ಒಂದು ಕಡೆಗೆ ಉಪವಾಸ ಮತ್ತೊಂದೆಡೆ ಚರ್ಚೆ

0
25

ಬಹು ನೀರೀಕ್ಷೆಯ ಅಣ್ಣಾ ಮತ್ತು ಸರಕಾರದ ನಡುವಿನ ಕದನ ಕೊನೆಗೂ ಅಂತಿಮ ಘಟ್ಟವನ್ನು ತಲುಪಿದೆ. ದಶಕಗಳಿಂದ ಕನಸಾಗಿ ಉಳಿದಿದ್ದ ಲೋಕಪಾಲ ಮಸೂದೆ ಕೊನೆಗೂ ನನಸಾಗುವ ಸಂದರ್ಭಕ್ಕೆ ಈಗ ಕ್ಷಣ ಗಣನೆ ಆರಂಭವಾಗಿದೆ.  ಒಂದು ಕಡೆಗೆ ದೆಹಲಿಗೆ ಸಂಸತ್ತಿನ ಲೋಕಸಭೆಯಲ್ಲಿ ಮಂಗಳವಾರದಿಂದ ಲೋಕಪಾಲ ಮಸೂದೆಯ ಮೇಲೆ ಐತಿಹಾಸಿಕ ಚರ್ಚೆ ಆರಂಭವಾಗಿದೆ. ಮತ್ತೊಂದು ಕಡೆಗೆ ಈಗ ಮಂಡಿಸಿರುವ  ಮಸೂದೆ ದುರ್ಬಲವಾಗಿದೆ ಎಂದು ಆರೋಪಿಸಿ ರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಮೂರು ದಿನಗಳ ಕಾಲ  ತಮ್ಮ ಉಪವಾಸವನ್ನು  ಮಂಗಳವಾರ ದಿಂದ  ಮುಂಬೈಯಲ್ಲಿ ಆರಂಭಿಸಿದ್ದಾರೆ.  ಹೀಗಾಗಿ ಉಭಯ ಬಣಗಳ  ನಡುವಿನ ಹೋರಾಟ ಈಗ ಆರಂಭವಾಗಿದೆ.  ಈ ಹೋರಾಟದಲ್ಲಿ ಯಾರು ಗೆಲವು ಪಡೆಯುತ್ತಾರೆ ಎಂಬುದು ಗುರುವಾದ ವೇಳೆಗೆ ಸ್ಪಷ್ಟವಾಗಲಿದೆ.

ನೀರೀಕ್ಷೆಗಳ ಮಹಾಪೂರವನ್ನೇ ಹೊರಿಸಿರುವ ಐತಿಹಾಸಿಕ ಲೋಕಪಾಲ ಮಸೂದೆ ಕುರಿತು ಲೋಕಸಭೆಯಲ್ಲಿ ಮಂಗಳವಾರದಿಂದ ಚರ್ಚೆ ಆರಂಭ ವಾಗಿದೆ. ಈ ಕುರಿತು ಚರ್ಚೆ ಮಾಡು ವುದಕ್ಕಾಗಿಯೇ ಮೂರು ದಿನಗಳ ಕಾಲ  ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ವಿಸ್ತರಿಸಲಾಗಿದೆ.

