ಅಕ್ರಮ ಬಂಧನದಿಂದ ಮಕ್ತೇದಾರರು ಮುಕ್ತ

0
20

ಮೋಳೆ,27- ಕಬ್ಬು ಕಟಾವು ಮಾಡಿ ಸಾಗಿಸುವ ಒಪ್ಪಂದ ಉಲ್ಲಂಘಿಸಿದ ಕಾರಣಕ್ಕಾಗಿ ಕಳೆದ 1 ವಾರದಿಂದ ನಿಪ್ಪಾಣಿಯ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯಲ್ಲಿ ಅಕ್ರಮವಾಗಿ ಬಂಧನದಲ್ಲಿದ್ದ ತಾಲೂಕಿನ ಉಗಾರ ಬಿ.ಕೆ. ಗ್ರಾಮದ ಮೂವರು ಮಕ್ತೆದಾರರನ್ನು ಕಾಗವಾಡ ಪೋಲಿಸರು ಶನಿವಾರ ಪತ್ತೆ ಹಚ್ಚಿ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ.

ನಿಪ್ಪಾಣಿಯ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಸಾಗಿಸುವ ಗುತ್ತಿಗೆಯನ್ನು ಪಡೆದಿದ್ದ ಉಗಾರ ಬುದ್ರುಕನ್ ಅಜಿತ ರಾಮಗೌಡ ಪಾಟೀಲ (ಮುಣೆಕರ್) ಪದ್ಮಣ್ಣ ಅಣ್ಣು ಚೌಗುಲೆ ಮತ್ತು ಪ್ರಮೊದ ಅಣ್ಣಸಾಹೇಬ ಎಂಬುವರು ಕಾರ್ಖಾನೆಯ ಒಪ್ಪಂದ ಉಲ್ಲಂಘಿಸಿದ ಕಾರಣದಿಂದ ಅವರನ್ನು ಕಾರ್ಖಾನೆಯ ಸಿಬ್ಬಂದಿ ಕಳೆದ 21 ರಂದು ಬಲವಂತವಾಗಿ ಎಳೆದೊಯ್ದು ಅಕ್ರಮವಾಗಿ ಕೂಡಿ ಹಾಕಿದ್ದರೆಂದು ಅವರ ಸಂಬಂಧಿಕರು ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ತಕ್ಷಣ ಈ ಕುರಿತು ಕಾಗವಾಡ ಪೋಲಿಸರಿಗೆ ನಿರ್ದೇಶನ ನೀಡಿದ ಸಿವ್ಹಿಲ್ ನ್ಯಾಯಾಧೀಶರು ಕಾಣೆಯಾಗಿರುವ ಮಕ್ತೆದಾರರನ್ನು ತಕ್ಷಣ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರ ಪಡಿಸುವಂತೆ ತಾಕೀತು ಮಾಡಿದ್ದರು.

ಬಂಧನಕ್ಕೊಳಗಾಗಿದ್ದ ಮಕ್ತೆದಾರರು ಕಾರ್ಖಾನೆಗೆ ಕಬ್ಬು ಸಾಗಿಸುವ ಒಪ್ಪಂದದ ಮೇರೆಗೆ ಮುಂಗಡವಾಗಿ 17.50 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ ಸಕಾಲದಲ್ಲಿ ಕಬ್ಬು ಕಟಾವು ಮಾಡುವ ಕೂಲಿಕಾರರು ಲಭ್ಯರಾಗದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸುವಲ್ಲಿ ವಿಳಂಬವಾಗಿತ್ತೆನ್ನಲಾಗಿದೆ. ಆಗ ಗ್ರಾಮಕ್ಕೆ ಆಗಮಿಸಿದ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಹಣ ವಾಪಸ್ ಕೊಡುವಂತೆ ಒತ್ತಾಯಿಸಿ ದ್ದರೆನ್ನಲಾಗಿದೆ. ಈ ವೇಳೆ ಅಜಿತ ಪಾಟೀಲ ಎಂಬುವವರು ಪಡೆದು ಕೊಂಡ ಹಣದ ಪೈಕಿ 4.50 ಲಕ್ಷ ರೂ. ಹಾಗೂ ಪದ್ಮಣ್ಣ ಚೌಗುಲೆ 2 ಲಕ್ಷ ರೂ. ಹಣವನ್ನು ಮರಳಿ ಕೊಟ್ಟರು ಕೂಡ ಕಾರ್ಖಾನೆಯ ಸಿಬ್ಬಂದಿ ಬಾಕಿ ಉಳಿದ ಹಣಕ್ಕಾಗಿ 7 ಎಕರೆ ಜಮೀನಿನಲ್ಲಿರುವ ಕಬ್ಬನ್ನು ಪೂರೈಸುವಂತೆ ಬಲವಂತ ಮಾಡಿದರು ಎನ್ನಲಾಗಿದೆ.

ಆಗ ಮಾತಿಗೆ ಮಾತು ಬೆಳೆದು ಕಾರ್ಖಾನೆಯ ಸಿಬ್ಬಂದಿ ಬಲವಂತದಿಂದ ಮಕ್ತೆದಾರರನ್ನು ಎಳೆ ದೊಯ್ದರೆಂದು ಅವರ ಸಂಬಂಧಿಕರು ನ್ಯಾಯಾಲಯಕ್ಕೆ ಸಲ್ಲಿ ಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದರನ್ವಯ ಕಾರ್ಯಾ ಚರನೆಗಿಳಿದ ಕಾಗವಾಡ ಎಸ್.ಐ ಶೀಶೈಲ್ ಗಾಬಿ ನೇತೃತ್ವದ ತಂಡ ಕಳೆದ ಶನಿವಾರ ಇವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಎದುರು ಹಾಜರು ಪಡಿಸಿದ ನಂತರ ಅವರನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಲಾಯಿತು.

 

loading...

LEAVE A REPLY

Please enter your comment!
Please enter your name here