ಮನೆ ಮನೆ ತೆರಳಿ ಮತ ಯಾಚನೆ

0
35

 

ಕನ್ನಡಮ್ಮ ಸುದ್ದಿ-ಗೋಕಾಕ: ಕಳೆದ ೧೫ವರ್ಷಗಳಿಂದ ಸಂಸದರಾಗಿ ಆಯ್ಕೆಯಾಗಿರುವ ಸುರೇಶ ಅಂಗಡಿ ಗ್ರಾಮೀಣ ಭಾಗಗಳಲ್ಲಿ ಈ ವರೆಗೆ ಭೇಟಿ ನೀಡದೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸದಿರುವ ಸಂಸದರನ್ನು ಕೈ ಬಿಟ್ಟು. ಶಿಕ್ಷಣ ಪ್ರೆÃಮಿ ಹಾಗೂ ಕೆಎಲ್‌ಇ ನಿರ್ದೇಶಕ ಡಾ. ವ್ಹಿ ಎಸ್ ಸಾಧುನವರ ಅವರನ್ನು ಬೆಂಬಲಿಸುವಂತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ಗುರುವಾರದಂದು ಅರಭಾಂವಿ ಗ್ರಾಮದ ಮನೆ ಮನೆ ತೆರಳಿ ಜೆಡಿಎಸ್ ಮತ್ತು ಕಾಂಗ್ರೆÃಸ್ ಮೈತ್ರಿ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಪರ ಪ್ರಚಾರ ಕೈಗೊಂಡು ಮಾತನಾಡಿ, ರೈತರ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದ ಸಂಸದರನ್ನು ಈ ಬಾರಿ ಕೈಬಿಟ್ಟು ಕಾಂಗ್ರೆÃಸ್ ಬೆಂಬಲಿಸಿ ಎಂದರು.

ಕಳೆದ ಮನಮೋಹನ ಸಿಂಗ್ ನೇತ್ರತ್ವದ ಕಾಂಗ್ರೆÃಸ್ ಸರಕಾರದ ಹಾಗೂ ಸಿದ್ಧರಾಮಯ್ಯನವರ ನೇತ್ರತ್ವದಲ್ಲಿ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ರೈತರಿಗಾಗಿ ಅನುಷ್ಠಾನಕ್ಕೆ ತರಲಾಗಿದ್ದು ಈ ಯೋಜನೆಗಳನ್ನು ತಾವು ಸದುಪಯೋಗ ಪಡಿಸಿಕೊಂಡಿದ್ದಿರಿ ಇದನ್ನು ಮನಗಂಡು ಕಾಂಗ್ರೆÃಸ್ ಅಭ್ಯರ್ಥಿಗೆ ಮತ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ ಮತ್ತು ಹೊನ್ನಜ್ಜ ಕೋಳಿ, ರಾಯಪ್ಪ ಬಂಡಿವಡ್ಡರ, ಹನಮಂತ ಚಿಪ್ಪಲಕಟ್ಟಿ, ಹನಮಂತ ದೊಡ್ಡಗೋಣಿ, ಅಶೋಕ ಅಂಗಡಿ, ಮಾಜಿ ಗ್ರಾಪಂ ಅಧ್ಯಕ್ಷ ಶಾಂತಪ್ಪ ಜೈನ್, ಟಿಎಪಿಸಿಎಮ್‌ಎಸ್ ಸದಸ್ಯ ಕೆಂಚಪ್ಪ ಮಂಟೂರ, ಮೋಹನ ಬಂಡಿವಡ್ಡರ, ನಾಗಪ್ಪ ಹೊಲದುರ, ಲೋಳಸುರ ಗ್ರಾಪಂ ಉಪಾಧ್ಯಕ್ಷ ಯಮನಪ್ಪ ಬಾಗಾಯಿ, ಜ್ಯೊÃತೆಪ್ಪ ಸೋತುಗೋಳ, ಮಲ್ಲಿಕಾರ್ಜುನ ಘೀವಾರಿ, ಪಾಂಡು ಮನ್ನಿಕೇರಿ, ಶಿವನಗೌಡ ಪಾಟೀಲ, ಆರೀಫ ಪೀರಜಾದೆ, ಪ್ರಕಾಶ ಬಾಗೇವಾಡಿ, ಅರಭಾಂವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಚನ್ನಪ್ಪ ವಗ್ಗನ್ನವರ ಸೇರಿದಂತೆ ಇನ್ನೂ ಹಲವಾರು ಜೆಡಿಎಸ್ ಹಾಗೂ ಕಾಂಗ್ರೆÃಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

loading...