ದುರ್ಗಾದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ

0
21

 

ಹಳಿಯಾಳ: ಪೊಲೀಸ್ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುತ್ತಿರುವ ಶ್ರಿÃ ದುರ್ಗಾದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಶೃದ್ಧಾ-ಭಕ್ತಿ, ಸಂಭ್ರಮ-ಸಡಗರದಿಂದ ನೆರವೇರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.
ವಿಕಾರಿನಾಮ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಸೃಷ್ಟಿ ಗುರುವಾರದಂದು ಬೆಳಿಗ್ಗೆ ೯ ಗಂಟೆಗೆ ಪಂಚಗವ್ಯ ಶುದ್ಧಿÃಕರಣ, ಪುಣ್ಯಾಹವಾಚನ, ಗಣಹೋಮ, ಕಳಸಪೂಜಾ, ಕುಷ್ಮಾಂಡ ಬಲಿದಾನ, ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ. ಮರುದಿನ ಸಪ್ತಮಿ ಶುಕ್ರವಾರ ಬೆಳಿಗ್ಗೆ ೯ ಗಂಟೆಗೆ ನವಗ್ರಹ ಹೋಮ, ಬಲಿದಾನ, ಮಂಗಳಾರತಿ ನಂತರ ಮಧ್ಯಾಹ್ನ ೧೨ ಗಂಟೆಗೆ ಶ್ರಿÃ ಸತ್ಯನಾರಾಯಣ ಪೂಜೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ೪ ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣಿಗೆ.

ಶನಿವಾರ ಬೆಳಿಗ್ಗೆ ೯.೪೦ ಗಂಟೆಯ ವೃಷಭ ಲಗ್ನದಲ್ಲಿ ಮಹಾಪೂಜೆ, ಕುಂಕುಮಾರ್ಚನೆಯ ನಂತರ ಮಧ್ಯಾಹ್ನ ೧ ರಿಂದ ಸಾರ್ವಜನಿಕರು ಶ್ರಿÃದುರ್ಗಾದೇವಿಗೆ ಉಡಿ ತುಂಬಲಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಮೋಹನ ವಝೆ ತಿಳಿಸಿದ್ದಾರೆ. ರಾತ್ರಿ ೧೦ ಗಂಟೆಗೆ ಶ್ರಿÃ ದುರ್ಗಾದೇವಿ ಕಲಾ ಮಂಟಪದಲ್ಲಿ ಶ್ರಿÃದುರ್ಗಾ ನಾಟ್ಯ ಸಂಘ, ಶ್ರಿÃ ಮಂಜುನಾಥ ಡ್ಯಾನ್ಸ್ ಕ್ಲಾಸ್ ಹಾಗೂ ಕರ್ನಾಟಕ ಡ್ಯಾನ್ಸ್ ಅಕಾಡೆಮಿ ಇವರಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

loading...