ನಾಳೆ ಮೊದಲ ಹಂತದ ಚುನಾವಣೆ; ಅಲ್ಪಸಂಖ್ಯಾತರ, ಜಾತಿ ಮತಗಳ ಮೇಲೆ ಎಲ್ಲರ ಕಣ್ಣು

0
16

ನವದೆಹಲಿ:-ಇದೇ 11ರಂದು ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ನಿವೃತ್ತ ಜನರಲ್‍ ವಿ.ಕೆ.ಸಿಂಗ್ ಹಾಗೂ ಮಹೇಶ್‌ ಶರ್ಮಾ ಅವರ ಹಣೆಬರಹ ನಿರ್ಧಾರವಾಗಲಿದೆ. ಅವರಿಬ್ಬರೂ ಕ್ರಮವಾಗಿ ಗಾಜಿಯಾಬಾದ್‌ ಮತ್ತು ಗೌತಮ್‌ ಬುದ್ಧ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಮುಜಫ್ಫರ್‌ ನಗರದಲ್ಲಿ ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ ಅವರು ಬಿಜೆಪಿಯ ಸಂಜೀವ್‌ ಬಲ್ಯಾನ್‌ ಅವರನ್ನು ಎದುರಿಸಲಿದ್ದಾರೆ. ಸಂಜೀವ್ ಅವರು ಮಾಜಿ ಕೇಂದ್ರ ಸಚಿವರಾಗಿದ್ದಾರೆ.

ಸಿಂಗ್‌ ಅವರ ಪುತ್ರ ಜಯಂತ್ ಚೌಧರಿ ಅವರು ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್ ಅವರನ್ನು ಬಗ್ಫತ್‌ ಕ್ಷೇತ್ರದಲ್ಲಿ ಎದುರಿಸಲಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಹಾರಾಷ್ಟ್ರದ 7, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಮೇಘಾಲಯ, ಅರುಣಾಚಲ ಪ್ರದೇಶದ ತಲಾ 2 ಮತ್ತು ಬಿಹಾರದ ನಾಲ್ಕು ಕ್ಷೇತ್ರಗಳಿಗೆ ಮತದಾನ ಇದೇ ಹಂತದಲ್ಲಿ ನಡೆಯಲಿದೆ.

ಆಂಧ್ರಪ್ರದೇಶದ 175, ಸಿಕ್ಕಿಂ 32 ಹಾಗೂ ಒಡಿಸ್ಸಾದ 28 ವಿಧಾನಸಭಾ ಕ್ಷೇತ್ರಗಳಿಗೂ ಮೊದಲ ಹಂತದಲ್ಲೇ ಲೋಕಸಭೆಯೊಂದಿಗೆ ಮತದಾನ ಗುರುವಾರ ನಡೆಯಲಿದೆ.
ಅರುಣಾಚಲ ಪ್ರದೇಶದ 60 ವಿಧಾನಸಭಾ ಕ್ಷೇತ್ರ, 2 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅರುಣಾಚಲ ಪಶ್ಚಿಮ ಕ್ಷೇತ್ರದಿಂದ ಕೇಂದ್ರ ಸಚಿವ ಕಿರಣ್‌ ರಿಜಿಜು ಸ್ಪರ್ಧಿಸಿದ್ದಾರೆ.
ದೂರದ ಈಶಾನ್ಯ ರಾಜ್ಯದ ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕೇವಲ ಏಕೈಕ ಮತದಾರ ಮಾತ್ರ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ದಿರಂಗ್ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಅದೇ ರೀತಿ ಅಲೋ ಈಸ್ಟ್ ಮತ್ತು ಯಚುಲಿ ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಮೂಲಗಳು ತಿಳಿಸಿವೆ.
ಮಿಜೋರಾಂ, ತ್ರಿಪುರಾ, ಮಣಿಪುರ, ಛತ್ತೀಸ್‌ಗಡ, ನಾಗಲ್ಯಾಂಡ್‌, ಸಿಕ್ಕಿಂ, ಅಂಡಮಾನ್‌ ಮತ್ತು ನಿಕೋಬಾರ್, ಲಕ್ಷದ್ವೀಪದಲ್ಲಿ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತ್ರಿಪುರಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿವೆ.
ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮತಗಳ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.
ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕವಾಗಿವೆ.

ಆಂಧ್ರಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಟಿಡಿಪಿ ಪಕ್ಷ ಮುಸ್ಲಿಮ್ ಮತಗಳನ್ನು ಕ್ರೋಡೀಕರಿಸುವಲ್ಲಿ ನಿರತವಾಗಿದೆ. ಆದರೆ ಜಗನ್‍ ಮೋಹನ್‍ ರೆಡ್ಡಿಯ ವೈಎಸ್ಆತರ್‍ ಕಾಂಗ್ರೆಸ್‍ ಕೂಡ ಮುಸ್ಲಿಮ್ ‍ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಹಲವು ರಾಜ್ಯಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಿಜೆಪಿಯ ಮಿತ್ರ ಪಕ್ಷದ ಪರವಾಗಿ ಮತ ಚಲಾಯಿಸುತ್ತಿದ್ದಾರೆ ಎಂದು ನಾಗಲ್ಯಾಂಡ್ ಮಾಜಿ ಸಚಿವರೊಬ್ಬರು ಹೇಳುತ್ತಾರೆ.
ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಈ ವರ್ಷ ಏಳು ಹಂತಗಳಲ್ಲಿ ಅಂದರೆ, ಏಪ್ರಿಲ್‍ 11, ಏಪ್ರಿಲ್‍ 18, 23, 29, ಮೇ 6, ಮೇ 12, ಮೇ 19ರಂದು ಮತದಾನ ನಡೆಯಲಿವೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.
ಆಂಧ್ರಪ್ರದೇಶದ 25 ಲೋಕಸಭಾ ಹಾಗೂ 175 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‍ 11ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ತೆಲಂಗಾಣದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಎಲ್ಲಾ 17 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆಡಳಿತಾರೂಡ ತೆಲಂಗಾಣ ರಾಷ್ಟ್ರ ಸಮಿತಿ ಈಗಾಗಲೇ ಅಸದುದ್ದೀನ್‍ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

loading...