ಮೈತ್ರಿ ಸರ್ಕಾರದಿಂದ ಉತ್ತಮ ಆಡಳಿತ: ಅಂದಾನಯ್ಯ

0
29

ನರಗುಂದ: ಉತ್ತರ ಕರ್ನಾಟಕ ಭಾಗದ ಮಹದಾಯಿ ಯೋಜನೆಯನ್ನು ರಾಜ್ಯದ ಬಿಜೆಪಿ ಸಂಸದರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಗೆ ಗೇಜೆಟ್ ನೋಟಿಫಿಕೇಶನ್ ನೀಡದೇ ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡುತ್ತಿದೆ. ೧೯೮೪ ರಿಂದ ಬಿಜೆಪಿ ಪಕ್ಷದವರು ರಾಮ ಮಂದಿರ ನಿರ್ಮಾಣ ಮತ್ತು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸದೆ ಈ ದೇಶದ ಜನರಿಗೆ ಮೋಸವನ್ನು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಜಾತಿಯತೆಯ ಹೆಸರಿನಲ್ಲಿ ಧರ್ಮ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ೭ ಜನ ಬಿಜೆಪಿ ಸಂಸದರಿಗೆ ಸಚಿವ ಸ್ಥಾನವನ್ನು ನೀಡದೇ ನರೇಂದ್ರ ಮೋದಿ ಅವರ ಸರ್ಕಾರ ರಾಜ್ಯದ ಲಿಂಗಾಯತರಿಗೆ ಅವಮಾನವನ್ನು ಮಾಡಿದೆ. ಮತಕ್ಕಾಗಿ ಬಜೆಪಿಯವರು ಕಾಲು ನೆಕ್ಕಲು ಸಹ ಹಿಂಜರಿಯುವುದಿಲ್ಲ. ಮೋದಿಯನ್ನು ಬಿಟ್ಟು ಜನರಲ್ಲಿ ಮತ ಕೇಳಲು ರಾಜ್ಯದ ಬಿಜೆಪಿ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಬಾಗಲಕೋಟಿಯ ವೀಣಾ ಕಾಶಪ್ಪನವರ, ಹಾವೇರಿ ಕ್ಷೆÃತ್ರದ ಡಿ.ಆರ್.ಪಾಟೀಲ ಅವರನ್ನು ಒಳಗೊಂಡು ರಾಜ್ಯದ ೨೦ ಕ್ಕೂ ಹೆಚ್ಚು ಲೋಕಸಭೆ ಕ್ಷೆÃತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆರ್.ಎನ್.ಪಾಟೀಲ, ಚಂದ್ರಗೌಡ ಪಾಟೀಲ ಮಾತನಾಡಿದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರಿÃಪಾದ ಆನೇಗುಂದಿ, ಜಗದೀಶ ಬೆಳವಟಗಿ, ಅಣ್ಣಪ್ಪಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ಪಿ.ಸಿ.ಹಿರೇಮನಿ, ಜಿಲ್ಲಾ ಜೆಡಿಎಸ್ ವೈದ್ಯಕೀಯ ಘಟಕದ ಅಧ್ಯಕ್ಷ ಎಸ್.ಆರ್.ಹಿರೇಮಠ, ತಾಲೂಕಾ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಎಚ್.ಎನ್.ಹಳಕಟ್ಟಿ ಇದ್ದರು.

loading...