ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತಯಾಚನೆ

0
22

ಕನ್ನಡಮ್ಮ ಸುದ್ದಿ-ಬೆಳಗಾವಿ: ಲೋಕಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ‌ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾದ ಡಾ. ವ್ಹಿ ಎಸ್ ಸಾಧುನವರ ಪರವಾಗಿ ಉಚಗಾಂವ ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯಕರ್ತರೊಂದಿಗೆ ಹಾಗೂ ಮುಖಂಡರೊಂದಿಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗುರುವಾರ ಚುನಾವಣೆಯ ಸಭೆ ನಡೆಸಿದರು.

ಬಳಿಕ ಅತವಾಡ, ಬೆಕ್ಕಿನಕೇರಿ ಗ್ರಾಮಗಳಲ್ಲಿ ಚುನಾವಣೆಯ ಪ್ರಚಾರವನ್ನು ಕೈಗೊಂಡು ಮತಗಳನ್ನು ಯಾಚಿಸುವುದರ ಮುಖಾಂತರ ಡಾ. ಸಾಧುನವರನ್ನು ಬೆಂಬಲಿಸಿ ಅತ್ಯಧಿಕ ‌ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ಕಿರಣ ಸಾಧುನವರ, ಯುವರಾಜಣ್ಣಾ ಕದಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಡೋಕಳಕರ್ ಉಪಸ್ಥಿತರಿದ್ದರು.

loading...