ಕಾಂಗ್ರೆಸ್‌ನಿಂದ ಹಗಲು ದರೋಡೆ: ಶಾಸಕ ಬಸವರಾಜ

0
10

ಮುಂಡರಗಿ: ವಾಜಪೇಯಿ ಅವರ ಕನಸನ್ನು ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹಗಲು ದರೋಡೆ ಕೆಲಸ ಮಾಡುತ್ತಾರೆ ಎಂದು ಶಾಸಕ ಬಸವರಾಜ ಪಾಟೀಲ(ಯತ್ನಾಳ) ಹೇಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಮೋದಿಯವರು ಇಡೀ ಜಗತ್ತಿಗೆ ದೇಶದ ತಾಕತ್ತನ್ನು ತೋರಿಸಿದ್ದಾರೆ. ಜಿಎಸ್‌ಟಿ ಜಾರಿ ತಂದ ಮೇಲೆ ದೇಶದ ಆರ್ಥಿಕ ಆಧಾಯ ಏರಿಕೆಯಾಗಿದೆ. ದೇಶದ ಯುವಕರು ಜಾಗೃತರಾಗಿದ್ದು, ಅವರೇಲ್ಲ ಬಿಜೆಪಿಯೊಂದಿಗೆ ಕೈಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡುತ್ತೆÃನೆ. ಕೃಷಿ ಉತ್ಪನ್ನಕ್ಕೆ ಒತ್ತು ನೀಡಲಾಗುವುದು. ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕೆನ್ನುವ ದೃಷ್ಠಿಯಿಂದ ಹಾವೇರಿ ಮತ್ತು ಗದಗನಲ್ಲಿ ಫುಡ್‌ಪಾರ್ಕ್ ಪ್ರಾರಂಭಿಸುತ್ತೆÃನೆ. ನಿಮ್ಮ ಮತ್ತು ದೇಶದ ಸೇವೆಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು. ಶಾಸಕ ಕಳಕಪ್ಪ ಬಂಡಿ ಮಾತನಾಡಿದರು. ಜಿ.ಪಂ.ಸದಸ್ಯೆ ಶಕುಂತಲಾ ಚವ್ಹಾಣ, ಮಂಜುನಾಥ ಕೊನ್ನೂರ, ಎಂ.ಎಸ್.ಕರಿಗೌಡ್ರ, ಎಸ್.ವಿ.ಪಾಟೀಲ, ಭೀರಪ್ಪ ಬಂಡಿ, ಸೋಮಶೇಖರ ಚೆನ್ನಳ್ಳಿ, ದೇವಪ್ಪ ಕಂಬಳಿ, ಗಂಗಣ್ಣ ಸೊರಟೂರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಪ್ರಕಾಶ ಸಂಕಣ್ಣವರ, ಬಸವರಾಜ ಸಂಗನಾಳ ಇದ್ದರು.

loading...