ಮತಗಟ್ಟೆಯ ಅಧಿಕಾರಿಗಳ ಮೂಲಕ ಮಾಹಿತಿ ತಲುಪಿಸಿ

0
26

ಕನ್ನಡಮ್ಮ ಸುದ್ದಿ-ಧಾರವಾಡ: ಜಿಲ್ಲೆಯಲ್ಲಿರುವ ೧೩,೧೫೯ ವಿಕಲಚೇತನರು ಏಪ್ರಿಲ್‌ ೨೩ ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳಲು ಪೂರಕವಾಗುವಂತೆ ವಾಹನ ಸೌರ‍್ಯ, ಗಾಲಿಕರ‍್ಚಿ, ರ‍್ಯಾಂಪ್‌ ಮತ್ತಿತರ ಸೌರ‍್ಯಗಳನ್ನು ಕಲ್ಪಿಸಿ ಮತಗಟ್ಟೆಯ ಅಧಿಕಾರಿಗಳ ಮೂಲಕ ವಿಕಲಚೇತನರಿಗೆ ಮಾಹಿತಿ ತಲುಪಿಸಬೇಕು ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರು ಹಾಗೂ ಸಖಿ ಮತಗಟ್ಟೆಗಳ ಸಿದ್ಧತೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಕಲಚೇತನರು ಮತಗಟ್ಟೆಗೆ ಬಂದಾಗ ಮತಗಟ್ಟೆ ಸಮೀಪದಲ್ಲಿ ಅವರ ವಾಹನ ನಿಲುಗಡೆಗೆ ಸ್ಥಳ ಗುರುತಿಸಬೇಕು. ಈಲ್ಲೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ ೨೪೮೨, ಕುಂದಗೋಳ-೨೪೮೭, ಧಾರವಾಡ-೨೪೮೬, ಹುಬ್ಬಳ್ಳಿ-ಧಾರವಾಡ ಪರ‍್ವ ೧೦೯೦, ಹುಬ್ಬಳ್ಳಿ-ಧಾರವಾಡ ಕೇಂದ್ರ-೧೦೩೫, ಹುಬ್ಬಳ್ಳಿ-ಧಾರವಾಡ ಪಶ್ಚಿಮ-೯೭೧ ಹಾಗೂ ಕಲಘಟಗಿಯಲ್ಲಿ-೨೬೦೮ ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ ಎಂದರು. ಮಾಹಿತಿ ನೀಡಲು ನಕಲಿ ಮತಪತ್ರಗಳು, ಅಕ್ಷರಗಳನ್ನು ಗುರುತಿಸಲು ಭೂತಗನ್ನಡಿ (ಮ್ಯಾಗ್ನಿಫೈಯಿಂಗ್‌ ಗ್ಲಾಸ್‌) ಗಳನ್ನು ಪೂರೈಸಲಾಗುವುದು.
ಮತಗಟ್ಟೆ ವ್ಯಾಪ್ತಿಯ ವಿಕಲಚೇತನರನ್ನು ಗುರುತಿಸಿ ಅವರಿಗೆ ಕಲ್ಪಿಸಲಾಗಿರುವ ವಾಹನ ಮತ್ತು ಚಾಲಕರ ಸಂರ‍್ಕ ಸಂಖ್ಯೆ ಒದಗಿಸಿ ಸ್ಪಷ್ಟವಾದ ಮಾಹಿತಿ ನೀಡಬೇಕು. ಈ ಕರ‍್ಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ನೆರವು ಪಡೆಯಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿಲ್‌ ಕಲೆಕ್ಟರ್‌ಗಳ ಸೇವೆ ಪಡೆಯಬೇಕು. ಸಖಿ ಮತಗಟ್ಟೆಗಳನ್ನು ಸೀರೆ, ಬಲೂನುಗಳಿಂದ ಸುಂದರವಾಗಿ ಅಲಂಕರಿಸಬೇಕು. ಅಲ್ಲಿ ರ‍್ತವ್ಯಕ್ಕೆ ನಿಯೋಜನೆಗೊಂಡಿರುವ ಮಹಿಳಾ ಸಿಬ್ಬಂದಿಗೆ ಉತ್ತರ ರ‍್ನಾಟಕದ ಸಂಸ್ಕೃತಿ ಬಿಂಬಿಸುವ ಸೀರೆ ಪೂರೈಸಬೇಕು ಎಂದರು.
ಜಿಲ್ಲಾ ಪಂಚಾಯತಿ ಮುಖ್ಯಕರ‍್ಯನರ‍್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್‌, ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್‌ ಇಟ್ನಾಳ, ವಿಕಲ ಚೇತನರ ಮತಗಟ್ಟೆಗಳ ನೋಡಲ್‌ ಅಧಿಕಾರಿ ರಾಜಶ್ರೀ ಜೈನಾಪೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನರ‍್ದೇಶಕ ಬಸವರಾಜ ವರವಟ್ಟಿ ಇದ್ದರು.

loading...