ವಿರಾಟ್‌ ಕೊಹ್ಲಿಗೆ 12 ಲಕ್ಷ ರೂ ದಂಡ

0
4

ಮೊಹಾಲಿ:-ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ಶನಿವಾರ ಇಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ನಿರ್ವಹಣೆಯಿಂದಾಗಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ

‘ನಿಧಾನಗತಿಯ ಬೌಲಿಂಗ್‌ ದರದಿಂದ ಐಪಿಎಲ್‌ ನಿಯಮ ಉಲ್ಲಂಘಿಸಿದ್ದು, ಅವರ ತಂಡ ಈ ಅವಧಿಯಲ್ಲಿ ಮೊದಲ ಶಿಕ್ಷಾರ್ಹ ತಪ್ಪು ಎಸೆಗಿದೆ. ಹೀಗಾಗಿ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಐಪಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸತತ 6 ಸೋಲುಗಳ ಬಳಿಕ ಆರ್‌ಸಿಬಿ ನಿನ್ನೆ ಕಿಂಗ್ಸ್‌ ಇಲೆವೆನ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಮೊದಲ ಗೆಲುವಿನ ನಗೆ ಬೀರಿತ್ತು. ತಂಡ ನಿಧಾನಗತಿಯ ಬೌಲಿಂಗ್‌ ಮುಂದುವರಿಸಿದರೆ, ಕೊಹ್ಲಿಗೆ ಒಂದು ಪಂದ್ಯ ನಿಷೇಧ ಹಾಗೂ ಇನ್ನಷ್ಟು ಹೆಚ್ಚುವರಿ ದಂಡ ವಿಧಿಸಬಹುದು.

loading...