಿದಿವೆ ಎಂದು ಇವತ್ತೇ ಹಾಸಿಗೆ ಹಿಡಿಯುತ್ತೇವೆ! ಜೀವನದಲ್ಲಿ ಕಷ್ಟ-ನಷ್ಟಗಳು ಯಾರಿಗಾದರೂ ಬರುವವೇ, ಆದರೆ ಕಷ್ಟ -ನಷ್ಟಗಳನ್ನು ಎದುರಿಸುವ ಕೆಚ್ಚು-ಎದೆಗಾರಿಕೆ ನಮ್ಮಲ್ಲಿರಬೇಕು. ಬದುಕಿನಲ್ಲಿ ಬರುವ ಬಹುದೊಡ್ಡ ಕೇಡೆಂದರೆ ಮರಣ. ಈ ಮರಣವು ನನ್ನ ದೇಹಕ್ಕೆ ವಿನಹ ನನಗಲ್ಲ ಎಂದು ಭಾವಿಸಿದರೆ ಯಾವ ಭಯವೂ ಇಲ್ಲ. ಶೀಹೀಗೆ, ಸಾವನ್ನೇ ಸಹಜವಾಗಿ ತೆಗೆದುಕೊಂಡರೆ ಏನೂ ಸಂಕಷ್ಟವಿಲ್ಲ.ಷಿ

ಇನ್ನೊಬ್ಬ ದೇಶಭಕ್ತ ಬಾಲಕ. ಸ್ವಾತಂತ್ರ್ಯ ಪೂರ್ವದಲ್ಲಿ ಅವನದೊಂದು ಕನಸು. ಬ್ರಿಟಿಷರ ಕಚೇರಿಯ ಮೇಲೆ ರಾಷ್ಟ್ತ್ರ ಧ್ವಜ ಏರಿಸುವುದೇ ಆತನ ವೀರ ಕನಸು. ಒಂದು ದಿನ ಆತನು ಆ ಸಾಹಸವನ್ನು ಮಾಡಿದ. ಆದರೆ ಬ್ರಿಟಿಷರ ಕೇಂದ್ರ ಕಚೇರಿಯ ಮೇಲೆ ಧ್ವಜವನ್ನು ಏರಿಸಿ ಕೆಳಗಿಳಿದು ಬರುತ್ತಿರುವಾಗ ಪೋಲಿಸರು ಗುಂಡು ಹಾರಿಸಿದರು. ಬಾಲಕನು ನೆಲಕ್ಕೆ ಉರುಳಿದ. ಆಸ್ಪತ್ರೆಗೆ ಕರೆದೊಯ್ದರು, ಬಾಲಕನು ಪ್ರಜ್ಞಾವಸ್ಥೆಗೆ ಬಂದ ಮೇಲೆ ವೈದ್ಯರು ಹೇಳಿದರು. ಶಿಹೆದರಬೇಡ, ನಿನ್ನ ಪ್ರಾಣಕ್ಕೆ ಏನೂ ಅಪಾಯವಿಲ್ಲಷಿ ಬಾಲಕ ಹೇಳಿದ ಶಿಅದಿರಿಲಿ ವೈದ್ಯರೆ, ಪೋಲಿಸರು ಹಾರಿಸಿದ ಗುಂಡು ನನ್ನ ಎದೆಗೆ ತಗುಲಿದೆಯೋ ಅಥವಾ ಬೆನ್ನಿಗೆ ತಗುಲಿದೆಯೋ ಹೇಳಿ!

ವೈದ್ಯ ಕೇಳಿದ- ಶಿಏಕೆ?ಷಿ ಆ ಬಾಲಕ ಹೇಳಿದನು – ಶಿಎದೆಗೆ ತಗುಲಿದರೆ ನಾನು ವೀರನಾಗುತ್ತೇನೆ. ಇಲ್ಲದಿದ್ದರೆ ನಾನು ಹೇಡಿಯಾಗುತ್ತೇನೆ.ಷಿ ಇದು ದೇಶಭಕ್ತಿ, ಜೀವನೋತ್ಸಾಹ.

