ಮತದಾನದ ಜಾಗೃತಿ ಮೂಡಿಸಲು ಮೆಹಂದಿ ಕಾರ್ಯಾಗಾರ

0
22

ಕನ್ನಡಮ್ಮ ಸುದ್ದಿ-ಧಾರವಾಡ: ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರಲ್ಲಿ ಮತದಾನದ ಜಾಗೃತಿ ಮೂಡಿಸಲು ಮೆಹಂದಿ ಕಾರ್ಯಾಗಾರ ಮತ್ತು ಸ್ಪರ್ಧೆಗಳನ್ನು ಏರ್ಪಡಿಸುವ ಕಾರ್ಯಕ್ಕೆ ಇಲ್ಲಿನ ಕೆ.ಎಸ್. ಜಿಗಳೂರ ಕಲಾ ಹಾಗೂ ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಚಾಲನೆ ದೊರೆಯಿತು.
ಜಿಲ್ಲಾ ಸ್ವಿÃಪ್ ಸಮಿತಿಯ ಅಧ್ಯಕರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಮೆಹಂದಿ ಮೂಲಕ ವಿಭಿನ್ನವಾಗಿ ಮತದಾರರ ಸಂದೇಶ ಸಾರುವ ಆಯ್ದ ಅತ್ಯುತ್ತಮ ಮೆಹಂದಿಗಳಿಗೆ ಬಹುಮಾನ ನೀಡಲಾಗುವುದು. ಇದೇ ಮೊದ¯ ಬಾರಿಗೆ ಮತ ಚಲಾಯಿಸಲು ಅರ್ಹತೆ ಪಡೆದಿರುವ ಯುವಜನರು ತಪ್ಪದೇ ಮತದಾನ ಮಾಡಬೇಕು. ಮತ ಚಲಾಯಿಸಿದ ನಂತರ ತಮ್ಮ ಬೆರಳಿಗೆ ಹಾಕಿಸಿಕೊಂಡ ಶಾಹಿ ಕಾಣುವ ಹಾಗೆ ಮತಗಟ್ಟೆ ಎದುರು ನಿಂತುಕೊಂಡು ಸೆಲ್ಫಿ ಫೋಟೋ ತೆಗೆದುಕೊಂಡು ಜಿಲ್ಲಾ ಸ್ವಿÃಪ್ ಸಮಿತಿಗೆ ಕಳಿಸಿದರೆ ಉತ್ತಮವಾದ ಸೆಲ್ಫಿಗಳನ್ನು ಆರಿಸಿ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದರು. ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಸೇರಿದಂತೆ ಮತ್ತಿತರ ಗಣ್ಯರ ಅಂಗೈಯಲ್ಲಿ ವಿದ್ಯಾರ್ಥಿನಿಯರು ಮತದಾನ ಜಾಗೃತಿ ಸಂದೇಶ ಸಾರುವ ಮೆಹಂದಿ ಹಾಕುವುದು ಹಾಗೂ ಸ್ವಿÃಪ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಕಲಾವಿದ ಮಹದೇವ ಸತ್ತಿಗೇರಿ ಅವರು ನಗೆಹನಿಗಳ ಮೂಲಕ ನೆರೆದ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸುತ್ತಲೇ ಮತದಾನದ ಮಹತ್ವ ಸಂದೇಶ ಸಾರಿದರು. ನವ ಯುವ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೋಟ್ ಫಾರ್ ಇಂಡಿಯಾ, ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಮತ ಚಲಾಯಿಸೋಣ, ಮತದಾನ ನಮ್ಮ ಕರ್ತವ್ಯ ಅದನ್ನು ನಿಭಾಯಿಸೋಣ, ನನ್ನ ಮತ ನನ್ನ ಹಕ್ಕು ಹೀಗೆ ಮೊದಲಾದ ಘೋಷಣೆಗಳೊಂದಿಗೆ ಸ್ವಿÃಪ್, ಚುನಾವಣಾ ಆಯೋಗದ ಲಾಂಛನಗಳು ಮೆಹಂದಿಯಲ್ಲಿ ಅರಳಿದವು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಆರ್.ಬಿ. ಸೋನೆಖಾನ್, ಕೆ.ಎಂ. ಶೇಖ್, ಡಾ. ಸುರೇಶ ಹಿರೇಮಠ, ಶಾಂತಾ ಪಾಟೀಲ ಕುಲಕರ್ಣಿ ಇದ್ದರು. ಪ್ರಾಚಾರ್ಯ ಡಾ. ನಿರ್ಮಲಾ ಹಿರೇಗೌಡರ್ ಸ್ವಾಗತಿಸಿದರು, ವಿದ್ಯಾಶ್ರಿÃ ಗಾಮಣ್ಣವರ್ ನಿರೂಪಿಸಿದರು. ಶಕುಂತಲಾ ಬಿರಾದಾರ ವಂದಿಸಿದರು.

loading...