ಮೂರು ಅವಧಿಗೆ ಸಂಸದರಾಗಿದ್ದರೂ ಜಿಲ್ಲೆಯ ಪ್ರಗತಿ ಶೂನ್ಯ.: ಶಿವಾನಂದ ಪಾಟೀಲ

0
35

ಕನ್ನಡಮ್ಮ ಸುದ್ದಿ-ತೇರದಾಳ: ಸತತ ಮೂರು ಅವಧಿಗೆ ಸಂಸದರಾಗಿದ್ದರೂ ಕೂಡ ಜಿಲ್ಲೆಯ ಪ್ರಗತಿ ಮಾತ್ರ ಶೂನ್ಯ. ಬಿಜೆಪಿಯ ಸಂಸದರು ಮಾಡದ ಅಭಿವೃದ್ಧಿಯನ್ನು ಅವಕಾಶ ಕೊಟ್ಟರೆ ಒಂದೇ ಅವಧಿಯಲ್ಲಿ ಒರ್ವ ಮಹಿಳೆಯಾಗಿ ವೀಣಾ ಕಾಶಪ್ಪನವರ ಮಾಡಲಿದ್ದಾರೆ ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಮಂಗಳವಾರದಂದು ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ತನ್ನ ಪಕ್ಷವನ್ನು ಇಲ್ಲವೇ ತನ್ನ ಸಾಮರ್ಥ್ಯದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದ್ದರು, ಆದರೆ ಈಗಿನ ಬಿಜೆಪಿಯವರು ಕೇವಲ ಮೋದಿ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದು ಆ ಪಕ್ಷದಲ್ಲಿರುವವರ ಸ್ಥಿತಿ ತಿಳಿಸುತ್ತದೆ. ಒಂದು ಬಾರಿ ಕೂಗಿದರೆ ಎಳು ಬಾರಿ ಪ್ರತಿಧ್ವನಿಸುವ ಗುಮ್ಮಟ ಜಿಲ್ಲೆಯವರಾಗಿ, ಸಂಸತ್‌ನಲ್ಲಿ ೧೫ ವರ್ಷದಲ್ಲಿ ಒಮ್ಮೆಯೂ ರಾಜ್ಯದ ಹಾಗೂ ಜಿಲ್ಲೆಯ ಕೂಗನ್ನು ಕೇಂದ್ರಕ್ಕೆ ಮುಟ್ಟಿಸದ ನಮ್ಮ ಸಂಸದರ ಬಗ್ಗೆ ನಾವೇನೆನ್ನಬೇಕು ಎಂದು ಲೇವಡಿ ಮಾಡಿದರು. ರಾಜ್ಯದ ೮೧೬೫ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಸಿದ್ದರಾಮಯ್ಯನವರಂತೆ,
ಮೋದಿಯವರು ರೈತರಿಗಾಗಿ ಸಾಲ ಮನ್ನಾ ಮಾಡಲಿಲ್ಲ, ಪ್ರತಿ ಖಾತೆಗೆ ೧೫ಲಕ್ಷ ರೂ. ಕೊಡುತ್ತೆನೆಂದಿದ್ದ ಅವರು ಇಲ್ಲಿಯವರೆಗೆ ೧೫ ಪೈಸೆ ಕೊಟ್ಟಿಲ್ಲ. ಅದಕ್ಕಾಗಿ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರಗೆ ಮತ ನೀಡಿ ಎಂದರು. ಕಾಂಗ್ರೆಸ್ ಮುಖಂಡ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಕಾಂಗ್ರೆಸ್ ತುಂಬಿದ ಕೊಡ ಅದು ಸದ್ದು ಮಾಡದು, ಬಿಜೆಪಿ ಅರ್ಧ ತುಂಬಿದ ಕೊಡ ಹಾಗಾಗಿ ಅದು ಸದ್ದು ಮಾಡುತ್ತದೆ. ೩ ಅವಧಿಗೆ ಸಂಸದರಾದರು ಕೆಲಸ ಮಾಡದ, ಬೇಡವೆಂದರು ಒತ್ತಾಯದಿಂದ ಅವರಿಗೆ ಟಿಕೆಟ್ ಕೊಟ್ಟದ್ದು ನೋಡಿದರೆ ಅವರ ಪಕ್ಷದ ಸ್ಥಿತಿ ತಿಳಿಯುತ್ತದೆ ಎಂದರು. ಸಂಗಪ್ಪ ಕುಂದಗೋಳ ಮಾತನಾಡಿ ರಾಮಕೃಷ್ಣ ಹೆಗಡೆ ಪರಾಜಿತಗೊಂಡ ಚುನಾವಣೆಯಂತೆ ಫಲಿತಾಂಶ ಹೊರಬರಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವೆ ಉಮಾಶ್ರಿÃ ಮಾತನಾಡಿ ಕಳೆದ ವಿಧಾನಸಭೆ ಚುನಾವಣೆಯಂತೆ ಈ ಚುನಾವಣೆಯನ್ನು ಮಾಡದೇ, ನಿಮ್ಮಲ್ಲಿನ ವೈಮನಸ್ಸನ್ನು ದೂರಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತನೀಡಿ. ಪಕ್ಷ ಒಡೆದು ಹಾಕುವಲ್ಲಿ ಹೊರಗಿನವರೊಂದಿಗೆ ಕೈಜೋಡಿಸಬೇಡಿ ಎಂದು ನೆಲ ಮುಟ್ಟಿ ನಮಸ್ಕರಿಸಿದರು. ಪಾರಸಮಲ್ ಜೈನ್, ನೀಲೇಶ ದೇಸಾಯಿ, ಪ್ರವೀಣ ನಾಡಗೌಡ, ಬಸವರಾಜ ಕೊಣ್ಣುರ, ಬಿ.ಎ. ದೇಸಾಯಿ ಮಾತನಾಡಿದರು. ಡಾ.ಎ.ಆರ್. ಬೆಳಗಲಿ, ಶ್ರಿÃಶೈಲ್ ದಳವಾಯಿ, ಮಲ್ಲಪ್ಪ ಸಿಂಗಾಡಿ, ಸುಕುಮಾರ ಪಾಟೀಲ, ಭರಮು ಉಳ್ಳಾಗಡ್ಡಿ, ಧರೆಪ್ಪ ಸಾಂಗ್ಲಿಕರ್, ಸುಶೀಲಕುಮಾರ ಬೆಳಗಲಿ, ಅಶೋಕ ಉಳ್ಳಾಗಡ್ಡಿ, ದೇವರಾಜ ಬಳಗಾರ ಸೇರಿದಂತೆ ಕಾಂಗ್ರೆಸ್ -ಜೆಡಿಎಸ್‌ನ ಹಲವಾರು ಕಾರ್ಯಕರ್ತರು ಇದ್ದರು.

loading...