ಒಬ್ಬ ನಿರಾಶಾವದಿ ತತ್ತ-್ವಜ್ಞಾನಿ ಹೇಳಿದ- ಶೀಜೀವನದಲ್ಲಿ ಸಾವು ನೋವು ಬಿಟ್ಟರೆ ಏನಿದೇ?ಷಿ ಮಲಗಿದರೆ ನಿದ್ರೆ ಎದ್ದರೆ ಹಸಿವು. ಮಾತನಾಡಿದರೆ ಜಗಳ. ನೋಡಿದರೆ ಬಂಧನ, ಮಾಡಿದರೆ ಕೇಡು, ಮಾಡದಿದ್ದರೆ ಚಿಂತೆ. ಹೀಗೆ ಜೀವನವು ಸಂಕಟಗಳ ಸರಮಾಲೆ ಎಂದು ನಿರಾಶಾವಾದಿಗಳ ನಿಲುವು ಬದುಕಲಿಕ್ಕೆ ಅವರಿಗೆ ಬೇಸರ. ಇದು ಜೀವನದ ಒಂದು ಮುಖದ ದರ್ಶನ ನಿಜ. ಆದರೆ ಜೀವನದ ಇನ್ನೊಂದು ಮುಖ ನೋಡಿದರೆ ನನಗೆ ಆಶ್ಚರ್ಯ, ಆನಂದ ಎರಡೂ ಕಾಯ್ದಿದೆ. ಇದೇ ಪ್ರಪಂಚದಲ್ಲಿ. ಪಶು-ಪಕ್ಷಿಗಳು, ಗಿಡ-ಮರಗಳು, ಕ್ರಿಮಿ-ಕೀಟಗಳು ಅದೆಷ್ಟು ನೆಮ್ಮದಿಯಿಂದ ಬದುಕಿವೆ. ನವಿಲಿನ ಕುಣಿತ, ಕೋಗಿಲೆಯ ಹಾಡು, ಗಿಳಿಯ ಸವಿನುಡಿ, ಕರುವಿನ ನೆಗೆತ, ಹೂವಿನ ಸುಗಂಧ, ಸೂರ್ಯನ ಹೊಂಗಿರಣ, ಚಂದಿರನ ತಂಪು ಎಲ್ಲವೂ ಜೀವನೋತ್ಸಾಹದ ಸಂಕೇತ! ಉದಿಸುವ ಸೂರ್ಯನಿಗೆ, ಅರಳುವ ಹೂವಿಗೆ ಬೇಸರವೆಲ್ಲಿ? ನಿಸರ್ಗದಲ್ಲಿರುವ, ಜೀವನೋತ್ಸಾಹ ನಮ್ಮಲ್ಲಿ ಬಂದರೆ ನಮ್ಮ ಜೀವನವೇ ಒಂದು ನಿತ್ಯೌತ್ಸವವಾಗುತ್ತದೆ!!

ಜೀವನವೆಂದರೆ ಏರುವುದು- ಇಳಿಯುವುದು, ಬರುವುದು-ಹೋಗುವುದು! ಆದ್ದರಿಂದ ನಾವು ಈ ಜಗತ್ತಿಗೆ ಬರುವಾಗಲೂ ನಗುತ್ತಲೇ ಬರುವುದು, ಹೋಗುವಾಗಲೂ ನಗುತ್ತಲೇ ಹೋಗುವುದು. ಅಧಿಕಾರ ಗದ್ದುಗೆ ಏರುವಾಗಿನ ಉತ್ಸಾಹ, ಇಳಿಯುವಾಗಲೂ ಇದ್ದರೆ ಅದೇ ಜೀವನೋತ್ಸಾಹ. ಒಂದು ಮಗು ಎದ್ದರೂ ನಗುತ್ತದೆ, ಬಿದ್ದರೂ ನಗುತ್ತದೆ. ಹೊಟ್ಟೆಹೊಸೆದು ಅಂಬೆಗಾಲಿಟ್ಟು ಏಳುತ್ತ-ಬೀಳುತ್ತಲೇ ಅದು ಬೆಳೆಯುತ್ತದೆ? ಅದು ಜೀವನೋತ್ಸಾಹ. ನಾವು ಬಿದ್ದರೆ ನೆಲವನ್ನೇ ಹಿಡಿಯುತ್ತೇವೆ. ಎದ್ದರೆ ಆಕಾಶವನ್ನೇ ನೋಡುತ್ತೇವೆ. ಹಾಗಾಗದೆ ಎಂಥ ಪ್ರಸಂಗದಲ್ಲಿಯೂ ಜೀವನದ ಏರಿತಗಳ ಮಧ್ಯದಲ್ಲಿಯೂ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಸಂತಸದಿಂದಿರುವುದೇ ವೀರ್ಯ!