ಚಳಿಗಾಲದ ಅಧಿವೇಶನದಲ್ಲಿಯೇ ಈ ಮಸೂದೆ ಅಂಗೀಕಾರವಾಗಬೇಕು ಎಂಬ ಅಣ್ಣಾ ಹಜಾರೆ ಎಚ್ಚರಿಕೆಗೆ ಮಣಿದಿರುವ  ಕೇಂದ್ರ ಸರಕಾರ  ಪ್ರಸಕ್ತ ಅಧಿವೇಶನದಲ್ಲಿಯೇ ಮಸೂದೆ ಅಂಗೀಕಾರದ  ಮೂಲಕ ಭ್ರಷ್ಟಾಚಾರದ ವಿರುದ್ಧ  ಸಮರಕ್ಕೆ ನಾನೂ ಸಿದ್ದ ಎಂಬ ಸಂದೇಶ ಸಾರಲು ಮುಂದಾಗಿದೆ. ಜೊತೆಗೆ ಮಸೂದೆ ಅಂಗೀಕಾರವನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯ ವಿಷಯವಾಗಿ ಸ್ವೀಕರಿಸಿದ್ದು. ಅಧಿವೇಶನದ ಈ ಮೂರು ದಿನ  ತಮ್ಮ ಪಕ್ಷದ  ಎಲ್ಲಾ ಸದಸ್ಯರು  ಕಡ್ಡಾಯವಾಗಿ  ಸದನದಲ್ಲಿ ಹಾಜರು ಇರಬೇಕು ಎಂಬ ವಿಪ್ ಜಾರಿ ಮಾಡಿದೆ.  ಜೊತೆಗೆ ಮೈತ್ರಿ ಪಕ್ಷಗಳಿಗೂ ಇದೇ ರೀತಿಯ ವಿಪ್ ಹೊರಡಿಸುವಂತೆ ಮನವಿ ಮಾಡಿದೆ. ಮೂರು ದಿನಗಳ ಅಧಿವೇಶ ನದ ಅವಧಿಯಲ್ಲಿ ಲೋಕಪಾಲ – ಲೋಕಾಯುಕ್ತ ಭ್ರಷ್ಟಾಚಾರ ಕುರಿತು ರಹಸ್ಯ ಮಾಹಿತಿ ಹೊರಗೆ ತರುವವರಿಗೆ ರಕ್ಷಣೆ ನೀಡುವ ಮತ್ತು ಲೋಕಪಾಲಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡುವ  ಮಸೂದೆ ಅಂಗೀಕರಿಸುವ ಉದ್ದೇಶವನ್ನು  ಹೊಂದಲಾಗಿದೆ.  ಆದರೆ ಕರಡು ಮಸೂದೆಯಲ್ಲಿ ಕೆಲ ಅಂಶಗಳ ಬಗ್ಗೆ ಈಗಾಗಲೇ ಪ್ರತಿ ಪಕ್ಷಗಳು ತೀವ್ರ ಆಕ್ಷೇಪ  ವ್ಯಕ್ತ ಪಡಿಸಿದೆ. ಲೋಕಪಾಲ ಮತ್ತು ಲೋಕಾಪಾಲ ಆಯ್ಕೆ ಸಮಿತಿಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲು ಕೊಡುವ ವಿಷಯದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿದೆ. ಜೊತೆಗೆ ಪ್ರಸಕ್ತ ಸ್ವರೂಪದಲ್ಲಿ ಲೋಕಪಾಲ ಮಸೂದೆ ಅಂಗೀಕಾರವಾದರೆ  ಅದು ಅತ್ಯಂತ ದುರ್ಬಲವಾಗಲಿದೆ ಎಂದು ಹೇಳಿದೆ. ಹೀಗಾಗಿ ಮಸೂದೆ ಕೆಲವೊಂದು ತಿದ್ದುಪಡಿ  ತರುವ ಸಂಬಂಧ ತಿದ್ದುಪಡಿ ನಿಲುವಳಿ ಮಂಡಿಸುವುದಾಗಿ ಭಾಜಪ ಸಂಸದ ಅನಂತ ಕುಮಾರ ಹೇಳಿದ್ದಾರೆ. ಸಿಪಿಎಂ ಪಕ್ಷ ಕೂಡಾ ಈ ಮಸೂದೆ ದುರ್ಬಲವಾಗಿದೆ ಎಂಬ ಆಕ್ಷೇಪವನ್ನು ವ್ಯಕ್ತ ಪಡಿಸಿದ ಅಣ್ಣಾ ತಂಡದವರು  ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ  ಎಂದು ಸ್ಪಷ್ಟ ಪಡಿಸಿ ಉಪವಾಸದ ಹೋರಾಟವನ್ನು ಆರಭಿಸಿದೆ. ಅಣ್ಣಾ ತಂಡದ ಪ್ರಕಾರ ಲೋಕಪಾಲಕ್ಕೆ ಸ್ವಯಂ ಪ್ರೇರಣೆಯಿಂದ  ಪ್ರಕರಣ ದಾಖಲಿಸಿ ತನಿಕೆ ನಡೆಸುವ  ಅಧಿಕಾರ ಇರಬೇಕು.  ಲೋಕಪಾಲ ಮತ್ತು ಲೋಕಾಯುಕ್ತ ಸಂಸ್ಥೆಗಳಿಗೆ ಸ್ವತಂತ್ರವಾಗಿ ತನಿಖೆ ನಡೆಸುವ  ಅಧಿಕಾರ ಇರಬೇಕು. ಲೋಕಪಾಲ ವ್ಯಾಪ್ತಿಗೆ ಸಿಬಿಐ  ಸೇರಿಸಬೇಕು ಲೋಕಪಾಲ ಸಮೀತಿ ಸದಸ್ಯರ ಆಯ್ಕೆ ಸಹಮತಿಯಿಂದ ನಡೆಯಬೇಕು. ಕೆಳ ಹಂತದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಹೊಂದಲಾಗಿದೆ.  ಹೀಗಾಗಿಯೇ ಸರಕಾರ ಮತ್ತು ಅಣ್ಣಾ ತಂಡದ ನಡುವೆ ಭಿನ್ನಮತ ಉಂಟಾಗಿದೆ. ಸಧ್ಯದ ವಿಧೇಯಕದಲ್ಲಿ  ಸರಕಾರ ಸಿಬಿಐ ಯನ್ನು ಲಫಕಪಾಲ ವ್ಯಾಪ್ತಿಯಿಂದ ಹೊರಗೆ ಇಟ್ಟಿದೆ.  ಜೊತೆಗೆ ಕೆಳ ಹಂತದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೆ ಸೇರಿಸಿಲ್ಲ ಹೀಗಾಗಿ ಅಣ್ಣಾ ಹಾಗೂ ಸರಕಾರದ ನಡುವೆ ಸಮರ  ಆರಂಭವಾಗಿದೆ. ಅಂತಿಮವಾಗಿ ಈ ವಿಷಯದಲ್ಲಿ ಯಾವ ರೀತಿಯ ಫಲ ದೊರೆಯುತ್ತದೆ. ಎಂಬುದು ಗುರುವಾರವೇ ಮಾತ್ರ ಸ್ಪಷ್ಟವಾಗುವ  ಸಾಧ್ಯತೆ ಇದೆ. ಆದ್ದರಿಂದ ಅಲ್ಲಿಯ ವರೆಗೆ ಕಾಯಬೇಕಾಗಿರುವುದು ಅಗತ್ಯದ ಸಂಗತಿಯಾಗಿದೆ.  ಜೊತೆಗೆ ಜನರಿಗೆ ಮಾತ್ರ ಅತ್ಯಂತ ಪರಿಣಾಮಕಾ ರಿಯಾಗಿ ಲೋಕಪಾಲ ಮಸೂದೆ ಬೇಕು ಎಂಬ ಬಯಕೆ ಇರುವುದನ್ನು ಯಾರೂ ಮರೆಯಬಾರದು.

ಪ್ರಚಲಿತ  -ಮಲ್ಲಣ್ಣ

 

loading...

LEAVE A REPLY

Please enter your comment!
Please enter your name here