ಸಂಸ್ಕಾರ, ಸಂಸ್ಕೃತಿ ಉಳಿದಿರುವುದೇ ಮಹಿಳೆಯಿಂದ: ಜಯಶ್ರಿÃ

0
73

ಗದಗ: ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿ ಪರಂಪರೆ, ಸಂಸ್ಕಾರಗಳು ಉಳಿದು ಬೆಳೆಯುತ್ತಿರುವುದು ನಮ್ಮ ನಾರಿಯರಿಂದ, ಸುಂಸ್ಕೃತರಾದ ಮಹಿಳೆಯರಿಂದ ಎಂದು ಡಾ. ಜಯಶ್ರಿÃ ಹೊಸಮನಿ ಅಭಿಪ್ರಾಯಪಟ್ಟರು.
ಕೆ.ಎಚ್. ಪಾಟೀಲ ಸಭಾಭವನದಲ್ಲಿ ಏರ್ಪಡಿಸಿದ್ದ ಅಕ್ಕನ ಬಳಗದ ಅಮೃತ ಮಹೋತ್ಸವದ ಸಾಂಸ್ಕೃತಿಕ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಚನ ಸಾಹಿತ್ಯದಲ್ಲಿ ಭವ್ಯ ಪರಂಪರೆ ನಮ್ಮ ಶ್ರಿÃಮಂತ ಸಂಸ್ಕೃತಿಯನ್ನು ಕಾಣುತ್ತೆÃವೆ. ಜೀವಾತ್ಮ, ಪರಮಾತ್ಮನಾಗುವ ತತ್ವವನ್ನು ಬೋಧಿಸುವ ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ ಜನರ ಮನಮುಟ್ಟುವ ಹಾಗೆ ಅಕ್ಕಮಹಾದೇವಿ ಹೇಳಿದ್ದಾಳೆ. ಅಕ್ಕಮಹಾದೇವಿ ವಚನಗಳನ್ನು ಪ್ರಸ್ತುತ ಪಡಿಸುವ ಅವುಗಳ ಮಹತ್ವ ತಿಳಿಸುವ ಕೆಲಸ ಆಗಬೇಕಿದೆ ಎಂದರು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಅಕ್ಕನ ಬಳಗದ ಪಾತ್ರ ಮಹತ್ವದ್ದಾಗಿದೆ. ಎಲ್ಲ ಶಿವಶರಣೆ, ಶರಣರೆಲ್ಲರೂ ತಮ್ಮ ವಚನಗಳ ಮೂಲಕ ವೀರಶೈವ ಧರ್ಮದ ಸಾರವನ್ನು ಸಾರಿದ್ದಾರೆ ಗುರುವಿನಲ್ಲಿ ವಿಶ್ವಾಸವಿಟ್ಟು ಗುರುಸೇವೆ ಮಾಡಿ ಗುರು ಉಪದೇಶವನ್ನು ಪಡೆದು ಭಕ್ತನಾಗಿ ಸೇವೆ ಮಾಡಿದ ಅವನು ಸಂಸ್ಕಾರಿಯಾಗುತ್ತಾನೆ ಎಂದರು.