ಸ್ಮ್ಕತಿ:- ಸ್ಮ್ಕತಿ ಎಂದರೆ ಸತ್ಯದ ಸ್ಮರಣೆ. ನಾವು ಮೂರು ಸಂಗತಿಗಳನ್ನು ಎಂದೂ ಮರೆಯಬಾರದು.

1) ನಮ್ಮ ದೇಹ ನಶ್ವರ ವಾದರೂ ಆತ್ಮ ಅಮರ ವಾಗಿದೆ.

2) ನಮ್ಮ ಮನೆ-ಮಠಗ ಳಿಗಿಂತ ಈ ಜಗತ್ತು ವಿಶಾಲ ವಾಗಿದೆ.

3) ಬದುಕಿನ ಗುರಿ ಧನ-ಕನಕವಲ್ಲ, ಪರಮಶಾಂತಿ!

ಗಡಿಗೆ ಒಡೆದರೂ ಮಣ್ಣು ಒಡೆಯುವುದಿಲ್ಲ. ಹಾಗೇ ದೇಹ ನಾಶವಾದರೂ ಆತ್ಮನು ಅವಿನಾಶಿಯಾಗಿ ರುವನು.

ಸಿರಿವಂತರು ತಮ್ಮ ಮನೆಯಲ್ಲಿಯ ಸೂರ್ಯ-ಚಂದ್ರರ ಚಿತ್ರಗಳನ್ನೇ ನೋಡಿ ಹೆಮ್ಮೆ ಪಡುತ್ತಾರೆ, ಅಭಿಮಾನಿಸುತ್ತಾರೆ. ಆದರೆ ಸಾವಿರ ಸಾವಿರ ವರುಷಗಳಿಂದ ವಿಶ್ವವನ್ನೆ ಬೆಳಗುತ್ತಿರುವ ಸೂರ್ಯ-ಚಂದ್ರರನ್ನು ಮರೆಯುತ್ತಾರೆ. ಒಬ್ಬ ಸಿರಿವಂತ ಲಕ್ಷಾಂತರ ಹಣ ಖರ್ಚು ಮಾಡಿ ಮನೆ ಕಟ್ಟಿದ, ಬಡ ರೈತನೊಬ್ಬನಿಗೆ ಹೆಮ್ಮೆಯಿಂದ ತನ್ನ ಮನೆ ತೋರಿಸುತ್ತಿದ್ದ. ಸ್ನಾನಗೃಹದಲ್ಲಿರುವ ಟಬ್ ಎಂದರೆ ಸ್ನಾನದ ಬುಟ್ಟಿ ತೋರಿಸಿ, ಶಿಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇನೆ. ಇದರಲ್ಲಿ ಹತ್ತು ಕೊಡ ನೀರು ಹಿಡಿಯುತ್ತದೆಷಿ ಎಂದು. ರೈತ ಹೇಳಿದ- ಶಿನಾನು ನನ್ನ ದನಗಳಿಗೆ ನೀರು ಕುಡಿಸುವ ದವಣಿ ಇದ್ದಕ್ಕಿಂತ ವಿಶಾಲವಾಗಿದೆ!ಷಿ ಎಂದ. ಸಿರಿವಂತ ಹೇಳಿದ- ಶಿಇದು ದವಣಿ ಅಲ್ಲ, ಟಬ್!ಷಿ ರೈತ ಹೇಳಿದ- ಶಿನನ್ನ ಟಬ್ ಇದಕ್ಕಿಂದಲೂ ವಿಶಾಲವಾಗಿದೆ.ಷಿ ಸಿರಿವಂತನು ಅದೆಲ್ಲಿದೆ?ಳಿ ಎಂದು ಕೇಳಿದನು. ಬಡವನು ಶಿತೋರಿಸುತ್ತೇನೆ ಬಾಷಿ ಎಂದು ತುಂಬಿ ಹರಿಯುವ ಹೊಳೆಗೆ ಜಿಗಿದು ಶಿಇದೇ ನನ್ನ ಟಬ್ಷಿ ಎಂದಾಗ ಸಿರಿವಂತನಿಗೆ ವಿಶಾಲ ವಿಶ್ವದ ದರ್ಶನವಾಗಿತ್ತು!!. ಎಷ್ಟೌ ಸಲ ನಾವು ಇರದಿರೆ ಶಿಈ ಮನೆ ಈ ದೇಶ ನಡೆಯುವುದಿಲ್ಲಷಿ ಎನ್ನುತ್ತೇವೆ. ಆದರೆ ಹೀಗೆಂದವರೆಲ್ಲರೂ ಹೋದರೂ ಜಗತ್ತು ನಡೆದೇ ಇದೆ ಎನ್ನುವುದನ್ನು ಮರೆಯುತ್ತೇವೆ.

