ಅಕ್ಷರ ದೇಗುಲಕ್ಕಿಲ್ಲಾ ನೀರಿನ ಸೌಲಭ್ಯ

0
35

 

ಯಲ್ಲಾಪುರ: ಅಕ್ಷರ ಪ್ರೀತಿಗೆ ನಿತ್ಯ ಸೇವೆ ಒದಗಿಸುವ ಗ್ರಂಥಾಲಯಗಳು ಜ್ನಾನ ದಾಹ ತೀರಿಸುವ ಶೃದ್ಧಾ ಕೇಂದ್ರಗಳೂ ಹೌದು. ಸಾರ್ವಜನಿಕ ಗ್ರಂಥಾಲಯಗಳು ಓದುಗರ ಸೇವೆಗೆ ಸಂಪೂರ್ಣವಾದ ಅವಕಾಶ ಮಾಡಿಕೊಟ್ಟಾಗ ಆ ಗ್ರಂಥಾಲಯಗಳ ಸಾರ್ಥಕತೆಯೂ ಆಗಬಲ್ಲದು. ಪುಸ್ತಕಗಳು, ಓದುಗರು, ಸಿಬ್ಬಂದಿಗಳು ಗ್ರಂಥಾಲಯದ ಮುಖ್ಯ ಭಾಗಗಳು ಜೊತೆಗೆ ಅಲ್ಲಿಯ ಮೂಲ ಸೌಕರ್ಯಗಳ ಬಗೆಗೂ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಹಾಗಾದಾಗ ಜ್ಙಾನದ ಶಾಖೆಗಳು ವಿಸ್ತರಿಸಿದಂತೆ. ಈ ನಿಟ್ಟಿನಲ್ಲಿ ಯಲ್ಲಾಪುರದ ಸಾರ್ವಜನಿಕ ತನ್ನ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದರೂ ಓದುಗರಿಗೆ ಅಗತ್ಯವಾದ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ತೀರಾ ಅಗತ್ಯವಾದ ಕುಡಿಯುವ ನೀರನ್ನು, ಇತರೇ ಅಗತ್ಯತೆUರ್ಯೀ ಸೌಲಭ್ಯವು ಅನಿವಾರ್ಯವಾಗಿದ್ದರೂ ಶಾಖಾ ಗ್ರಂಥಾಲಯಕ್ಕೆ ನೀರು ನೀಡಲು ಪಟ್ಟಣ ಪಂಚಾಯತ ಮೀನ ಮೇಷ ಎಣಿಸುತ್ತಿರುವುದು ಓದುಗರಿಗೆ ಅಚ್ಚರಿ ನೀಡುವಂತಾಗಿದೆ.
ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಶಾಖಾ ಗ್ರಂಥಾಲಯವು ಅಕ್ಷರ ಪ್ರೇಮಿಗಳಿಗೆ ಓದಿನ ದಾಹ ತೀರಿಸುತ್ತಿದೆ. ಸುಮಾರು ಮೂವತ್ತೊಂದು ಸಾವಿರಕ್ಕೂ ಮಿಕ್ಕಿರುವ ಪುಸ್ತಕ ಸಂಗ್ರಹದ ಶಾಖಾ ಗ್ರಂಥಾಲಯದಲ್ಲಿ ಹನ್ನೇರಡುನೂರು ಕ್ಕೂ ಮಿಕ್ಕಿ ಓದುಗರು ತಮ್ಮ ಸದಸ್ಯತ್ವವನ್ನು ನೋಂದಾಯಿಸಿಕೊಂಡಿದ್ದಾರೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓದುಗರು ನಿಯತಕಾಲಿಕೆ, ಪುಸ್ತಕಗಳನ್ನು ಓದಲು ಈ ಶಾಖಾ ಗ್ರಂಥಾಲಯಕ್ಕೆ ಭೇಟಿ ಕೊಡುತ್ತಾರೆ. ಗ್ರಂಥಾಲಯದ ಒಳಾಂಗಣದಲ್ಲಿ ಆರಾಮದಾಯಕವಾಗಿ ಓದುಗರು ಓದುವ ಸೌಲಭ್ಯ ಹೊಂದಿದೆ.
ಇವರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಅಲ್ಲದೇ ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ನೀಡುವ ಗಣ್ಯರೂ ಇದ್ದು, ಸಾರ್ವಜನಿಕವಾಗಿ ನಿತ್ಯ ಉತ್ತಮ ಸೇವೆ ನೀಡುತ್ತಿರುವ ಅಪರೂಪದ ಗ್ರಂಥಾಲಯಗಳಲ್ಲಿ ಯಲ್ಲಾಪುರದ ಶಾಖಾ ಗ್ರಂಥಾಲಯವೂ ಕೂಡಾ ಒಂದು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಓದುಗರಿಗೆ ಮೌಲ್ಯಯುತವಾದ ಪುಸ್ತಕಗಳ ಓದಿನ ಕೇಂದ್ರವಾಗಿ ಶಾಖಾ ಗ್ರಂಥಾಲಯ ಕೆಲಸಮಾಡುತ್ತಿದೆ.
ಕಳೆದ ಮೂರು ತಿಂಗಳ ಹಿಂದೆಯೇ ಅಂದರೆ ಜನವರಿಯಲ್ಲಿಯೇ ಶಾಖಾ ಗ್ರಂಥಾಲಯದಿಂದ ನೀರಿನ ಸಂಪರ್ಕಕ್ಕಾಗಿ ಪಟ್ಟಣ ಪಂಚಾಯತಕ್ಕೆ ವಿವಿಧ ಶಿರ್ಷಿಕೆಯಡಿಯಲ್ಲಿ ಅಗತ್ಯ ಸೌಲಭ್ಯಕ್ಕಾಗಿ ಹಣವನ್ನು ಬ್ಯಾಂಕ ಚಲನ ಮೂಲಕ ಪಾವತಿಸಲಾಗಿದ್ದು ಓದುಗರಿಗೆ ತಕ್ಷಣ ನೀರಿನ ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸೌಲಭ್ಯ ನೀಡದೇ ಓದುಗರಿಗೆ ಕಿರಿ ಕಿರಿ ಉಂಟುಮಾಡುವಂತಾಗಿದೆ. ಪಟ್ಟಣ ಪಂಚಾಯತದ ಅಧಿಕಾರಿಗಳು ಗ್ರಂಥಾಲಯದ ಬಗೆಗೆ ಉದಾಸೀನ ತೋರಿಸುತ್ತಿರುವುದು ಅಕ್ಷರ ಪ್ರೇಮಿಗಳಿಗೆ ಬೇಸರ ತರಿಸಿದೆ.

loading...