ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಕೋವಿಂದ್, ಮೋದಿ, ರಾಹುಲ್ ಶ್ರದ್ಧಾಂಜಲಿ

0
0

ನವದೆಹಲಿ:-ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ಇಂದಿಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ವಿವಿಧ ಪಕ್ಷಗಳ ನಾಯಕರು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ , “100 ವರ್ಷಗಳ ಹಿಂದೆ ಇದೇ ದಿನ, ಸ್ವಾತಂತ್ರ್ಯ ಹೋರಾಟಗಾರರು ಜಲಿಯನ್ ವಾಲಾ ಬಾಗ್ ನಲ್ಲಿ ಹುತಾತ್ಮರಾಗಿದ್ದರು. ಇದೊಂದು ಭಯಾನಕ ಹತ್ಯಾಕಾಂಡವಾಗಿದ್ದು, ನಾಗರೀಕ ಸಮಾಜಕ್ಕೆ ಕಳಂಕವಾಗಿತ್ತು. ಹೋರಾಟಗಾರರ ಈ ಬಲಿದಾನ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ತ್ಯಾಗ ಬಲಿದಾನಕ್ಕೆ ನಮ್ಮದೊಂದು ಗೌರವ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ , ಇಂದಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 100 ವರ್ಷ ಗತಿಸಿವೆ. ಅಂದು ಹುತಾತ್ಮರಾದ ಎಲ್ಲರಿಗೂ ಇಂದಿನ ಶ್ರದ್ಧಾಂಜಲಿ ಅರ್ಪಿತವಾಗಿದೆ. ಅವರ ವೀರ, ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ನೆನಪು ಹೆಮ್ಮೆ ಪಡುವಂತಹ ಭಾರತ ನಿರ್ಮಾಣಕ್ಕೆ ಹಾಗೂ ಇನ್ನು ಅಧಿಕ ಪರಿಶ್ರಮ ಮಾಡಲು ಪ್ರೇರಣೆ ನೀಡುತ್ತವೆ.”ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಅಮೃತ್ ಸರ್ ದ ಜಲಿಯಾನಾ ವಾಲಾ ಬಾಗ್ ಗೆ ಭೇಟಿ ನೀಡಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಅಮ್ರಿಂದರ್ ಸಿಂಗ್ ಹಾಗೂ ಸಚಿವ ನವಜೋತ್ ಸಿಂಗ್ ಸಿದ್ದು ಉಪಸ್ಥಿತರಿದ್ದರು.
1919ರ ಏ.13ರಂದು ಪಂಜಾಬ್ ನ ಅಮೃತಸರ್ ಜಲಿಯನ್ ವಾಲಾಬಾಗ್ ದಲ್ಲಿ ಶಾಂತಿ ಸಭೆ ನಡೆಸುತ್ತಿದ್ದಾಗ ಸಾವಿರಾರು ಭಾರತೀಯರನ್ನು ಬ್ರಿಟಿಷ್ ಬ್ರಿಗೇಡರ್ ಜನರಲ್ ರೆಜಿನಾಲ್ಡ್ ಡಾಯರ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಮೈಕಲ್ ಓ.ಡಾಯರ್ ಅವರು ಗುಂಡು ಹಾರಿಸಿ ಸಾಮೂಹಿಕ ಕಗ್ಗೊಲೆ ಮಾಡಿದ್ದರು. ಘಟನೆಯಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗಿದ್ದರು.

loading...