ನಾಯಿ ಮರಿಯೊಂದಿಗೆ ಲೈಂಗೀಕ ಪ್ರಕರಣ ಇಂದು ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ !

0
62


ಬೆಳಗಾವಿ

ಪತಿಯೇ ತನ್ನ ಪತ್ನಿಯನ್ನು ನಾಯಿಮರಿಯೊಂದಿಗೆ ಲೈಂಗೀಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಹಾಗೂ ಜೀವ ಬೇದರಿಕೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಲಯ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿರುವುದರಿಂದ ಶಿಕ್ಷೆ ಪ್ರಮಾಣವನ್ನು ಏ. ೧೦ಕ್ಕೆ ಕಾಯ್ದಿರಿಸಿ ಬೆಳಗಾವಿಯ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಬಿ.ಸೂರ‌್ಯವಂಶಿ ತೀರ್ಪು ನೀಡಿದ್ದಾರೆ.
ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ೨೫-೩-೨೦೧೭ ಕ್ಕಿಂತ ನಾಲ್ಕು ಮೊದಲಿನಿಂದ ಆರೋಪಿ ಪತಿ, ತನ್ನ ಪತ್ನಿಗೆ ಮೋಬೈಲ್‌ನಲ್ಲಿ ನೈಸರ್ಗಿಕಕ್ಕೆ ವಿರುದ್ದವಾಗಿರುವ ಲೈಂಗೀಕ ಕ್ರಿಯೆಯ ವಿಡಿಯೋಗಳ ತೋರಿಸಿ, ಇದೇ ರೀತಿಯಲ್ಲಿ ಲೈಂಗೀಕ ಚಟುವಟಿಕೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ವಿರೋಧಿಸಿದ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಾನು ಹೇಳಿದಂತೆ ಕೇಳದಿದ್ದಲ್ಲಿ ಕೊಲೆ ಮಾಡುವುದಾಗಿ ಬೇದರಿಕೆಯೊಡ್ಡಿದ್ದಾನೆ.
ದಿನನಿತ್ಯ ಕೊಲೆಯ ಬೆದರಿಕೆಯೊಡ್ಡಿ ಪ್ರತಿದಿನ ನೊಂದ ಮಹಿಳೆಯನ್ನು ಬೆತ್ತಲೆ ಮಾಡಿ ಲೈಂಗೀಕ ತೃಷೆ ತಿರಿಸಿಕೊಂಡಿದ್ದಾನೆ. ಅಲ್ಲದೇ ಪಕ್ಕದ ಮನೆಯಲ್ಲಿರುವ ಐದಾರು ತಿಂಗಳಿನ ನಾರಿಮರಿಯನ್ನು ತೆಗೆದುಕೊಂಡು ಬಂದು ಈ ಇದರೊಂದಿಗೆ ಲೈಂಗೀಕ ಚಟುವಟಿಕೆ ನಡೆಸುವಂತೆ ಒತ್ತಡ ಹಾಕಿದ್ದಾನೆ. ಇದಕ್ಕೆ ವಿರೋಧಿಸಿದ ಪತ್ನಿಗೆ ಸುಮ್ಮನೆ ಮಲಗಿಕೋ ಇಲ್ಲದಿದ್ದರೆ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಹೆದರಿಸಿ, ೧೫ ದಿನದ ಅವಧಿಯಲ್ಲಿ ಮೂರು ಬಾರಿ ನಾಯಿಮರಿಯಿಂದ ಸಂಬೋಗ ಮಾಡಿಸಿದ್ದಾನೆ.
ಅಲ್ಲದೇ ೨೨-೦೩-೨೦೧೭ ರಂದು ರಾತ್ರಿ ೧೦.೩೦ ಗಂಟೆಯ ಸುಮಾರಿಗೆ ಈ ದಿನ ನಾಯಿ ಮರಿಯೊಂದಿಗೆ ಮಲಗಿಕೊಂಡರೆ ಮಾತ್ರ ನನ್ನ ಮನೆಯಲ್ಲಿರು, ಇಲ್ಲವಾದಲ್ಲಿ ಮನೆ ಬಿಟ್ಟು ಹೋಗುವಂತೆ ಹಲ್ಲೆ ಮಾಡಿ ಪತ್ನಿ ಹಾಗೂ ತನ್ನ ಮೂರು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಬಿ.ಸೂರ‌್ಯವಂಶಿ ಅವರು ಆರೋಪಿತನು ಅಪರಾಧಿಯೆಂದು ತೀರ್ಮಾನಿಸಿ, ಶಿಕ್ಷೆ ಪ್ರಮಾಣವನ್ನು ಏ.೧೦ ಕ್ಕೆ ಮುಂದೂಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ ಪಾಟೀಲ ವಾದ ಮಂಡಿಸಿದ್ದಾರೆ.

loading...