ಸೈನಿಕರು ರಾಜಕೀಯ ಪಕ್ಷದ ಆಸ್ತಿಯಲ್ಲ ಅವರು ದೇಶದ ಆಸ್ತಿ: ಎಚ್.ಕೆ. ಪಾಟೀಲ

0
35

 

ಕನ್ನಡಮ್ಮ ಸುದ್ದಿ-ರಾಮದುರ್ಗ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಅನೇಕ ಬಾರಿ ಯುದ್ಧಗಳು ನೆಡೆದ ಹೋಗಿವೆ ಆದರೆ ಅವುಗಳನ್ನು ಎಂದು ಚುನಾವಣೆಗೆ ಬಳಕೆ ಮಾಡಿಕೊಳ್ಳಲಿಲ್ಲ ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನ ಮಂತ್ರಿ ಮೋದಿಯವರು ಸೈನಿಕರ ವಿಷಯನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವ ಪ್ರಚಾರದಲ್ಲಿ ತೊಡಗಿದ್ದು ಸೈನಿಕರು ಯಾವುದೇ ರಾಜಕೀಯ ಪಕ್ಷದ ಆಸ್ತಿಯಲ್ಲ ಅವರು ದೇಶದ ಆಸ್ತಿ ಎಂಬುವುದು ಎಲ್ಲರು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗಾವಿ ಲೋಕಸಭೆ ಕಾಂಗ್ರೆÃಸ್ ಅಭ್ಯರ್ಥಿಪರ ಪ್ರಚಾರ ನಡೆಸಿದ ಅವರು, ೬೦ ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆÃಸ್ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ಆದರೇ ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆÃಸ್ ಸಾಧನೆಯನ್ನು ಅಲ್ಲಗಳೆಯುತ್ತಿದ್ದು, ಇದಕ್ಕೆ ಜನರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ಅಧಿಕಾರಕ್ಕೆ ಬರುವ ಮೊದಲು ಅನೇಕ ಭರವಸೆಗಳನ್ನು ನೀಡುತ್ತಾ ಮೋದಿಯವರು ಕಪ್ಪುಹಣ,ಉದ್ಯೊÃಗ,ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡುತ್ತೆÃನೆಂದು ಹೇಳಿದರು ಅದು ಯಾವುದು ಈಡೇರಲಿಲ್ಲ ಮತ್ತು ಪ್ರತಿಯೊಬ್ಬ ಜನರ ಖಾತೆಗೆ ೧೫ ಲಕ್ಷ ಹಾಕುವದಾಗಿ ಹೇಳಿದ ಅವರು ಹೇಳಿಕೆ ಏನಾಯಿತು ಒಂದು ರೂಪಾಯಿ ಬರಲಿಲ್ಲ ಎಂಬುದನ್ನು ಜನ ತಿಳಿಯಬೇಕು. ಕೇವಲ ಭರವಸೆಗಳೆ ಹೊರತು ಕಾರ್ಯ ರೂಪದಲ್ಲಿ ಬರಲಿಲ್ಲ ಎಂದು ಆರೋಪಿಸಿದರು.
ಬೆಳಗಾವಿ ಸಂಸದ ಸುರೇಶ ಅಂಗಡಿಯವರು ೩ ಭಾರಿ ಸಂಸದರಾದರೂ ಗಾಳಿಯ ಮೇಲೆ ಬಂದವರು ಯಾವುದೇ ಅಭಿವೃದ್ದಿ ಅವರಿಂದ ಆಗಿಲ್ಲ. ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಹಾಗೂ ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯ ಮಾಡುತ್ತಿರುವ ಕಾಂಗ್ರೆÃಸ್ ಅಭ್ಯರ್ಥಿ ವಿ.ಎಸ್. ಸಾಧುನವರಿಗೆ ಮತ ನೀಡಿ ಅವರನ್ನು ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ, ಇಲ್ಲಿಯವರೆಗೂ ಮೋದಿಯವರು ಸುಳ್ಳುಗಳನ್ನೆÃ ಹೇಳಿಕೊಂಡು ಬಂದಿದ್ದಾರೆ. ಈಗ ಅದನ್ನೆ ಮುಂದುವರೆಸಿದ್ದಾರೆ. ಅವರು ನೀಡಿದ ಯಾವುದೇ ಭರವಸೆಗಳು ಈಡೆರಿಲ್ಲ. ನಮ್ಮ ಯುಪಿಎ ಸರಕಾರದ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿನ ಜನಪರ ಹಾಗೂ ಈಗೀನ ಸಮೀಶ್ರ ಸರಕಾರದ ಯೋಜನೆಗಳನ್ನು ನೋಡಿ ಮತ ನೀಡಬೇಕು ಎಂದು ಹೇಳಿದರು.
ಅಭ್ಯರ್ಥಿ ವಿ.ಎಸ್. ಸಾಧುನವರ ಮಾತನಾಡಿ, ಜಿಲ್ಲೆಗೆ ಸುರೇಶ ಅಂಗಡಿಯವರ ಸಾಧನೆ ಶೂನ್ಯ. ಕಾರಣ ಕಾಂಗ್ರೆÃಸ್‌ಗೆ ಮತ ನೀಡಿ ತಮ್ಮನ್ನು ಆಯ್ಕೆ ಮಾಡಿದಲ್ಲಿ ಅಭಿವೃದ್ದಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುವದಾಗಿ ಭರವಸೆ ನೀಡಿದರು.

ವಿದ್ಯಾ ಹಿರೇಮಠ, ಜಹೂರ ಹಾಜಿ, ಕೃಷ್ಣಾ ಲಮಾಣಿ, ಎ.ಪಿ.ಎಂ.ಸಿ ಅಧ್ಯಕ್ಷ ಫಕೀರಪ್ಪ ಕೊಂಗವಾಡ, ಎಸ್.ಎಂ. ಪಾಟೀಲ, ಜಿ.ಬಿ. ರಂಗನಗೌಡ್ರ, ರಾಯಪ್ಪ ಕತ್ತಿ, ರಮೆಶ ಬಂಡಿವಡ್ಡರ, ಸೋಮಶೇಖರ ಸಿದ್ದಲಿಂಗಪ್ಪನವರ, ಬಸವರಾಜ ಹಿರೇರಡ್ಡಿ, ರಮೇಶ ಅಣ್ಣಿಗೇರಿ, ಸಿದ್ದಲಿಂಗಪ್ಪ ಸಿಂಗಾರಗೊಪ್ಪ, ಪರಪ್ಪ ಜಂಗವಾಡ, ಹಜರತ್ ಪೈಲವಾನ್, ಬಸನಗೌಡ ಪ್ಯಾಟಿಗೌಡರ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮವನ್ನು ಸಿದ್ದಿಲಿಂಗಪ್ಪ ಶಿಂಗಾರಗೊಪ್ಪ ನಿರೂಪಿಸಿದರು, ಜಿ.ಬಿ.ರಂಗನಗೌಡ ವಂದಿಸಿದರು.

loading...