ದೇವಾನಂದ – ಬಂಗಾರಪ್ಪ

0
61

ಚಿತ್ರ ರಂಗವಾದ ದೇವಾನಂದ ಅವರಿಗೆ ಚಿರಯುವಕ  ಎಂಬ ಹೆಸರಿತ್ತು ಅದೇ ರೀತಿ ಕರ್ನಾಟಕದ ರಾಜಕೀಯದಲ್ಲಿ ವರ್ಣಮಯ ವ್ಯಕ್ತಿತ್ವವನ್ನು ಪಡೆದ ಬಂಗಾರಪ್ಪ ಮುಪ್ಪಿನ ಕಾಲದಲ್ಲಿಯೇ ಯುವಕರಂತೆ ಕಾಣುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಆ ಇಬ್ಬರು ಮಕ್ಕಳೊಂದಿಗೆ ಬಂಗಾರಪ್ಪ ನಿಂತು ಕೊಂಡರೆ ಅವರು ಆ ಇಬ್ಬರ ತಂದೆ ಎಂದು ಹೇಳಲು ಸಾಧ್ಯವಿರಲಿಲ್ಲ. ಅವರಿಬ್ಬರ ಹಿರಿಯ ಸೋದರ ಅವರು ಆಗಿರಬಹುದು ಎಂದೇ ಅವರನ್ನು ನೋಡಿದವರು ಹೇಳುತ್ತಿದ್ದರು.

ಯುವಕನಂತೆ ಕಾಣಲು ಬಂಗಾರಪ್ಪ ಸದಾ ಕಾಲ ಶ್ರಮಿಸುತ್ತಿದ್ದರು. ಕೂದಲಿಗೆ ಸದಾ ಕಪ್ಪು ಬಣ್ಣವನ್ನು ಬಳೆದುಕೊಳ್ಳುತ್ತಿದ್ದರು  ಜೊತೆಗೆ ಕೂಲಿಂಗ್ ಗ್ಲಾಸ್ ಅವರ ಅವಿಭಾಜ್ಯ ಅಂಗವಾಗಿತ್ತು. ಸಾಮಾನ್ಯವಾಗಿ ರಾಜಕಾರಣಿಗಳು ಬಿಳಿಯ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದರೆ ಬಂಗಾರಪ್ಪ ಮಾತ್ರ ಬಣ್ಣ ಬಣ್ಣದ ಹೊಳಪಿನ  ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು  ಕೈ ತುಂಬ ಚಿನ್ನದ ಉಂಗುರ ಕೊರಳಲ್ಲಿ ಭಾರವಾದ ಚಿನ್ನದ ಚೈನುಗಳನ್ನು ಅವರು ಧರಿಸುತ್ತಿದ್ದರು. ಈ ರೀತಿಯಾಗಿ ಉಳಿದ ರಾಜಕಾರಣಿಗಳಿಗಿಂತ ಅವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದರು.

ಅವರು ಸೊರಬ ತಾಲೂಕಿನ ಜನರೊಂದಿಗೆ ಹಾಸು ಹೊಕ್ಕಾಗಿ ಬೆರೆತು ಬಂದಿದ್ದರು. ಅವರ ಕಷ್ಟ ಸುಖದಲ್ಲಿ ಒಂದಾಗುತ್ತಿದ್ದರು. ಅವರು ಬೆಂಗಳೂರಿನಲ್ಲಿ ಇದ್ದಾಗ ಸೊರಬ ದಿಂದ ಯಾರೇ ಬಂದು ಭೆಟ್ಟಿ ಮಾಡಿದರೂ ಅವರಿಗೆ ಹೊಟ್ಟೆ ತುಂಬ ಊಟ ಹಾಕಿ ಪ್ರಯಾಣದ ಖರ್ಚಿಗೆ  ಹಣ ಕೊಟ್ಟು ಕಳಿಸುತ್ತಿದ್ದರು.  ಅವರ ಈ ಗುಣದಿಂದಾಗಿಯೇ ಸೊರಬ ದ ಜನರು ಅವರ ಕೈ ಬಿಟ್ಟಿರಲಿಲ್ಲ ಅವರನ್ನು ಏಳು ಬಾರಿ ವಿಧಾನ ಸಭೆಗೆ ನಾಲ್ಕು ಬಾರಿ ಲೋಕಸಭೆಗೆ ಕಳಿಸಿದ ಕೀರ್ತಿ ಸೊರಬ ಜನರಿಗೆ ಸಲ್ಲುತ್ತದೆ. ಸೊರಬದ ಜನರು ಎಂದೂ ಬಂಗಾರೆಪ್ಪನವರನ್ನು ಅವರ ಹೆಸರಿನಿಂದ  ಕರೆಯುತ್ತಿರಲಿಲ್ಲ. ಅತ್ಯಂತ ಪ್ರೀತಿಯಿಂದ  ದೊಡ್ಡ ಸಾಹೇಬರು ಎಂದೇ  ಕರೆಯುತ್ತಿದ್ದರು. ಅವರು ಎಷ್ಟೇ ಪಕ್ಷಗಳನ್ನು ಬಿಟ್ಟು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡಿದರೂ ಸಹ ಅವರು ಸ್ವರಬದಿಂದ ಗೆದ್ದು ಬರುತ್ತಿದ್ದರು. ಅವರಿಗೆ ಕೇವಲ ರಾಜಕಾರಣದಲ್ಲಿ ಮಾತ್ರ ಆಸಕ್ತಿ ಇರಲಿಲ್ಲ.  ಜೊತೆಗೆ ಸಾಹಿತ್ಯ ಸಂಗೀತ ಬ್ಯಾಡಮಿಂಟನ್ ಡೊಲ್ಲು ಕುಣಿತಗಳಲ್ಲಿ ಅಪಾರವಾದ ಆಸಕ್ತಿ ಇತ್ತು. ದಾವಣಗೇರಿಯ  ಬೆಣ್ಣೆ ದೊಸೆಯನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಅವರು  ಕನಿಷ್ಠ ವರ್ಷಕ್ಕೆ  ಹತ್ತು ಬಾರಿ ದೋಸೆ ತಿನ್ನುವುದಕ್ಕಾಗಿಯೇ ದಾವಣಗೆರೆಗೆ ಬರುತ್ತಿದ್ದರು.

   

loading...

LEAVE A REPLY

Please enter your comment!
Please enter your name here