ಭಾರತೀಯ ಜನತಾಪಕ್ಷಕ್ಕೆ ಮತ ನೀಡಿ: ಅನಂತಕುಮಾರ ಹೆಗಡೆ

0
24

 

ಕನ್ನಡಮ್ಮ ಸುದ್ದಿ-ಹಳಿಯಾಳ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಜನಸಾಮಾನ್ಯರಿಗೂ ಹಾಗೂ ರಾಷ್ಟçಕ್ಕೂ ಒಳಿತನ್ನು ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ನಾಂದಿ ಹಾಡಿರುವ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿಸಲು ಭಾರತೀಯ ಜನತಾಪಕ್ಷಕ್ಕೆ ಮತ ನೀಡುವಂತೆ ಭಾಜಪ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು.
ಹಳಿಯಾಳ ತಾಲೂಕಿನ ತೇರಗಾಂವ, ಮುರ್ಕವಾಡ, ಕಾವಲವಾಡ, ಅಂಬಿಕಾನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ (ಶಕ್ತಿಕೇಂದ್ರ) ಗ್ರಾಮಗಳಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಾಜಪ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

ಭಾಜಪ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಭ್ರಷ್ಟಾಚಾರದ ಕಳಂಕವಿಲ್ಲದೇ ದೇಶದ ಸರ್ವಾಂಗೀಣ ಉನ್ನತಿಗಾಗಿ ಕಾರ್ಯ ಮಾಡಿದೆ. ಹತ್ತು ಹಲವಾರು ಯೋಜನೆಗಳಿಂದ ಜನರ ಜೀವನಮಟ್ಟ ಉತ್ತಮಗೊಂಡಿದೆ. ರಾಷ್ಟಿçÃಯ ಬದ್ಧತೆಯ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳಲಾಗಿಲ್ಲ. ವಿವಿಧ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ದೇಶವು ಪ್ರಗತಿಯತ್ತ ದಾಪುಗಾಲು ಹಾಕಿದೆ. ಜಿಎಸ್‌ಟಿಯ ಕಾರಣ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು ಆ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಜನತೆ ಆಶೀರ್ವಾದ ನೀಡಿದ ನಂತರ ಬರುವ ಅವಧಿಯಲ್ಲಿಯೂ ಸಹ ಇನ್ನುಳಿದ ಹಲವಾರು ಪ್ರಗತಿಶೀಲ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಎಲ್. ಘೋಟ್ನೆÃಕರ ಅವರ ಹೇಳಿಕೆಗೆ ಅನಂತಕುಮಾರ ಹೆಗಡೆ ಅವರು ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದರು. ಬೇರೆಯವರ ನೆರಳಿನಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡ ವ್ಯಕ್ತಿಗೆ ನಾನು ಉತ್ತರ ಕೊಡಬೇಕಾಗಿಲ್ಲ. ಸಮಾಜದ ದುಡ್ಡನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡವರ ಭ್ರಷ್ಟಾಚಾರವನ್ನು ಮುಂದಿನ ದಿನಗಳಲ್ಲಿ ಬಯಲಿಗೆ ತರಲಾಗುವುದು ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಟೀಕಾ ಪ್ರಹಾರಗೈದರು. ಕುಮಾರಸ್ವಾಮಿಯವರು ತಮ್ಮ ಭರವಸೆಯಂತೆ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಹೀಗಾಗಿ ಜಿಲ್ಲೆಯ ಜನರ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಗುತ್ತಿಗೆದಾರರು ಯಾವುದೇ ಕೆಲಸ ಕಾಮಗಾರಿ ಪೂರ್ಣಗೊಳಿಸದಿದ್ದರೂ ಅವರುಗಳ ಖಾತೆಗೆ ೧೨ ಸಾವಿರ ಕೋಟಿ ರೂ. ಗಳಷ್ಟು ಹಣವನ್ನು ಮುಂಗಡವಾಗಿ ನೀಡಿರುವುದರಿಂದ ಆ ಬಗ್ಗೆ ತನಿಖೆ ಮಾಡಲು ಆದಾಯಕರ ಇಲಾಖೆಯವರು ದಾಳಿ ಮಾಡಿದ್ದಾರೆ.
ಮರಾಠಾ ಸಮುದಾಯಕ್ಕೆ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಪ್ರಯತ್ನಿಸುವುದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೊÃಟಿಕರ್ ಅವರ ಮಾತಿಗೆ ಸಮರ್ಥಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆÃಕರ ಅವರ ಹೇಳಿಕೆಯನ್ನು ಸುನೀಲ ಹೆಗಡೆ ಟೀಕಿಸಿದರು. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದು ಸದ್ಯ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸರ್ಕಾರವಿದೆ. ಆದರೂ ಸಹ ಮರಾಠಾ ಸಮುದಾಯದ ಬೇಡಿಕೆ ಈಡೇರಿಸಲಾಗಿಲ್ಲ. ಆದರೆ ಘೋಟ್ನೆÃಕರ ಅವರು ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಈ ಬಗ್ಗೆ ಹೇಳಿಕೆ ನೀಡಿ ಸಮಾಜದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಮರಾಠಾ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ದುರ್ಬಳಕೆಯ ಬಗ್ಗೆ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್ ಕ್ಷೆÃತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆ ಮಾಡಿದ್ದಾರೆ. ಮರಾಠಾ ಸಮಾಜದ ಹೆಸರಿನ ಮೊತ್ತ ದುರುಪಯೋಗಗೊಂಡಿರುವ ಬಗ್ಗೆ ಘೋಟ್ನೆÃಕರ ಅವರು ಸಾರ್ವಜನಿಕರಿಗೆ ಹಾಗೂ ಸಮಾಜದವರಿಗೆ ಉತ್ತರ ನೀಡಲಿ ಎಂದು ಸುನೀಲ ಹೆಗಡೆ ಸವಾಲು ಹಾಕಿದರು.

ತೇರಗಾಂವ ಕಾರ್ಯಕ್ರಮದಲ್ಲಿ ತೇರಗಾಂವ ಜಿಲ್ಲಾ ಪಂಚಾಯತ ಕ್ಷೆÃತ್ರದ ಶಕ್ತಿ ಕೇಂದ್ರದ ಅಧ್ಯಕ್ಷ ಬಾಳು ಮಿರಾಶಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಶಂಕರ ಕಾಜಗಾರ, ಭೂಪಾಲ ಧೂಳಿ, ಶಂಕರ ಗಳಗಿ, ರಗಟೆ, ಈರಪ್ಪಾ ನಾವಲಗಿ, ಅನಿಲ ಮುತ್ನಾಳೆ, ವಿ.ಎಂ. ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

loading...