ಮೂರನೆಯದಾಗಿ, ಜೀವನದ ಗುರಿ ಪರಮಶಾಂತಿಯೇ ವಿನಾ ವಿಷಯ ಸೌಖ್ಯವಲ್ಲ. ಇದನ್ನು ಮರೆತು ಎಷ್ಟೌ ಜನ ಮಾರುತಿ ಗುಡಿಗೆ ಹೋಗಿ- ಶಿನಮ್ಮ ಮಕ್ಕಳ ಲಗ್ನ ಮಾಡಿಸುಷಿ ಎಂದು ಬೇಡಿಕೊಳ್ಳುತ್ತಾರೆ. ಮಾರುತಿ ಹೇಳುತ್ತಾನೆ- ಶಿ ಲಗ್ನ ಮಾಡಿಕೊಂಡವರ ಬೆನ್ನು ಹತ್ತೆ ರಾಮಾಯಣ ಆಗಿದೆ.

ಇನ್ನಾರ ಲಗ್ನವೂ ಬೇಡ; ವಿಘ್ನವೂ ಬೇಡ ಎಂದೇ ಊರು ಹೊರಗೆ ನಿಂತಿದ್ದೇನೆ!!ಷಿ ಸಂಸಾರದ ಗದ್ದಲದಲ್ಲಿ ಗಂಟೆ-ಜಾಗಟೆಗಳ ಶಬ್ದದಲ್ಲಿ ಮಾರುತಿಯ ಮಾತು ನಮಗೆ ಎಲ್ಲಿ ಕೇಳಿಸುತ್ತದೆ? ವಿಷಯಸುಖದ ಬೆನ್ನು ಹತ್ತಿ ನಡೆದು ಹೋದ ರಾಮಾಯಣ ಮಹಾಭಾರತಗಳನ್ನು ನಾವು ಮರೆಯುತ್ತೇವೆ. ಮತ್ತೆ ಪ್ರಾಪಂಚಿಕ ಸುಖಗಳನ್ನೇ ಬಯಸುತ್ತೇವೆ; ಬಂಧನಕ್ಕೊಳಗಾಗುತ್ತೇವೆ. ಆದುದರಿಂದ  ಜೀವನದ ಗುರಿ ವೈಷಯಿಕ ಸುಖವಲ್ಲ, ಪರಮಶಾಂತಿ ಎಂದು ಅರಿತಿರುವುದೇ ಸ್ಮ್ಕತಿ! ಅದು ಸತ್ಯ-ಶಿವಸ್ಮ್ಕತಿ. ಆದರಿಂದ ಜೀವನೋತ್ಸಾಹ!!

(ಸಂಗ್ರಹ) ಆರ್.ಜಿ.

 

 

loading...

LEAVE A REPLY

Please enter your comment!
Please enter your name here