ಸಮ್ಮಿಶ್ರ ಸರಕಾರದಲ್ಲಿ ಚಿಕ್ಕೋಡಿ ಜಿಲ್ಲೆ: ಸಿದ್ದರಾಮಯ್ಯ

0
34

ಚಿಕ್ಕೋಡಿ
ಚಿಕ್ಕೋಡಿ ಹಾಗೂ ಗೋಕಾಕನ್ನು ಪ್ರತ್ಯೇಕ ಜಿಲ್ಲೆಯ ಮಾಡುವಂತೆ ಸಾಕಷ್ಟು ಮನವಿಗಳು ಬಂದಿವೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಸಮ್ಮಿಶ್ರ ಸರಕಾರದಲ್ಲಿ ಜಿಲ್ಲಾ ವಿಭಜನೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಭರವಸೆ ನೀಡಿದರು.
ಶುಕ್ರವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಕಾಶ ಹುಕ್ಕೇರಿ ಅವರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಚಿಕ್ಕೋಡಿ‌‌ಯನ್ನು ಜಿಲ್ಲೆಯನ್ನಾಗಿಸುವಂತೆ ಸಾಕಷ್ಟು ಬಾರಿ‌ ಸಂಸದ ಪ್ರಕಾಶ ಹುಕ್ಕೇರಿ ಅವರು ರಾಹುಲ್ ಗಾಂಧಿಗೆ  ಮನವಿ ಮಾಡಿದ್ದಾರೆ. ಆದರೆ  ಈ ಹಿಂದೆ ಚಿಕ್ಕೋಡಿಯ ಜತೆ ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡುವಂತೆ ಹೋರಾಟ ಹಾಗೂ ಮನವಿ ಬಂದಿವೆ. ಈ ಕುರಿತು ಸಮ್ಮಿಶ್ರ ಸರಕಾರದಲ್ಲಿ ಚಿಕ್ಕೋಡಿ ಜಿಲ್ಲೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ‌ ಮತಿಯವಾದ ಬಿಜೆಪಿ, ಇನ್ನೊಂದು ಕಡೆ ಮೈತ್ರಿ ಪಕ್ಷಗಳ‌ ಚುನಾವಣೆ‌ ನಡೆಯುತ್ತಿದೆ. ದೇಶದಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ‌ ಮಾಡಬೇಕು. ನರೇಂದ್ರ ‌ಮೋದಿ‌ ಅವರಿಗೆ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು‌‌ ಅಧಿಕಾರ ದುರುಪಯೋಗ ಪಡೆಸಿಕೊಂಡು ದುರ್ಬಲ ಮಾಡುತ್ತಿದ್ದಾರೆ. ಆದ್ದರಿಂದ ನರೇಂದ್ರ ‌ಮೋದಿ ಗೆದ್ದರೆ ‌ಸರ್ವಾಧಿಕಾರಿಯಾಗುತ್ತಾರೆ ಎಂದು ಆರೋಪಿಸಿದರು.
ಬಿಜೆಪಿಯವರು 27 ಅಭ್ಯರ್ಥಿಯಲ್ಲಿ ಒಂದೇ ಒಂದು ಹಿಂದೂಳಿದ , ಅಲ್ಪಸಂಖ್ಯಾತರಿಗೆ ಟಿಕೆಟ್ ‌ನೀಡಿಲ್ಲ. ಆದರೆ ಮೈತ್ರಿಯಲ್ಲಿ 8 ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ ಎಂದ ಅವರು,  ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರಿಗೆ ನೇರವಾಗಿ ಕೇಳುತ್ತೇನೆ. ನೀವು ಯಾವ ಆಧಾರದ ಮೇಲೆ ಹಿಂದೂಳಿದವರ ಮತ ಕೇಳುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಗ್ಗೆ ಮಾತನಾಡುವ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಅವರ ಬಳಿ ಹೊಗಿ ಕೇಂದ್ರ ಸರಕಾರಕ್ಕೆ ರೈತರ ಮೇಲಿನ ಸಾಲ ಮನ್ನಾ ಮಾಡುವಂತೆ ಹೇಳಿ‌ ಎಂದರೆ ಮೋದಿ ನೋಟ್ ಪ್ರಿಂಟ್ ಮಾಡುವ ಮಶೀನ ಇಟ್ಟಿಲ್ಲ ಎಂದರು. ಇದು ಯಡಿಯೂರಪ್ಪ ಗೆ ನಾಚಿಗೆಯಾಗಬೇಕೆಂದರು.
ರಾಜ್ಯದಲ್ಲಿ ಈ‌ ಹಿಂದೆ ಕಾಂಗ್ರೆಸ್ ಸರಕಾರದ‌ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯೋಜನೆ ತಂದು ಸಾಕಷ್ಟು ಜನಪರ ಯೋಜನೆಯನ್ನು ಜಾರಿಗೆ ತಂದಿದ್ದೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ, ಮಾಜಿ ,ಸಿಎಂ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ ಸೇರಿದಂತೆ ಸಾಕಷ್ಟು ಜನ‌ ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ನರೇಂದ್ರ‌ ಮೋದಿ ಹೇಗೆ ಚೌಕಿದಾರ ಆಗುತ್ತಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿ‌ ಸಂಸದರು ಮಾಡಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿಗಳ‌ ಮುಖ ನೋಡಿ ಮತ ಹಾಕಿ ಎಂದು ಮನವಿ ಮಾಡಿದ್ದರು.
ಸಂಸದ ಪ್ರಕಾಶ ಹುಕ್ಕೇರಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಗಣೇಶ ಹುಕ್ಕೇರಿ ‌ಸೇರಿದ್ದಂತೆ ಇನ್ನಿತರರು ಉಪಸ್ಥಿತರಿದ್ದರು.
———–
ಈಶ್ವರಪ್ಪ ಕುರುಬ ಸಮಜದಾಯದವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದ ನೀನು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು ಉತ್ತಮ.
* ಸಿದ್ದರಾಮಯ್ಯ, ಮಾಜಿ‌ ಸಿಎಂ.
loading...