ಶಿವಶರಣೆ ಡಾ. ನೀಲಮ್ಮತಾಯಿ ಮಾತನಾಡಿ, ಉಡತಡಿಯಿಂದ ಕಲ್ಯಾಣಕ್ಕೆ ನಡೆದಿರುವ ಅಕ್ಕಮಹಾದೇವಿ ಅಸತ್ಯ, ಮೌನವಾಗಿ ಸತ್ಯವೇ ಮಾತನಾಡುವಂತೆ ದಿಗಂಬರೆಯಾಗಿ ಹೋದ ಉದಾಹರಣೆ ಅಕ್ಕ ಒಬ್ಬಳೇ. ಅರಿಷಡ್ವರ್ಗಗಳನ್ನು ಗೆದ್ದು ವೈರಾಗ್ಯದ ಪರಾಕಷ್ಟೆಯಿಂದ ದಿಗಂಬರೆಯಾಗಿ ಕೀರ್ತಿ, ಅಪಕೀರ್ತಿಯನ್ನು ಬದಿಗೊತ್ತಿ ಸರ್ವಂ ಶಿವಮಯಂ, ಎಂಬ ಭಾವನೆಯಿಂದ ಹೋದ ಅಕ್ಕನ ಸಾಹಸ ಸಾಮಾನ್ಯರಿಗೆ ಸಾಧ್ಯವಿಲ್ಲ ಎಂದರು. ವಚನ ಕಂಠಪಾಠ, ವಚನ ಗಾಯನ, ಅಕ್ಕಮಹಾದೇವಿ ಚಿತ್ರಬಿಡಿಸುವ ಸ್ಪರ್ಧೆ, ಅಕ್ಕಮಹಾದೇವಿ ಕುರಿತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ಡಾ. ನೀಲಮ್ಮ ತಾಯಿಯವರು ನೀಡಿ ಗೌರವಿಸಿದರು.
ಸುವರ್ಣ ವಸ್ತçದ, ವಿಜಯಲಕ್ಷಿö್ಮÃ ಹಿರೇಮಠ ಸನ್ಮಾನಿಸಲಾಯಿತು.ವೇದಿಕೆಯ ಮೇಲೆ ಪಾರ್ವತಿ ಮಾಳೆಕೊಪ್ಪಮಠ, ಕಸ್ತೂರಿ ಹಿರೇಗೌಡರ, ಉಷಾ ಧಡೂತಿ, ಶಾಂತಾದೇವಿ ಕೊಲ್ಲೊಳಗಿ, ಮೀನಾಕ್ಷಿ ಸಜ್ಜನ, ಶಾರದಾ ಹಿರೇಮಠ, ರೇಣುಕಾ ಅಮಾತ್ಯ, ಸುಜಾತಾ ಮಾನ್ವಿ, ಶಶಿರೇಖಾ ಶಿಗ್ಲಿಮಠ ಇದ್ದರು.
ವಿದ್ಯಾ ಹುಲಬನ್ನಿ ಸಂಗಡಿಗರು ಸ್ವಾಗತ ನೃತ್ಯ ಮಾಡಿದರು. ಪ್ರೆÃಮಾ ಮೇಟಿ ಸ್ವಾಗತಿಸಿದರು. ಸುಗ್ಗಲಾ ಯಳಮಲಿ ಪರಿಚಯಿಸಿದರು. ಶಿವಲೀಲಾ ಅಕ್ಕಿ, ಜಯಶ್ರಿÃ ಪಾಟೀಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಾಗರತ್ನಾ ಹುಬಳಿಮಠ, ಕಮಲಾ ಭೂಮಾ, ಸುಜಾತಾ ಗುಡಿಮನಿ, ಸುಜಾತಾ ಹಿರೇಮಠ, ಲಲಿತಾ ಬಾಳಿಹಳ್ಳಿಮಠ, ಅನ್ನಪೂರ್ಣ ಕುಂಬಾರ, ಶಕುಂತಲಾ ಮಠದ, ಶಾಂತಾ ಸಂಕನೂರ, ಮಂಗಲಾ ಗೊಡಚಿ, ಮಂಜುಳಾ ತಂಗೋಡಿ, ಲಲಿತಾ ಶಿಗ್ಲಿ, ನಂದಾ ಬಾಳಿಹಳ್ಳಿಮಠ, ಶಶಿಕಲಾ ಬೇಲೇರಿ, ಮೀನಾಕ್ಷಿ ಮಲ್ಲಾಡದ, ಗೀತಾ ಮಾನ್ವಿ, ಸುವರ್ಣ ಹೊಸಂಗಡಿ, ಶಾರದಾ ಬೊಮ್ಮಸಾಗರ ಇದ್ದರು.

loading...