ಬಿಜೆಪಿ ಅಭ್ಯರ್ಥಿ ಫೋಟೋ ಎಡಿಟ್ ಮಾಡಿದ ಕಾಂಗ್ರೆಸ್ ವಿರುದ್ದ ದೂರು: ಕಡಾಡಿ

0
40

ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಹಾಗೂ‌ ಹಾಲಿ ಸಂಸದ ಸುರೇಶ ಅಂಗಡಿ ಅವರ ಫೋಟೋ ಎಡಿಟ್ ಮಾಡಿ ಕಾಂಗ್ರೆಸ್ ಧ್ವಜ ಹಿಡಿದಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದ ತಪ್ಪಿತಸ್ಥರ ವಿರುದ್ದ ದೂರು ನೀಡಲಾಗುವುದು ಎಂದು ಬಿಜೆಪಿ ಮುಖಂಡ ಈರಣ್ಣಾ ಕಡಾಡಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ನವರಿಗೆ ಚುನಾವಣೆಯ ಎದುರಿಸಲು ಯಾವುದೇ ವಿಷಯ ಇಲ್ಲ. ಬಿಜೆಪಿಯ ಅಭ್ಯರ್ಥಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಎಡಿಟ್ ಮಾಡಿಕೊಂಡು ಅಪಪ್ರಚಾರ ನಡೆಸಿರುವ ವಿರೋಧ ಪಕ್ಷದ ವಿರುದ್ದ ದೂರು ನೀಡಲಾಗುವುದು ಎಂದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಬಿಜೆಪಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಏ.12 ರಂದು ಮಾಜಿ ವಿಧಾನಪರಿಷತ್ತಿನ ಸದಸ್ಯ ತಾರಾ ಅವರು ಗ್ರಾಮೀಣ ಹಾಗೂ ಸವದತ್ತಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಏ.13 ರಂದು ಮಾಜಿ ಸಿಎಂ ಯಡಿಯೂರಪ್ಪ ನವರು ಬೆಳಗ್ಗೆ 10ಕ್ಕೆ ಗೋಕಾಕನಲ್ಲಿ ಸಾರ್ವಜನಿಕರ ಸಭೆ ನಡೆಸಿ ಮಧ್ಯಾಹ್ನ 12 ಕ್ಕೆ ಬೈಲಹೊಂಗಲ ನಲ್ಲಿ ಸಮಾವೇಶ ನಡೆಸಲಿದ್ದಾರೆ ಎಂದರು.
ಏ.14 ರಂದು ಬಿ.ಎಲ್.ಸಂತೋಷ ಏ.17 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ ಅವರು ನಗರದ ಮಾಲಿನಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ. ಹಾಗೂ ಏ.18ರಂದು ಚಿಕ್ಕೋಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶ ನಡೆಸಲಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಏ.18 ರಂದು ಸಂಜೆ 4ಕ್ಕೆ ಚಿಕ್ಕೋಡಿ ಬಸವ ಪ್ರಭು ಕೋರೆ ಮೈದಾನದಲ್ಲಿ ಬೆಳಗಾವಿ ಹಾಗೂ‌‌ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ‌ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ನರೇಂದ್ರ‌ ಮೋದಿ ಸಾರ್ವಜನಿಕರ ಸಭೆ ನಡೆಸಲಿದ್ದಾರೆ.
ಕಳೆದ ಚುನಾವಣೆಯಲ್ಲಿ‌ ಮುಂಬೈ ಕರ್ನಾಟಕದಲ್ಲಿ 7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. ಚಿಕ್ಕೋಡಿಯನ್ನು‌‌ ಹೊರತು ಪಡಿಸಿ ಎಲ್ಲ ಕ್ಷೇತ್ರದಲ್ಲಿ ಗೆಲವು ಸಾಧಿಸಿತ್ತು. ಈ‌ ಸಲವೂ ಸಹ ಚಿಕ್ಕೋಡಿ ಲೋಕಸಭಾ ಸೇರಿದಂತೆ ಮುಂಬೈ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶವನ್ನು ಘಟಪ್ರಭಾದಲ್ಲಿ ಮೊದಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ಅದನ್ನು ಸ್ಥಳಾಂತರಿಸಲಾಯಿತು ಎಂದು ಹೇಳಿದರು.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ‌ಸಂಸದರಾಗಿ ಪ್ರಕಾಶ ಹುಕ್ಕೇರಿ ಅವರು ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಮಾಡಿಲ್ಲ ಎಂಬ ಆರೋಪವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ಅಧಿಕ‌ ಮತಗಳಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ನಿಶ್ಚಿತ ಎಂದರು.
ಶಾಸಕ ಅನಿಲ್ ಬೆನಕೆ, ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ಬಸವರಾಜ ರೊಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...